|
(ದ್ರಮುಕ ಎಂದರೆ ದ್ರಾವಿಡ ಮುನ್ನೇತ್ರ ಕಳಘಂ – ದ್ರಾವಿಡ ಪ್ರಗತಿ ಸಂಘ)
ಕೊಯಮತ್ತೂರು (ತಮಿಳುನಾಡು) – 1998 ರಲ್ಲಿ ನಡೆದ ಸರಣಿ ಬಾಂಬ್ ಸ್ಫೋಟದಲ್ಲಿ 58 ಜನರು ಸಾವನ್ನಪ್ಪಿದ್ದರು ಮತ್ತು 231 ಜನರು ಗಾಯಗೊಂಡಿದ್ದರು. ಈ ಸ್ಫೋಟಗಳ ಅಪರಾಧಿ ಎಸ್.ಎ. ಪಾಷಾ ಕೆಲ ದಿನಗಳ ಹಿಂದೆ ಮೃತಪಟ್ಟಿದ್ದ. ತಮಿಳುನಾಡಿನ ದ್ರಾವಿಡ ಮುನ್ನೇತ್ರ ಕಳಘಂ (ದ್ರಾವಿಡ ಪ್ರಗತಿ ಒಕ್ಕೂಟ) ಸರಕಾರವು ಪಾಷಾನ ಅಂತ್ಯಕ್ರಿಯೆಗೆ ಅನುಮತಿ ನೀಡುವುದರೊಂದಿಗೆ 2 ಸಾವಿರಕ್ಕೂ ಹೆಚ್ಚು ಪೊಲೀಸರನ್ನು ಭದ್ರತೆಗಾಗಿ ನಿಯೋಜಿಸಿತು. ಈ ಅಂತ್ಯಕ್ರಿಯೆಯಲ್ಲಿ ಸಾವಿರಾರು ಮತಾಂಧ ಮುಸ್ಲಿಮರು, ನಾಯಕರು ಮತ್ತು ನಟರು ಭಾಗವಹಿಸಿದ್ದರು. ಭಯೋತ್ಪಾದಕನಿಗೆ ಇಂತಹ ಗೌರವ ನೀಡಿದ್ದಕ್ಕೆ ಭಾಜಪ ವಿರೋಧಿಸಿ, ಪ್ರತಿಭಟನೆ ನಡೆಸಿತು. ಪೊಲೀಸರು ಪ್ರತಿಭಟನಾಕಾರರನ್ನು ಬಂಧಿಸಿದರು.
ಭಾಜಪ, ಹಿಂದೂ ಮುನ್ನಾನಿ ಮತ್ತು ವಿಶ್ವ ಹಿಂದೂ ಪರಿಷತ್ ಪ್ರತಿಭಟನಾ ಮೆರವಣಿಗೆ ನಡೆಸಿದ್ದವು. ಇದರಲ್ಲಿ ನೂರಾರು ಜನರು ಭಾಗವಹಿಸಿದ್ದರು. ಅವರನ್ನು ಪೊಲೀಸರು ಬಂಧಿಸಿದ್ದಾರೆ. ತಮಿಳುನಾಡು ಭಾಜಪ ಪ್ರದೇಶಾಧ್ಯಕ್ಷ ಕೆ. ಅಣ್ಣಾಮಲೈ ಈ ಮಾಹಿತಿಯನ್ನು ಪೋಸ್ಟ್ ಮಾಡಿದ್ದಾರೆ.
ಸಂಪಾದಕೀಯ ನಿಲುವುತಮಿಳುನಾಡಿನಲ್ಲಿ ಹಿಂದೂ ದ್ವೇಷಿ ದ್ರಮುಕ ಸರಕಾರದಿಂದ ಇದಕ್ಕಿಂತ ಭಿನ್ನವಾಗಿ ಏನು ನಡೆಯಬಹುದು ? ಹಿಂದೂ ಧರ್ಮವನ್ನು ಡೆಂಗ್ಯೂ ಮತ್ತು ಮಲೇರಿಯಾ ಎಂದು ಕರೆಯುವವರಿಗೆ ಜಿಹಾದಿ ಭಯೋತ್ಪಾದನೆ ಹತ್ತಿರವಾಗಿದೆ ಎಂಬುದನ್ನು ಗಮನಿಸಬೇಕು ! |