‘ಭಾರತ ನಮ್ಮ ಜನರನ್ನು ನಾಪತ್ತೆ ಮಾಡಿದೆ.'(ಅಂತೆ) – ಬಾಂಗ್ಲಾದೇಶ ಸರಕಾರದ ಆರೋಪ

ಢಾಕಾ (ಬಾಂಗ್ಲಾದೇಶ) – ಶೇಖ ಹಸೀನಾ ಇವರ ಆಡಳಿತದಲ್ಲಿ ಬಾಂಗ್ಲಾದೇಶದಿಂದ ಜನರನ್ನು ನಾಪತ್ತೆಗೊಳಿಸುವುದರಲ್ಲಿ ಭಾರತದ ಕೈವಾಡವಿದೆ ಎಂದು ಮಧ್ಯಂತರ ಸರಕಾರ ಸ್ಥಾಪಿಸಿರುವ ವಿಚಾರಣಾ ಆಯೋಗದಿಂದ ಆರೋಪಿಸಲಾಗಿದೆ. ಸರ್ವೋಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶ ಮೈನುಲ್ ಇಸ್ಲಾಂ ಚೌದರಿ ಇವರ ಅಧ್ಯಕ್ಷತೆಯಲ್ಲಿ ಈ ಆಯೋಗದಲ್ಲಿ ೫ ಸದಸ್ಯರ ಸಮಾವೇಶವಿತ್ತು.

೧. ನಿವೃತ್ತ ನ್ಯಾಯಾಧೀಶ ಮೈನುಲ್ ಇಸ್ಲಾಂ ಚೌದರಿ ಇವರು , ನಾವು ಸಚಿವಾಲಯಕ್ಕೆ ವಿನಂತಿಸುತ್ತೇವೆ ಏನೆಂದರೆ, ಅವರು ಭಾರತೀಯ ಜೈಲಿನಲ್ಲಿ ಇರುವ ಬಾಂಗ್ಲಾದೇಶದ ಪ್ರಜೆಯ ಗುರುತನ್ನು ಪತ್ತೆ ಹಚ್ಚಲು ಎಲ್ಲಾ ರೀತಿಯ ಪ್ರಯತ್ನ ಮಾಡಬೇಕು. ಆಯೋಗಕ್ಕೆ ಬಾಂಗ್ಲಾದೇಶದ ಹೊರಗಿನ ಮಾಹಿತಿ ಪಡೆಯುವುದು ಸಾಧ್ಯವಿಲ್ಲ ಎಂದು ಹೇಳಿದರು.

೨. ಆಯೋಗವು ೨ ಪ್ರಕರಣದ ಮಾಹಿತಿ ನೀಡಿದೆ. ಮೊದಲನೆಯ ಪ್ರಕರಣ ಶುಕ್ರಮಂಜನ ಬಾಲಿ ಇವರದ್ದಾಗಿದ್ದು ಅವರನ್ನು ಬಾಂಗ್ಲಾದೇಶದ ಸರ್ವೋಚ್ಚ ನ್ಯಾಯಾಲಯದ ಪರಿಸರದಿಂದ ಅಪಹರಿಸಲಾಗಿತ್ತು ಮತ್ತು ನಂತರ ಅವರು ಭಾರತದ ಜೈಲಿನಲ್ಲಿ ದೊರೆತರು. ಇನ್ನೊಂದು ಪ್ರಕರಣ ಬಾಂಗ್ಲಾದೇಶದ ನ್ಯಾಷನಲ್ ಲಿಸ್ಟ್ ಪಾರ್ಟಿಯ ನಾಯಕ ಸಲಾಉದ್ದೀನ್ ಅಹಮದ್ ಇವರದಾಗಿದೆ.

೩. ಆಯೋಗದ ಸದಸ್ಯರು ಮತ್ತು ಮಾನವ ಅಧಿಕಾರ ಕಾರ್ಯಕರ್ತ ಸಜ್ಜದ ಹುಸೇನ್ ಇವರು, ಅವರು ಕಾನೂನರೀತಿಯ ಪ್ರಕ್ರಿಯೆ ಅಲ್ಲದೆ ನಾಪತ್ತೆ ಆಗಿರುವ ೧ ಸಾವಿರದ ೬೭೬ ದೂರುಗಳು ದಾಖಲಾಗಿದ್ದವು. ಅದರಲ್ಲಿ ೭೫೮ ರ ತನಿಖೆ ನಡೆಸಲಾಗಿದೆ , ಎಂದು ಹೇಳಿದರು.

ಸಂಪಾದಕೀಯ ನಿಲುವು

ಬಾಂಗ್ಲಾದೇಶದ ಹುರುಳಿಲ್ಲದ ಆರೋಪ !