ದೆಹಲಿ: ಅಕ್ರಮವಾಗಿ ನೆಲೆಸಿದ್ದ ೧೭೫ ಬಾಂಗ್ಲಾದೇಶಿ ನುಸಳುಕೋರರ ಪತ್ತೆ

  • ದೆಹಲಿ ಮಹಾನಗರ ಉಪಾಯುಕ್ತ ಬಿ.ಪಿ. ಭಾರಧ್ವಜ ಇವರಿಂದ ಶಾಲೆಗಳಿಗೆ ಆದೇಶ

  • ಬಾಂಗ್ಲಾದೇಶಿ ಮುಸಲ್ಮಾನರ ಜನನ ಪ್ರಮಾಣ ಪತ್ರ ನೀಡಲೂ ನಿರ್ಬಂಧ

ನವದೆಹಲಿ – ಯೋಗ್ಯ ದಾಖಲೆಗಳಿಲ್ಲದೆ ದೆಹಲಿಯಲ್ಲಿ ವಾಸಿಸುತ್ತಿರುವ ಬಾಂಗ್ಲಾದೇಶಿ ವಲಸಿಗರ ವಿರುದ್ಧ ಪೊಲೀಸರಿಂದ ತೀವ್ರ ಕ್ರಮ ಕೈಗೊಳ್ಳಲಾಗಿದೆ. ವಲಸಿಗರ ದಾಖಲೆಗಳ ಪರಿಶೀಲನೆ ಮಾಡುವುದಕ್ಕಾಗಿ ಪೊಲೀಸರು ಅಭಿಯಾನ ಆರಂಭಿಸಿದ್ದಾರೆ. ಅಕ್ರಮವಾಗಿ ವಾಸಿಸುತ್ತಿರುವ ಬಾಂಗ್ಲಾದೇಶಿ ನುಸುಳುಕೋರರ ಗುರುತು ಪತ್ತೆ ಹಚ್ಚುವುದಕ್ಕಾಗಿ ಪೊಲೀಸರು ಮನೆ-ಮನೆಗೆ ಹೋಗಿ ಶೋಧ ನಡೆಸುತ್ತಿದ್ದಾರೆ. ದೆಹಲಿಯ ಹೊರಗಿನ ಜಿಲ್ಲೆಯ ಗಡಿಯಲ್ಲಿ ವಾಸಿಸುವ ೧೭೫ ವ್ಯಕ್ತಿಗಳು ಶಂಕಿತರೆಂದು ಸದ್ಯ ಪತ್ತೆಹಚ್ಚಲಾಗಿದೆ. ಈ ವಲಸಿಗರನ್ನು ತೀವ್ರ ವಿಚಾರಣೆಗೆ ಒಳಪಡಿಸಲಾಗಿದ್ದು ಅವರ ದಾಖಲೆಗಳನ್ನು ಕೂಡ ಸೂಕ್ಷ್ಮವಾಗಿ ಪರಿಶೀಲನೆ ಮಾಡಲಾಗುತ್ತಿದೆ. ಸಂಬಂಧಿತ ಪ್ರದೇಶದಲ್ಲಿ ಸ್ಥಳೀಯ ಪೊಲೀಸರ ಜೊತೆಗೆ ಸಮನ್ವಯ ನಡೆಸಿ ಈ ವಲಸಿಗರ ಗುರುತು ಪತ್ತೆಗಾಗಿ ತಂಡಗಳನ್ನು ರಚಿಸಲಾಗಿದೆ. ಈ ವಿಶೇಷ ತಂಡಗಳನ್ನು ವಲಸಿಗರ ಮೂಲ ಪ್ರದೇಶಕ್ಕೆ ತನಿಖೆಗೆ ಕಳುಹಿಸಲಾಗಿದೆ.

ಸಂಪಾದಕೀಯ ನಿಲುವು

ಬಾಂಗ್ಲಾದೇಶಿ ನುಸುಳು ಕೋರರ ಸಮಸ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದ್ದು ಇದನ್ನು ಬುಡಸಹಿತ ನಿವಾರಿಸಲು ಈಗ ಸಮರೋಪಾದಿಯಲ್ಲಿ ಪ್ರಯತ್ನಿಸಬೇಕು !