ಕಾನಪುರದಲ್ಲಿ ಮುಸಲ್ಮಾನ ಬಾಹುಳ್ಯ ಪ್ರದೇಶದಲ್ಲಿ ಮುಚ್ಚಿರುವ ಮತ್ತು ಅತಿಕ್ರಮಣ ವಾಗಿರುವ ೧೨೦ ದೇವಸ್ಥಾನಗಳು !

ಮಹಿಳಾ ಮಹಾಪೌರರು ಅತಿಕ್ರಮಣದಿಂದ ಮುಕ್ತಗೊಳಿಸಿರುವ ೫ ದೇವಸ್ಥಾನಗಳು

ಕಾನಪುರ (ಉತ್ತರಪ್ರದೇಶ) – ನಗರದ ಮಹಾಪೌರ ಪ್ರಮೀಳಾ ಪಾಂಡೆ ಇವರು ರಾಜ್ಯದ ಸಂಬಲ, ಬರೇಲಿ ಮತ್ತು ಅಲಿಗಡ್ ಇಲ್ಲಿಯ ಮುಸಲ್ಮಾನ ಬಾಹುಳ್ಯ ಪ್ರದೇಶದಲ್ಲಿ ಇರುವ ಹಿಂದೂ ದೇವಸ್ಥಾನಗಳು ದೊರೆತನಂತರ ನಗರದಲ್ಲಿನ ಮುಸಲ್ಮಾನ ಬಾಹುಳ್ಯ ಪ್ರದೇಶಕ್ಕೆ ಹೋಗಿ ಪರಿಶೀಲನೆ ನಡೆಸಿದರು. ಅವರು ಈ ಸ್ಥಳದಲ್ಲಿ ೫ ದೇವಸ್ಥಾನಗಳು ಮುಚ್ಚಿದ್ದವು ಮತ್ತು ಜೀರ್ಣಾವಸ್ಥೆಯಲ್ಲಿರುವುದು ಕಂಡುಬಂದಿತು . ಕೆಲವು ಸ್ಥಳಗಳಲ್ಲಿ ಬಿರಿಯಾನಿ ಮಾರಾಟದ ಅಂಗಡಿಗಳ ಕೂಡ ನಡೆಸಲಾಗುತ್ತಿದ್ದವು. ಈಗ ಅಲ್ಲಿಯ ಅಕ್ರಮ ಅತಿಕ್ರಮಣ ತೆರವುಗೊಳಿಸಿ ಸ್ವಚ್ಛತಾ ಕಾರ್ಯ ನಡೆಯುತ್ತಿದೆ. ಹಾಗೂ ಅಲ್ಲಿ ಪ್ರತಿ ದಿನ ಪೂಜೆ ಮಾಡಲು ಸಹ ಪ್ರಾರಂಭ ಮಾಡಲಾಗಿದೆ. ನಗರದಲ್ಲಿ ಇಂತಹ ದೇವಸ್ಥಾನಗಳ ಸಂಖ್ಯೆ ೧೨೦ ಕ್ಕಿಂತಲೂ ಹೆಚ್ಚಾಗಿವೆ ಎಂದು ಹೇಳಲಾಗಿದೆ.

೧. ಡಿಸೆಂಬರ್ ೨೧ ರಂದು ಮಹಾಪೌರ ಪ್ರಮೀಳ ಪಾಂಡೆ ಪೊಲೀಸ ಪಡೆಯ ಸಹಿತ ಮುಸಲ್ಮಾನ ಬಾಹುಳ್ಯ ಬೇಕನಗಂಜಕ್ಕೇ ತಲುಪಿದರು. ಅಲ್ಲಿ ಜೂನ್ ೨೦೨೨ ರಿಂದ ಭಾಜಪದ ನಾಯಕಿ ನೂಪುರ್ ಶರ್ಮಾ ಇವರು ಪೈಗಂಬರನ ಕುರಿತಾಗಿ ಕಥಿತ ಅವಮಾನಕಾರಿ ಹೇಳಿಕೆಯ ನಿಷೇಧವಾಗಿ ಮುಸಲ್ಮಾನರು ಪೊಲೀಸರ ಮೇಲೆ ದಾಳಿ ನಡೆಸಿದ್ದರು. ಅಲ್ಲಿ ಅನೇಕ ದೇವಸ್ಥಾನಗಳಲ್ಲಿ ಅಕ್ರಮ ಧಂದೆ ನಡೆಯುತ್ತಿರುವ ಮಾಹಿತಿ ಪ್ರಮೀಳಾ ಪಾಂಡೆ ಇವರಿಗೆ ದೊರೆತಿತ್ತು.

೨. ಕೇವಲ ೩೦ ನಿಮಿಷದಲ್ಲಿ ಪ್ರಮೀಳಾ ಪಾಂಡೆ ಇವರು ಇಂತಹ ಒಟ್ಟು ೫ ದೇವಸ್ಥಾನಗಳನ್ನು ಹುಡುಕಿ ತೆಗೆದರು ಅವುಗಳಲ್ಲಿ ಅಕ್ರಮ ಧಂದೆ ಮತ್ತು ಜೀರ್ಣ ಸ್ಥಿತಿಯಲ್ಲಿ ಇರುವುದು ಕಂಡುಬಂದಿತು. ಇದರಲ್ಲಿ ರಾಮ ಜಾನಕಿ ದೇವಸ್ಥಾನ ಮೊದಲ ಸ್ಥಾನದಲ್ಲಿದೆ. ಈ ದೇವಸ್ಥಾನ ಕಾನಪುರದಲ್ಲಿ ೨೦೨೨ ರಲ್ಲಿನ ಹಿಂಸಾಚಾರದಲ್ಲಿನ ಮುಖ್ಯ ಆರೋಪಿ ಮುಖ್ತಾರ್ ಬಾಬಾ ಬಿರಿಯಾನಿ ಆತನ ವಶದಲ್ಲಿ ಇತ್ತು. ದೇವಸ್ಥಾನದ ಹಿಂದೆ ಬಿರಿಯಾನಿ ತಯಾರಿಸಲಾಗುತ್ತಿತ್ತು. ಸ್ಥಳೀಯ ಜನರ ಹೇಳಿಕೆಯ ಪ್ರಕಾರ ೧೦೦ ಸ್ಕ್ವೇರ್ ಯಾರ್ಡನಲ್ಲಿ ಇರುವ ಈ ದೇವಸ್ಥಾನದ ಸ್ವಲ್ಪ ಭಾಗವೇ ಈಗ ಉಳಿದಿದೆ.

೩. ಇನ್ನೊಂದು ದೇವಸ್ಥಾನ ರಾಧಾಕೃಷ್ಣರದಾಗಿದೆ. ಈ ದೇವಸ್ಥಾನ ಬಹಳ ಜೀರ್ಣಾವಸ್ಥೆಯಲ್ಲಿ ದೊರೆತಿದೆ. ಈ ಪರಿಸರದಲ್ಲಿ ಮಹಾದೇವ ಶಿವನ ಮೂರನೇಯ ದೇವಸ್ಥಾನ ದೊರೆತಿದೆ. ದೇವಸ್ಥಾನದಲ್ಲಿ ಕೇವಲ ಶಿವಲಿಂಗದ ಅವಶೇಷಗಳು ದೊರೆತಿವೆ . ದೇವಸ್ಥಾನದ ಹಿಂದೆ ನಿವಾಸಿ ಕಾಲೋನಿ ಇದೆ . ಶಿವ ದೇವಸ್ಥಾನದ ನಂತರ ಮಹಾಪೌರರು ಮತ್ತು ಜೊತೆಗಿನ ಆಡಳಿತ ತಂಡಕ್ಕೆ ಇನ್ನೊಂದು ರಾಧಾಕೃಷ್ಣ ದೇವಸ್ಥಾನ ದೊರೆತಿದೆ. ಈ ದೇವಸ್ಥಾನದಲ್ಲಿ ಮುಚ್ಚಿರುವ ಬಾಗಿಲು ಕಂಡು ಬಂದಿದೆ. ಬಾಗಿಲು ತೆಗೆದಾಗ ಒಳಗೆ ಕಸ ತುಂಬಿರುವುದು ಕಂಡು ಬಂದಿದೆ. ಮಹಾಪೌರ ಪ್ರಮೀಳಾ ಇವರು ಎಲ್ಲಾ ಅಕ್ರಮ ಅತಿಕ್ರಮಣಕಾರರಿಗೆ ತತ್ಕಾಲ ಅವುಗಳನ್ನು ಮುಕ್ತಗೊಳಿಸುವ ಆದೇಶ ನೀಡಿದ್ದಾರೆ.

೪. ಎಲ್ಲಾ ದೇವಸ್ಥಾನಗಳ ಶೋಧ ನಡೆಸಿದ ನಂತರ ಅಲ್ಲಿ ಜೀರ್ಣೋದ್ಧಾರ ನಡೆಸಿ ಹಿಂದಿನಂತೆ ವಿಧಿ ಪೂರ್ವಕ ಪೂಜೆ ಆರಂಭಿಸಲಾಗುವುದು, ಎಂದು ಮಹಾಪೌರರು ಘೋಷಿಸಿದರು. ದೇವಸ್ಥಾನದಲ್ಲಿನ ಮೂರ್ತಿಗಳು ಎಲ್ಲಿ ಹೋದವು, ಇದರ ವಿಚಾರಣೆ ನಡೆಸಲಾಗುವುದೆಂದು ಕೂಡ ಮಹಾಪೌರರು ಹೇಳಿದರು.

೫ . ಖಾನಾಪುರ ಮಹಾನಗರ ಪಾಲಿಕೆಯ ಸಮೀಕ್ಷೆಯ ಪ್ರಕಾರ ನಗರದಲ್ಲಿನ ಮುಸಲ್ಮಾನ ಬಾಹುಳ್ಯ ಪ್ರದೇಶದಲ್ಲಿ ಸುಮಾರು ೧೨೦ ದೇವಸ್ಥಾನಗಳು ಮುಚ್ಚಿವೆ. ಆಡಳಿತದ ಈ ಕ್ರಮದ ನಂತರ ಮುಸಲ್ಮಾನರು ಅಕ್ರಮ ಮಾಡುವವರಲ್ಲ, ಅವರು ದೇವಸ್ಥಾನದ ರಕ್ಷಕರೆಂದು ಹೇಳಲು ಆರಂಭಿಸಿದ್ದಾರೆ.

೬. ರಾಮ ಜಾನಕಿ ದೇವಸ್ಥಾನದ ಹೊರಗೆ ವಾಸಿಸುವ ನಫೀಸ್ ಇವನು ಈ ಕುರಿತು, ನೀವು ದೇವಸ್ಥಾನ ತೆರೆಯಬಹುದು. ಅದಕ್ಕೂ ನಮಗು ಯಾವುದೇ ಸಂಬಂಧವಿಲ್ಲ. ದೇವಸ್ಥಾನ ಬೇರೆ ಮನೆ ಬೇರೆ ಇರುವುದು. ಈ ಪರಿಸರ ಹಿಂದೆ ಹಳೆಯ ಸರಾಫ್ ಮಾರುಕಟ್ಟೆವಾಗಿತ್ತು. ಇಲ್ಲಿ ಎಲ್ಲಾ ಹಿಂದೂ ಬಾಂಧವರು ವಾಸಿಸುತ್ತಿದ್ದರು. ನಂತರ ಅವರು ಹಿಂದೂ ಬಾಹುಳ್ಯ ಪ್ರದೇಶಕ್ಕೆ ಹೋದರು.

೭. ೧೯೯೨ ರಲ್ಲಿನ ಗಲಬೆಯಲ್ಲಿ ಎಲ್ಲಾ ದೇವಸ್ಥಾನಗಳು ಧ್ವಂಸವಾದವು. ಆ ಸಮಯದಲ್ಲಿ ನಾವು ಈ ದೇವಸ್ಥಾನಗಳ ರಕ್ಷಣೆ ಮಾಡಿದ್ದೇವೆ ಎಂದು ಅವನು ದಾವೇ ಮಾಡಿದನು.

ಸಂಪಾದಕೀಯ ನಿಲುವು

ಕಾನಪುರದ ಭಾಜಪದ ಮಹಿಳಾ ಮಹಾಪೌರರು ಸ್ವತಃ ನೇತೃತ್ವ ವಹಿಸಿ ಮುಸಲ್ಮಾನ ಬಾಹುಳ್ಯ ಪ್ರದೇಶದಲ್ಲಿನ ದೇವಸ್ಥಾನಗಳನ್ನು ಮುಕ್ತಗೊಳಿಸಿದರು. ಇದು ಶ್ಲಾಂಘನೀಯವಾಗಿದೆ. ಇತರ ನಗರಗಳಲ್ಲಿ, ಹಾಗೂ ರಾಜ್ಯಗಳಲ್ಲಿನ ಪೊಲೀಸರು ಆಡಳಿತ ಮತ್ತು ರಾಜಕಾರಣಿಗಳು ನಿಷ್ಕ್ರಿಯರಾಗಿದ್ದಾರೆಯೇ ? ಇಲ್ಲಿಯ ಹಿಂದೂ ಸಂಘಟನೆಗಳು ನೇತೃತ್ವ ವಹಿಸಿ ಮುಸಲ್ಮಾನ ಬಾಹುಳ್ಯ ಪ್ರದೇಶದಲ್ಲಿನ ಮುಚ್ಚಿರುವ ದೇವಸ್ಥಾನಗಳನ್ನು ಹುಡುಕಿ ಅದರ ರಕ್ಷಣೆಗಾಗಿ ಸರಕಾರದ ಮೇಲೆ ಒತ್ತಡ ನಿರ್ಮಾಣ ಮಾಡುವುದು ಅಗತ್ಯವಾಗಿದೆ.