ನವ ದೆಹಲಿ – ಸಂಸತ್ತಿನ ಚಳಿಗಾಲದ ಅಧಿವೇಶನ ಡಿಸೆಂಬರ್ 20 ರಂದು ಗದ್ದಲದಲ್ಲಿ ಕೊನೆಗೊಂಡಿತು. ಈ ಅಧಿವೇಶನ 20 ದಿನಗಳ ಕಾಲ ನಡೆಯದ ಕಾರಣ ಅಂದಾಜು ರೂಪಾಯಿ 84 ಕೋಟಿ ನಷ್ಟ ಉಂಟಾಗಿದೆ. ಸಂಸತ್ತಿನ ಕಾರ್ಯಕಲಾಪ ನಿಮಿಷಕ್ಕೆ ಸುಮಾರು ರೂಪಾಯಿ 2 ಲಕ್ಷ 50 ಸಾವಿರ ವೆಚ್ಚವಾಗುತ್ತದೆ.
ಲೋಕಸಭೆಯಲ್ಲಿ ಕೇವಲ 61 ಗಂಟೆ 55 ನಿಮಿಷಗಳು ಮತ್ತು ರಾಜ್ಯಸಭೆಯಲ್ಲಿ 43 ಗಂಟೆ 39 ನಿಮಿಷಗಳು ಕಾರ್ಯಕಲಾಪ ನಡೆದವು. ಇದು ಬಹಳ ಕಡಿಮೆ ಕಾಲಾವಧಿಯಾಗಿದೆ. ಇದರರ್ಥ ಜನರಿಗಾಗಿ ಇದ್ದ ಮಹತ್ವದ ವಿಷಯಗಳನ್ನು ಸಂಸತ್ತಿನಲ್ಲಿ ಸಮರ್ಪಕವಾಗಿ ಚರ್ಚಿಸಲು ಸಾಧ್ಯವಾಗಲಿಲ್ಲ.
ಸಂಪಾದಕೀಯ ನಿಲುವುಸಾರ್ವಜನಿಕರ ಹಣವನ್ನು ಗದ್ದಲ ಮಾಡುತ್ತಿರುವ ಪ್ರತಿಯೊಬ್ಬ ಜನಪ್ರತಿನಿಧಿಯಿಂದಲೂ ವಸೂಲಿ ಮಾಡಿದರೆ ಮಾತ್ರ ಅವರಿಗೆ ಅರಿವಾಗುತ್ತದೆ ! ಆದರೂ ಅವರು ಇನ್ನೂ ಗದ್ದಲ ಮಾಡುತ್ತಿದ್ದರೆ, ಅವರ ಸಂಸತ್ತಿನ ಸದಸ್ಯತ್ವವನ್ನು ರದ್ದುಪಡಿಸುವ ಕಠಿಣ ನಿರ್ಧಾರವನ್ನು ತೆಗೆದುಕೊಳ್ಳುವುದು ಈಗ ಆವಶ್ಯಕವಾಗಿದೆ ! ಹೀಗೆ ಮಾಡುವುದರಿಂದ ಸಂಸತ್ತಿನ ಮಹತ್ವ ಶಾಶ್ವತವಾಗಿರಲಿದೆ. |