ಸಾಹಿತ್ಯ ಸಮ್ಮೇಳನದಲ್ಲಿ ಮುಸ್ಲೀಮರ ಪುಸ್ತಕ ಮಳಿಗೆ; ಮತಾಂತರದ ಹುನ್ನಾರವೇ ?

ಮಂಗಳೂರು – 20.12.2024 ರಂದು ಮಂಡ್ಯದಲ್ಲಿ ಅದ್ಧೂರಿಯಾಗಿ ಆರಂಭವಾಗಿರುವ 87 ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ವಿವಿಧ ರೀತಿಯ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಿದೆ, ಈ ಕಾರ್ಯಕ್ರಮದಲ್ಲಿನ ಒಂದು ಭಾಗವಾದ ಪುಸ್ತಕ ಮೇಳದಲ್ಲಿ ಒಮ್ಮಿಂದೊಮ್ಮೆಲೆ ಗದ್ದಲ ಆರಂಭವಾಯಿತು, ಸಾಹಿತ್ಯ ಸಮ್ಮೇಳನದಲ್ಲಿ ಇಸ್ಲಾಂ ಧರ್ಮ ಪ್ರಸಾರ ಮಾಡಲು ಕೆಲ ವ್ಯಕ್ತಿಗಳಿಗೆ ಮಳಿಗೆಗಳನ್ನು ನೀಡಲಾಗಿದೆ. ಈ ಮಳಿಗೆಯಲ್ಲಿ ಪ್ರವಾದಿ ಮುಹಮ್ಮದ್ ಯಾರು ?, ನಮಾಜ್ ಅನ್ನು ಹೇಗೆ ಮಾಡಬೇಕು ? ಎಂಬ ಪುಸ್ತಕಗಳನ್ನು ಉಚಿತವಾಗಿ ಹಂಚಲಾಗುತ್ತಿದೆ, ಇದು ಮತಾಂತರಕ್ಕೆ ಕಾರಣವಾಗಬಹುದು ಎಂದು ವ್ಯಕ್ತಿಯು ಆರೋಪಿಸಿದ್ದಾರೆ. ಜೊತೆಗೆ ಈ ಘಟನೆಯ ಚಿತ್ರೀಕರಣವನ್ನೂ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಪ್ರಸಾರ ಮಾಡಿದ್ದಾರೆ. ಆದರೆ ಮಳಿಗೆಯವರು ಈ ಆರೋಪವನ್ನು ತಳ್ಳಿ ಹಾಕಿದ್ದಾರೆ.