೪೦ ವರ್ಷಗಳ ಹಿಂದೆ ಬರೇಲಿ (ಉತ್ತರಪ್ರದೇಶ)ಯಲ್ಲಿ ಮುಸಲ್ಮಾನರು ಕಬಳಿಸಿದ್ದ ದೇವಸ್ಥಾನದ ಮೇಲೆ ಹಿಂದುಗಳಿಂದ ಕೇಸರಿ ಧ್ವಜ ಹಾರಾಟ !

ಬರೇಲಿ (ಉತ್ತರಪ್ರದೇಶ) – ಇಲ್ಲಿ ಕೆಲವು ದಿನಗಳ ಹಿಂದೆ ಅನೇಕ ವರ್ಷಗಳಿಂದ ಮುಚ್ಚಿರುವ ಹಿಂದೂ ದೇವಸ್ಥಾನ ಪತ್ತೆಯಾಗಿತ್ತು. ಆ ದೇವಸ್ಥಾನದ ಮೇಲೆ ಇಲ್ಲಿ ಕಾವಲಗಾರನೆಂದು ಎಂದು ನೇಮಿಸಿರುವ ವಾಜಿದ್ ಅಲಿ ತನ್ನ ವಶದಲ್ಲಿಟ್ಟುಕೊಂಡಿದ್ದನು. ಅವನು ದೇವಸ್ಥಾನಕ್ಕೆ ಬರುವ ಭಕ್ತರನ್ನು ತಡೆದನು ಮತ್ತು ಮೂರ್ತಿಗಳನ್ನು ಎಸೆದಿದ್ದನು. ಕಳೆದ ೪೦ ವರ್ಷಗಳ ಹಿಂದೆ ಅವನು ಈ ದೇವಸ್ಥಾನ ಕಬಳಿಸಿದ್ದನು. ಈಗ ಹಿಂದೂ ಸಂಘಟನೆಗಳಿಂದ ಇದು ಬಹಿರಂಗವಾದ ನಂತರ ಇಲ್ಲಿ ಹಾರಿಸಿದ್ದ ಇಸ್ಲಾಮಿ ಧ್ವಜ ತೆಗೆದು ಕೇಸರಿ ಧ್ವಜ ಹಾರಿಸಿದರು. ಹಾಗೂ ಆಡಳಿತದಿಂದ ದೇವಸ್ಥಾನ ಕಬಳಿಸಿರುವ ಪ್ರಕರಣದಲ್ಲಿ ವಿಚಾರಣೆ ನಡೆಸಿ ಅಲಿಗೆ ದೇವಸ್ಥಾನ ಮತ್ತು ಮನೆಯನ್ನು ತೆರವುಗೊಳಿಸುವಂತೆ ನೋಟಿಸ್ ಜಾರಿ ಮಾಡಿದೆ.

ಸ್ಥಳೀಯ ರಾಕೇಶ ಸಿಂಹ ಇವರ ಹೇಳಿಕೆಯ ಪ್ರಕಾರ ಅವನ ಪೂರ್ವಜರು ಮಹಾರಾಣಿ ಗಂಗಾ ದೇವಸ್ಥಾನವನ್ನು ಈ ಸ್ಥಳದಲ್ಲಿ ಕಟ್ಟಿದ್ದರು. ಅದರ ನಂತರ ಈ ದೇವಸ್ಥಾನದಲ್ಲಿ ಅನೇಕ ದೇವತೆಗಳ ಮೂರ್ತಿಗಳ ವಿಧಿವತ್ತಾಗಿ ಸ್ಥಾಪಿಸಲಾಗಿದ್ದವು. ಕಡಿಮೆ ಅವಧಿಯಲ್ಲೇ ಈ ದೇವಸ್ಥಾನದ ಸುತ್ತಮುತ್ತಲಿನ ಹಿಂದುಗಳ ಶ್ರದ್ಧೆಯ ಕೇಂದ್ರವಾಗಿತ್ತು. ಇಲ್ಲಿ ನಿಯಮಿತ ಪೂಜಾರ್ಚನೆ ನಡೆಯುತ್ತಿತ್ತು; ಆದರೆ ಸುಮಾರು ೫೦ ವರ್ಷಗಳ ಹಿಂದೆ ಈ ದೇವಸ್ಥಾನದಲ್ಲಿ ಕಟ್ಟಿರುವ ಕೋಣೆ ಸರಕಾರಿ ಸಂಸ್ಥೆಗೆ ಬಾಡಿಗೆಗೆ ನೀಡಲಾಗಿತ್ತು. ಈ ಸಂಸ್ಥೆಯವರು ವಾಜಿದ್ ಅಲಿ ಇವನನ್ನು ಕಾವಲಗಾರನೆಂದು ಉಸ್ತುವಾರಿಗಾಗಿ ನೇಮಿಸಿದ್ದರು. ಅವನು ಇಲ್ಲಿ ಸ್ಥಾಪಿಸಿರುವ ಮೂರ್ತಿಗಳನ್ನು ನಿಧಾನವಾಗಿ ನಾಪತ್ತೆಗೊಳಿಸಿ, ನಿಧಾನವಾಗಿ ಸಂಪೂರ್ಣ ದೇವಸ್ಥಾನವನ್ನು ಹಿಡಿತಕ್ಕೆ ಪಡೆದನು.