ಮತಾಂತರವನ್ನು ನಿಷೇಧಿಸಲು ಕೇಂದ್ರ ಕಾನೂನಿನ ಸಹಿತ ಹವಾಲಾ ಮತ್ತು ಕಪ್ಪು ಹಣದ ಮೇಲೆ ನಿರ್ಬಂಧದ ಅಗತ್ಯವಿದೆ ! – ನ್ಯಾಯವಾದಿ ಅಶ್ವಿನಿ ಉಪಾಧ್ಯಾಯ, ಸರ್ವೋಚ್ಚ ನ್ಯಾಯಾಲಯ
ಮತಾಂತರದ ಸಮಸ್ಯೆಯು ಭಾರತದ ಸ್ವಾತಂತ್ರ್ಯಪೂರ್ವದಿಂದಲೇ ಇದೆ. ವಿದೇಶಿ ಆಕ್ರಮಣಕಾರರು ಭಾರತವನ್ನು ಕೇವಲ ಅಧಿಕಾರವನ್ನುಗಳಿಸಲು ಮಾತ್ರವಲ್ಲ, ಬದಲಾಗಿ ಭಾರತವನ್ನು ‘ಗಝವಾ-ಎ-ಹಿಂದ್’ (ಇಸ್ಲಾಮಿಕ್ ರಾಜ್ಯ) ವನ್ನಾಗಿ ಮಾಡಲು ಆಕ್ರಮಣ ಮಾಡಿದ್ದರು. ಇಂದು ಮತಾಂತರಕ್ಕಾಗಿ ವಿದೇಶದಿಂದ ‘ಹವಾಲಾ’ ಮತ್ತು ‘ಕಪ್ಪು ಹಣ’ಗಳ ಮಾಧ್ಯಮದಿಂದ ದೊಡ್ಡ ಪ್ರಮಾಣದಲ್ಲಿ ಹಣ ಬರುತ್ತಿದೆ. ಕೇವಲ ಮಿಷನರಿ-ಮತಾಂಧರು ಮಾತ್ರವಲ್ಲ; ನಕ್ಸಲರು, ಮಾವೋವಾದಿಗಳು, ಪ್ರತ್ಯೇಕತಾವಾದಿಗಳು ಮತ್ತು ಭಯೋತ್ಪಾದಕರಿಗೆ ಹವಾಲಾದ ಮೂಲಕ ಹಣವನ್ನು ಎಲ್ಲೆಡೆಗಳಲ್ಲಿ ತಲುಪಿಸಲಾಗುತ್ತಿದೆ. ಇದರಿಂದ, ‘ಹವಾಲಾ’ ಮತ್ತು ‘ಕಪ್ಪು ಹಣ’ದಿಂದ ದೇಶಕ್ಕೆ ದೊಡ್ಡ ಅಪಾಯ ಉದ್ಭವಿಸಿದೆ. ಮತಾಂತರವನ್ನು ನಿಜವಾದ ಅರ್ಥದಲ್ಲಿ ನಿಷೇಧಿಸಬೇಕಾದರೆ, ಈ ‘ಹವಾಲಾ’ ಮತ್ತು ‘ಕಪ್ಪು ಹಣ’ ನಿಲ್ಲಿಸಲು ೧೦೦ ರೂಪಾಯಿಗಿಂತ ಮೇಲಿನ ನೋಟುಗಳನ್ನು ಚಾಲನೆಯಲ್ಲಿ ತರಬಾರದು, ಅದೇರೀತಿ ಮತಾಂತರದ ವಿರುದ್ಧ ಭಾರತಿಯ ದಂಡ ಸಂಹಿತೆಯಲ್ಲಿ ಕಠೋರವಾದ ಕಲಂಗಳನ್ನು ಸೇರಿಸಬೇಕು. ಅದರಲ್ಲಿ ೧೦ ರಿಂದ ೨೦ ವರ್ಷಗಳ ಜೈಲು ಶಿಕ್ಷೆ ಮತ್ತು ಆಸ್ತಿ ಮುಟ್ಟುಗೋಲು ಹಾಕುವುದು ಸಹ ಒಳಗೊಂಡಿರಬೇಕು, ಎಂದು ಸರ್ವೋಚ್ಚ ನ್ಯಾಯಾಲಯದ ನ್ಯಾಯವಾದಿ ಅಶ್ವಿನಿ ಉಪಾಧ್ಯಾಯ ಇವರು ಹೇಳಿದರು. ‘ಹಿಂದೂ ಜನಜಾಗೃತಿ ಸಮಿತಿ’ ಆಯೋಜಿಸಿದ್ದ ‘ಮತಾಂತರದ ಹೆಚ್ಚುತ್ತಿರುವ ಸಮಸ್ಯೆ : ಅದಕ್ಕೆ ಉಪಾಯವೇನು ?’, ಎಂಬ ‘ಆನ್‌ಲೈನ್ ವಿಶೇಷ ಚರ್ಚಾಗೋಷ್ಠಿ’ಯಲ್ಲಿ ಅವರು ಮಾತನಾಡುತ್ತಿದ್ದರು. ಈ ಕಾರ್ಯಕ್ರಮವನ್ನು ಸಮಿತಿಯ Hindujagruti.org ಈ ಜಾಲತಾಣದಲ್ಲಿ ಹಾಗೂ ಯೂಟ್ಯೂಬ್ ಮತ್ತು ಟ್ವಿಟರ್ ಮೂಲಕ ೩೮೦೦ ಜನರು ಪ್ರತ್ಯಕ್ಷ ವೀಕ್ಷಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಉತ್ತರಪ್ರದೇಶದ ‘ಇಂಡಿಕ್ ಅಕಾಡೆಮಿ’ಯ ಸಂಯೋಜಕರಾದ ಶ್ರೀ. ವಿಕಾಸ ಸಾರಸ್ವತ ಅವರು, ಮತಾಂತರ ನಿಷೇಧ ಕಾನೂನು ಅನೇಕ ರಾಜ್ಯಗಳಲ್ಲಿ ಇದ್ದರೂ ಯಾವುದೇ ಮಿಷನರಿಗಳ ವಿರುದ್ಧ ಕಠಿಣ ಕ್ರಮ ಕೈಗೊಂಡಿಲ್ಲ. ಮತಾಂಧರು ಇತರ ಅಕ್ರಮ ಚಟುವಟಿಕೆಗಳಲ್ಲಿ ಭಾಗಿಯಾಗಿರುವುದು ಕಂಡುಬಂದರೂ ಅವರ ವಿರುದ್ಧ ಕ್ರಮ ಕೈಗೊಳ್ಳಲು ಸರಕಾರ ಮತ್ತು ಪೊಲೀಸರು ಧೈರ್ಯ ಮಾಡುವುದಿಲ್ಲ. ಮತಾಂತರ ಹೇಗೆ ಮಾಡಬೇಕು, ಅದಕ್ಕಾಗಿ ವಿದೇಶದಲ್ಲಿ ವಿವಿಧ ವಿಧಾನಗಳ ಪ್ರಗತ ಪ್ರಶಿಕ್ಷಣ ನೀಡಲಾಗುತ್ತದೆ. ಇಂತಹವುಗಳನ್ನು ಎದುರಿಸಲು ಕೇವಲ ಮತಾಂತರ ನಿಷೇಧ ಕಾನೂನನ್ನು ಅವಲಂಬಿಸಿದರೆ ಸಾಕಾಗುವುದಿಲ್ಲ. ಕಾನೂನಿನಿಂದ ತಪ್ಪಿಸಿಕೊಳ್ಳುವ ಮಾರ್ಗಗಳನ್ನು ಹುಡುಕಿ ತೆಗೆಯಲಾಗುತ್ತದೆ. ಅದರ ಬದಲಾಗಿ ಹಿಂದೂ ಧರ್ಮದ ಮಿಶನರಿಗಳನ್ನು ತಯಾರಿಸಬೇಕು. ಮತಾಂತರಕ್ಕೆ ಮತಾಂತರದಿಂದಲೇ ಉತ್ತರಿಸಬೇಕು ಎಂದು ಹೇಳಿದರು.
ಈ ಸಮಯದಲ್ಲಿ ಹಿಂದೂ ಜನಜಾಗೃತಿ ಸಮಿತಿಯ ಆಂಧ್ರಪ್ರದೇಶದ ಸಮನ್ವಯಕರಾದ ಶ್ರೀ. ಚೇತನ ಜನಾರ್ಧನ ಅವರು ಮಾತನಾಡಿ, ಮತಾಂತರದಿಂದಾಗಿ ಇಂದು ದೇಶದ ೭ ರಾಜ್ಯಗಳಲ್ಲಿ ಹಿಂದೂಗಳು ಅಲ್ಪಸಂಖ್ಯಾತರಾಗಿದ್ದಾರೆ ಕೊರೊನಾ ಮಹಾಮಾರಿಯ ಸಮಯದಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಹಿಂದೂಗಳನ್ನು ಮತಾಂತರಗೊಳಿಸಲಾಯಿತು ಎಂದು ಕ್ರೈಸ್ತ ಮಿಷನರಿಗಳು ಬಹಿರಂಗವಾಗಿ ಹೇಳುತ್ತಿದ್ದಾರೆ. ಆಂಧ್ರಪ್ರದೇಶದಲ್ಲಿ, ಓರ್ವ ಮತಾಂತರಗೊಂಡ ವ್ಯಕ್ತಿಯು ೧೦೦ ಕ್ಕೂ ಹೆಚ್ಚು ವಿಗ್ರಹಗಳನ್ನು ಧ್ವಂಸಗೊಳಿಸಿದ್ದಾನೆ. ಒಂದು ಸ್ಥಳದಲ್ಲಿ, ಕ್ರೈಸ್ತ ಪಾಸ್ಟರ್ ವಿಜಯ್ ಇವನು, ‘ಹಿಂದೂಗಳಿಗೆ ನಮ್ಮಿಂದ ಸಮಸ್ಯೆಯಾಗುತ್ತಿದ್ದರೆ, ನಮಗೆ ಪ್ರತ್ಯೇಕ ರಾಷ್ಟ್ರವನ್ನು ನೀಡಿ’ ಎಂದು ಹೇಳಿದರು. ಇದು ಅವರ ಮನಸ್ಥಿತಿಯನ್ನು ತೋರಿಸುತ್ತದೆ. ಈ ಎಲ್ಲಾ ಮತಾಂತರಗಳಿಗೆ ಮೂಲ ಪರಿಹಾರವೆಂದರೆ ಹಿಂದೂಗಳಿಗೆ ಅವರ ಧರ್ಮದ ಶಿಕ್ಷಣ ನೀಡುವುದು. ಇದಕ್ಕಾಗಿ ಸಮಿತಿಯು ಅನೇಕ ‘ಆನ್‌ಲೈನ್’ ಧರ್ಮಶಿಕ್ಷಣ ವರ್ಗಗಳನ್ನು ಪ್ರಾರಂಭಿಸಿದೆ. ಈ ಮೂಲಕ ಹಿಂದೂಗಳನ್ನು ಜಾಗೃತಗೊಳಿಸಿ ಸಂಘಟಿಸಲಾಗುತ್ತಿದೆ. ಒಮ್ಮೆ ಜಾಗೃತಗೊಂಡರೆ ಹಿಂದೂ ಮತಾಂತರಗೊಳ್ಳುವುದಿಲ್ಲ ಎಂದು ಹೇಳಿದರು.