Bangladesh Hindu Temple Looted : ಬಾಂಗ್ಲಾದೇಶದಲ್ಲಿ ಹಿಂದೂ ದೇವಸ್ಥಾನದ ಸೇವಕನ ಬರ್ಬರ ಕೊಲೆ !

ದೇವಸ್ಥಾನದಲ್ಲಿ ದರೋಡೆ !

ಢಾಕಾ (ಬಾಂಗ್ಲಾದೇಶ) – ಬಾಂಗ್ಲಾದೇಶದ ನಾಟೋರ ಜಿಲ್ಲೆಯ ಕಾಸಿಂಪುರದಲ್ಲಿ ದೇವಸ್ಥಾನದ ಸೇವಕ ತರುಣ ದಾಸ್ (ವಯಸ್ಸು 55) ಅವರನ್ನು ಅಪರಿಚಿತ ದುಷ್ಕರ್ಮಿಗಳು ಹತ್ಯೆ ಮಾಡಿದ್ದಾರೆ. ದೇವಸ್ಥಾನವನ್ನು ಲೂಟಿ ಮಾಡಿದ ನಂತರ ದಾಸ್ ಅವರನ್ನು ಹತ್ಯೆ ಮಾಡಿರುವುದು ಕಂಡುಬಂದಿದೆ. ದಾಸ್ ಅವರ ಕೈ ಕಾಲುಗಳನ್ನು ಪ್ಲಾಸ್ಟಿಕ್ ಹಗ್ಗಗಳಿಂದ ಕಟ್ಟಲಾಗಿದ್ದು, ತಲೆಗೆ ಪೆಟ್ಟು ಬಿದ್ದಿತ್ತು. ರಕ್ತಸ್ರಾವದಿಂದ ಅವರು ಸಾವನ್ನಪ್ಪಿದ್ದಾರೆ. ಇದನ್ನು ವಿರೋಧಿಸಿ ‘ಸನಾತನ ಜಾಗರಣ ಜೋತ’ ಎಂಬ ಹಿಂದೂ ಸಂಘಟನೆ ಪ್ರತಿಭಟನೆ ನಡೆಸಿದೆ.

1. ಕೋಲಕಾತಾದ ಇಸ್ಕಾನ್ ವಕ್ತಾರ ರಾಧಾರಾಮಣ ದಾಸ ಇವರು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುವ ಮೂಲಕ ಘಟನೆಯನ್ನು ಖಂಡಿಸಿದ್ದಾರೆ. ಘಟನೆಯನ್ನು ಬಾಂಗ್ಲಾದೇಶ ಪೊಲೀಸರು ದರೋಡೆ ಪ್ರಕರಣ ಎಂದು ಬಣ್ಣಿಸಿದ್ದಾರೆ ಎಂದು ರಾಧಾರಾಮಣ ದಾಸ್ ಹೇಳಿದ್ದಾರೆ. ಲೂಟಿ ಮತ್ತು ಹಿಂಸಾಚಾರದ ಘಟನೆಗಳಲ್ಲಿ ಕೇವಲ ಹಿಂದೂಗಳನ್ನು ಮಾತ್ರ ಗುರಿ ಮಾಡಲಾಗುತ್ತಿದೆ. ಇದು ಹೇಗಾಗುತ್ತದೆ ?

2. ಇಸ್ಕಾನ್‌ನ ಮತ್ತೊಬ್ಬ ಅನುಯಾಯಿ ಮಾತನಾಡಿ, ಪರಿಸ್ಥಿತಿ ನಿರಂತರವಾಗಿ ಹದಗೆಡುತ್ತಲೇ ಇರುವುದರಿಂದ ಚರ್ಚೆ ಮಾಡುವುದು ಸಾಕಾಗುವುದಿಲ್ಲ. ಭಾರತ ಸರಕಾರದ ಹೇಳಿಕೆಯಂತೆ ಡಿಸೆಂಬರ್ 8, 2024 ರ ಹೊತ್ತಿಗೆ, ಹಿಂದೂಗಳು ಮತ್ತು ಇತರ ಅಲ್ಪಸಂಖ್ಯಾತರ ವಿರುದ್ಧ 2 ಸಾವಿರದ 200 ಹಿಂಸಾಚಾರದ ಘಟನೆಗಳು ನಡೆದಿವೆ. ಈ ಅಂಕಿ ಅಂಶವು ತಪ್ಪಾಗಿದೆ; ಏಕೆಂದರೆ ಅನೇಕ ಘಟನೆಗಳು ದಾಖಲಾಗಿಲ್ಲ.

3. ‘ವಾಯ್ಸ್ ಆಫ್ ಬಾಂಗ್ಲಾದೇಶಿ ಹಿಂದೂ’ ನ ‘ಎಕ್ಸ್ ‘ ಖಾತೆಯಲ್ಲಿ ಒಂದು ದೇವಸ್ಥಾನದ ಛಾಯಾಚಿತ್ರವನ್ನು ಪ್ರಸಾರ ಮಾಡಿದೆ, ಅದರಲ್ಲಿ ಹಿಂದೂ ದೇವತೆಗಳ ಮೂರ್ತಿಗಳು ಹಾನಿಗೊಳಗಾಗಿರುವುದನ್ನು ಕಾಣಿಸುತ್ತಿದೆ. ಇದರಲ್ಲಿ ಜಮಾತ್-ಎ-ಇಸ್ಲಾಮಿ ಸದಸ್ಯರು ಬಿರಗಂಜ ಉಪಜಿಲ್ಲೆಯ ಝಾರಬರಿ ಗ್ರಾಮದಲ್ಲಿ ಒಂದು ಹಿಂದೂ ದೇವಸ್ಥಾನದ ಮೇಲೆ ದಾಳಿ ಮಾಡಿ ಮೂರ್ತಿಯನ್ನು ಧ್ವಂಸಗೊಳಿಸಿದ್ದಾರೆ ಎಂದು ಅದರಲ್ಲಿ ಹೇಳಿದೆ.

ಸಂಪಾದಕೀಯ ನಿಲುವು

ಭಾರತ ಸರಕಾರ ಬಾಂಗ್ಲಾದೇಶ ಸರಕಾರಕ್ಕೆ ಹಿಂದೂಗಳ ಮತ್ತು ಅವರ ಧಾರ್ಮಿಕ ಸ್ಥಳಗಳನ್ನು ರಕ್ಷಿಸುವಂತೆ ಕರೆ ನೀಡಿದೆ; ಆದರೆ ಬಾಂಗ್ಲಾದೇಶದಿಂದ ಅಂತಹ ಯಾವುದೇ ಪ್ರಯತ್ನ ನಡೆಯುತ್ತಿಲ್ಲ ಎಂಬುದನ್ನು ಈ ಘಟನೆ ತೋರಿಸುತ್ತದೆ. ಭಾರತ ಈಗ ಅಲ್ಲಿನ ಹಿಂದೂಗಳನ್ನು ರಕ್ಷಿಸಲು ಮುಂದೆ ಏನು ಮಾಡಲಿದೆ ಎಂಬುದನ್ನು ಅವರು ಹೇಳಬೇಕು ಅಥವಾ ಏನಾದರೂ ಕ್ರಮ ಕೈಕೊಂಡು ತೋರಿಸಬೇಕು ಎಂದು ಹಿಂದೂಗಳಿಗೆ ಅನಿಸುತ್ತದೆ !