Delhi Muncipal Corporation Order : ಬಾಂಗ್ಲಾದೇಶಿ ವಿದ್ಯಾರ್ಥಿಗಳ ಗುರುತನ್ನು ಪರಿಶೀಲಿಸಿ ! – ದೆಹಲಿ ಮಹಾನಗರ ಪಾಲಿಕೆಯ ಶಾಲೆಗಳಿಗೆ ಆದೇಶ

ಬಾಂಗ್ಲಾದೇಶದ ಮಕ್ಕಳಿಗೆ ಜನನ ಪ್ರಮಾಣ ಪತ್ರ ನೀಡಲು ನಿರ್ಬಂಧ

ನವ ದೆಹಲಿ – ಅಕ್ರಮ ಬಾಂಗ್ಲಾದೇಶಿ ವಲಸಿಗ ಮಕ್ಕಳನ್ನು ಗುರುತಿಸುವಂತೆ ದೆಹಲಿ ಮಹಾನಗರ ಪಾಲಿಕೆ ಶಾಲೆಗಳಿಗೆ ಆದೇಶಿಸಿದೆ. ಇದಲ್ಲದೇ ಅಂತಹ ಮಕ್ಕಳಿಗೆ ಜನನ ಪ್ರಮಾಣ ಪತ್ರ ನೀಡಬಾರದು ಎಂಬ ಸೂಚನೆಯನ್ನೂ ನೀಡಿದೆ. ಎಲ್ಲ ಶಾಲಾ ಮುಖ್ಯೋಪಾಧ್ಯಾಯರಿಗೆ ಡಿಸೆಂಬರ್ 31ರೊಳಗೆ ವರದಿ ಸಲ್ಲಿಸುವಂತೆ ಮಹಾನಗರಪಾಲಿಕೆಯು ಸೂಚಿಸಿದೆ.

ಮಹಾನಗರಪಾಲಿಕೆ ಉಪ ಆಯುಕ್ತ ಬಿ.ಪಿ. ಭಾರದ್ವಾಜ ಮಾತನಾಡಿ, ಮಹಾನಗರಪಾಲಿಕೆ ಶಾಲೆಗಳಲ್ಲಿ ಪ್ರವೇಶ ನೀಡುವಾಗ ಅಕ್ರಮ ಬಾಂಗ್ಲಾ ವಲಸಿಗರನ್ನು ಗುರುತಿಸಲು ಶಿಕ್ಷಣ ಇಲಾಖೆ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುತ್ತದೆ. ಶಾಲೆಗಳಲ್ಲಿ ಅಕ್ರಮ ಬಾಂಗ್ಲಾದೇಶಿ ವಲಸಿಗ ಮಕ್ಕಳನ್ನು ಗುರುತಿಸಲು ಸರಿಯಾದ ಗುರುತು ಮತ್ತು ಪರಿಶೀಲನೆ ಅಭಿಯಾನವನ್ನು ನಡೆಸಲು ಕೋರಲಾಗಿದೆ. ಅಕ್ರಮ ಬಾಂಗ್ಲಾದೇಶಿ ವಲಸಿಗರಿಗೆ ನೀಡಲಾದ ಜನನ ಪ್ರಮಾಣಪತ್ರಗಳ ನೋಂದಣಿಯನ್ನು ಗುರುತಿಸಲು ಮತ್ತು ಪರಿಶೀಲಿಸಲು ಅಭಿಯಾನವನ್ನು ಸಹ ನಡೆಸಲಾಗುವುದು ಎಂದು ಹೇಳಿದರು.

ಸಂಪಾದಕೀಯ ನಿಲುವು

ಬಾಂಗ್ಲಾದೇಶೀ ನುಸುಳುವಿಕೆಯ ಸಮಸ್ಯೆ ದಿನದಿಂದ ದಿನಕ್ಕೆ ಉಲ್ಬಣಗೊಳ್ಳುತ್ತಿದೆ ಮತ್ತು ಈ ಸಮಸ್ಯೆಯನ್ನು ಬುಡದಿಂದ ಪರಿಹರಿಸಲು ಸಮರೋಪಾದಿಯಲ್ಲಿ ಪ್ರಯತ್ನಿಸುವುದು ಅಗತ್ಯವಾಗಿದೆ !