ಭಾರತ ಎಂದಿಗೂ ಸ್ವಂತದ ನಿರ್ಣಯದ ಕುರಿತು ಇತರರಿಗೆ ‘ನಿರಾಕರಣೆಯ ಹಕ್ಕು’ (ವೆಟೋ) ಉಪಯೋಗಿಸಲು ಅನುಮತಿ ನೀಡುವುದಿಲ್ಲ ! – ವಿದೇಶಾಂಗ ಸಚಿವ ಡಾ. ಜಯ ಶಂಕರ್

ಮುಂಬಯಿ – ಭಾರತ ಎಂದಿಗೂ ಸ್ವಂತದ ನಿರ್ಣಯದ ಕುರಿತು ಇತರರಿಗೆ ‘ನಿರಾಕರಣೆಯ ಹಕ್ಕು’ (ವೆಟೋ) ಉಪಯೋಗಿಸಲು ಅನುಮತಿ ನೀಡುವುದಿಲ್ಲ ಮತ್ತು ಯಾವುದೇ ಭಯವನ್ನು ಲೆಕ್ಕಿಸದೆ ರಾಷ್ಟ್ರದ ಹಿತ ಮತ್ತು ಜಾಗತಿಕ ಕಲ್ಯಾಣಕ್ಕಾಗಿ ಯಾವುದು ಯೋಗ್ಯವಾಗಿದೆ ಅದೇ ಮಾಡುವುದು, ಎಂದು ಭಾರತದ ವಿದೇಶಾಂಗ ಸಚಿವ ಡಾ. ಜಯ ಶಂಕರ್ ಇವರು ಆನ್ಲೈನ್ ನಲ್ಲಿ ಉಪಸ್ಥಿತರಿದ್ದು ಸ್ಪಷ್ಟ ಶಬ್ದಗಳಲ್ಲಿ ವಿಚಾರ ಮಂಡಿಸಿದರು. ಕಾಂಚಿ ಕಾಮಕೋಟಿ ಪೀಠದ ೬೮ ನೇ ಶಂಕರಾಚಾರ್ಯ ಚಂದ್ರಶೇಖರೇಂದ್ರ ಸರಸ್ವತಿ ಇವರ ಹೆಸರಿನಲ್ಲಿ ನೀಡಲಾಗುವ ಪ್ರಶಸ್ತಿಯನ್ನು ಡಾ. ಜಯ ಶಂಕರ್ ಇವರಿಗೆ ನೀಡಿದರು. ಆ ಸಮಯದಲ್ಲಿ ಅವರು ಮಾತನಾಡುತ್ತಿದ್ದರು.

ಡಾ. ಜಯ ಶಂಕರ್ ಇವರು ಮಾತು ಮುಂದುವರೆಸಿ,

೧. ಯಾವಾಗ ಭಾರತ ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚು ಆಳವಾಗಿ ಜೋಡಣೆ ಆಗುತ್ತದೆಯೋ ಆಗ ಅದರ ಪರಿಣಾಮ ಹೆಚ್ಚು ಆಳವಾಗಿ ಇರುತ್ತದೆ. ಭಾರತದ ಸಮೃದ್ಧ ಪರಂಪರೆಯಿಂದ ಜಗತ್ತು ಬಹಳಷ್ಟು ಕಲಿಯಬಹುದು. ಯಾವಾಗ ಭಾರತೀಯರಿಗೆ ಸ್ವಂತದ ಅಭಿಮಾನಿ ಅನಿಸುವುದು ಆಗಲೇ ಅದು ಸಾಧ್ಯವಾಗುತ್ತದೆ. ಭಾರತ ತಟಸ್ಥವಾಗಿರುವುದರಿಂದ ತಪ್ಪು ತಿಳಿಯಬಾರದು. ನಾವು ರಾಷ್ಟ್ರದ ಹಿತದಲ್ಲಿ ಏನು ಇದೆ ಅದನ್ನೇ ಮಾಡುವೆವು.

೨. ಬಹಳ ಕಾಲದಿಂದಲೂ ನಮ್ಮ ‘ಪ್ರಗತಿ ಎಂದರೆ ನಮ್ಮ ಪರಂಪರೆಯ ನಿರಾಕರಣೆ’ ಹೀಗೆ ಕಲಿಸಲಾಗುತ್ತಿದೆ; ಆದರೆ ಈಗ ಪ್ರಜಾಪ್ರಭುತ್ವ ಸದೃಢವಾಗಿರುವುದರಿಂದ ಜಗತ್ತಿಗೆ ದೇಶದ ಹೊಸ ಪರಿಚಯವಾಗುತ್ತಿದೆ.

೩. ಭಾರತ ಒಂದು ಅಸಾಧಾರಣ ರಾಷ್ಟ್ರವಾಗಿದೆ; ಕಾರಣ ಅದು ಒಂದು ಸಂಸ್ಕೃತಿ ಇರುವ ದೇಶವಾಗಿದೆ. ಕೇವಲ ನಮ್ಮ ಸಂಸ್ಕೃತಿಯ ಸಾಮರ್ಥ್ಯದ ಪೂರ್ಣ ಉಪಯೋಗ ಪಡೆದು ಅದು ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರಭಾವ ಬೀರಬಹುದು.

೪. ಭಾರತ ಇಂದು ಒಂದು ಮಹತ್ವದ ಹಂತದಲ್ಲಿ ಇರುವುದು, ಅಲ್ಲಿ ಅದು ಅಭಿವೃದ್ಧಿಯ ನೂತನ ಅವಕಾಶಗಳು ಹುಡುಕುತ್ತಿದೆ. ಆದರೂ ಕೆಲವು ಹಳೆಯ ಸಮಸ್ಯೆಗಳು ಇನ್ನೂ ಕೂಡ ಬಾಕಿ ಇವೆ, ಅವುಗಳ ಪರಿಹಾರ ಮಾಡುವುದು ಅಗತ್ಯವಾಗಿದೆ’, ಎಂದು ಹೇಳಿದರು.