ಅಹಂಭಾವದಿಂದ ಮಾಡಿದ ಕೃತಿ ಎಷ್ಟೇ ಚೆನ್ನಾಗಿದ್ದರೂ, ಅದು ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರಿಗೆ ಇಷ್ಟವಾಗದಿರುವುದು !
ಕೆಲವು ಸಾಧಕರು ಬಹಳ ಸೇವೆ ಮಾಡುತ್ತಾರೆ; ಆದರೆ ‘ನನ್ನಿಂದಾಗಿ ಸೇವೆ ಆಗುತ್ತಿದೆ, ನಾನು ಚೆನ್ನಾಗಿ ಸೇವೆ ಮಾಡುತ್ತೇನೆ’, ಎಂಬ ಕರ್ತೃತ್ವದ ವಿಚಾರ ಅವರ ಮನಸ್ಸಿನಲ್ಲಿರುತ್ತದೆ. ಅದೇ ರೀತಿ ‘ನಾವು ಮಾಡಿದ ಸೇವೆಯನ್ನು ಇತರರು ಪ್ರಶಂಸಿಸಬೇಕು’, ಎಂದೂ ಅವರಿಗೆ ಅನಿಸುತ್ತಿರುತ್ತದೆ. ಇಂತಹ ‘ಅಹಂ’ನ ವಿಚಾರ ಮನಸ್ಸಿನಲ್ಲಿದ್ದರೆ ಆ ಸೇವೆಯು ಈಶ್ವರನ ಚರಣಗಳಲ್ಲಿ ಅಂಕಿತವಾಗುವುದಿಲ್ಲ.