ಸರಕಾರಿಕರಣಗೊಂಡ ದೇವಸ್ಥಾನದ ಪರಿಣಾಮ
ಬೆಂಗಳೂರು – ರಾಜ್ಯದ ಸರಕಾರಿ ಸ್ವಾಮ್ಯತ್ವದ ದೇವಸ್ಥಾನಗಳಲ್ಲಿ ಭಕ್ತರು ರಾತ್ರಿ ಆನ್ಲೈನ್ ಸೇವೆಗಳನ್ನು ಬುಕ್ ಮಾಡುತ್ತಾರೆ ಮತ್ತು ಮರುದಿನ ಬೆಳಿಗ್ಗೆ ಒಂದು ಕೇಜಿ ಪ್ರಸಾದವನ್ನು ‘ಹೋಟೆಲ್ ನಿಂದ ಆರ್ಡರ್ ಮಾಡಿದಂತೆ’ ಪೂರೈಸುವಂತೆ ನಿರೀಕ್ಷಿಸುತ್ತಾರೆ. ಇಂತಹ ಆನ್ಲೈನ್ ಸೇವೆಯ ಪೂರೈಕೆಗಾಗಿ ಅನೇಕ ಅಡಚಣೆಗಳು ಬರುತ್ತವೆ, ಎಂದು ಅರ್ಚಕರು ಅಳಲು ತೋಡಿಕೊಂಡರು. ರಾಜ್ಯದಲ್ಲಿ ೩೪ ಸಾವಿರ ದೇವಸ್ಥಾನಗಳು ಸರಕಾರದ ವಶದಲ್ಲಿವೆ. ಅದರಲ್ಲಿನ ೨೦೫ ದೇವಸ್ಥಾನಗಳು ‘ಎ’ ಕೆಟಗಿರಿಯಲ್ಲಿವೆ, ಅವುಗಳ ವಾರ್ಷಿಕ ಆದಾಯ ೨೫ ಲಕ್ಷ ರೂಪಾಯಿಗಿಂತಲೂ ಹೆಚ್ಚಾಗಿದೆ. ೫ ಲಕ್ಷದಿಂದ ೨೫ ಲಕ್ಷ ರೂಪಾಯಿವರೆಗಿನ ಆದಾಯ ಇರುವ ೧೯೩ ದೇವಸ್ಥಾನಗಳು ‘ಬ’ ಕೆಟಗಿರಿಯಲ್ಲಿ ಹಾಗೂ ಉಳಿದಿರುವ ೫ ಲಕ್ಷಕ್ಕಿಂತಲೂ ಕಡಿಮೆ ಆದಾಯ ಇರುವ ದೇವಸ್ಥಾನಗಳು ‘ಸಿ’ ಕೆಟಗಿರಿಯಲ್ಲಿವೆ. A ಮತ್ತು B ಕೆಟಗಿರಿಯ ದೇವಸ್ಥಾನಗಳಲ್ಲಿ ಆನ್ಲೈನ ಸೇವೆ ಒಳಗೊಂಡಿದೆ. ಆನ್ಲೈನ್ ಸೇವೆಗಳನ್ನು ಪೂರೈಸಲು ಅರ್ಚಕರಿಗೆ ಅನೇಕ ಅನಾನುಕೂಲತೆಯನ್ನು ಎದುರಿಸಬೇಕಾಗುತ್ತದೆ. ಆದ್ದರಿಂದ ಅರ್ಚಕರು ಆನ್ಲೈನ್ ಸೇವೆಯನ್ನು ವಿರೋಧಿಸುತ್ತಾರೆ, ಎಂದು ‘ಅಖಿಲ ಕರ್ನಾಟಕ ಹಿಂದೂ ಮಂದಿರ ಪೂಜಾರಿ ಫೆಡರೆಶನ್’ ನ ಮಹಾಸಚಿವ ಕೆ.ಎಸ್.ಎನ್. ದೀಕ್ಷಿತ್ ಇವರು ಹೇಳಿದರು.
ಖಾಸಗಿ ಏಜೆನ್ಸಿಗಳ ಮೂಲಕ ‘ಆನ್ಲೈನ್ ಬುಕಿಂಗ್’ ಮಾಡುವುದರಿಂದ ಹಣ ಏಜೆನ್ಸಿಯ ಖಾತೆಗೆ ಹೋಗುತ್ತದೆ ಮತ್ತು ದೇವಸ್ಥಾನದವರೆಗೆ ತಲುಪಲು ಅನೇಕ ವಾರಗಳ ಸಮಯ ಬೇಕಾಗುತ್ತದೆ, ಎಂದು ದೀಕ್ಷಿತರು ಹೇಳಿದರು. ದಿನಸಿ ವಸ್ತುಗಳ ಖರೀದಿಸಲು ಅರ್ಚಕರಿಗೆ ಆದಾಯ ಬೇಕಿರುತ್ತದೆ, ಆದರೆ ಆನ್ಲೈನ್ ಹಣ ಪಾವತಿಸಿರುವುದರಿಂದ ಆ ಹಣ ಖಾಸಗಿ ಏಜೆನ್ಸಿ ಗೆ ಹೋಗುತ್ತದೆ. ಇದು ಸೇವೆಯಾಗಿರದೇ ವ್ಯಾಪಾರವಾಗಿದೆ, ಎಂದು ದೀಕ್ಷಿತರು ಹೇಳಿದರು.
ಸಂಪಾದಕೀಯ ನಿಲುವುದೇವಸ್ಥಾನದ ಸರಕಾರಿಕರಣದ ದುಷ್ಪರಿಣಾಮ ! ಇದಕ್ಕಾಗಿ ದೇವಸ್ಥಾನಗಳು ಭಕ್ತರ ವಶದಲ್ಲಿರಬೇಕು ! |