ಸರ್ವ ಸಮಾನ ವಿಚಾರಧಾರೆಯ ಸಂಘಟನೆಗಳು ಒಂದೆಡೆಸೇರಿ ಕಾರ್ಯ ಮಾಡಬೇಕು ! – ಪೇಜಾವರ ಶ್ರೀ ವಿಶ್ವೇಶ್ವರಪ್ರಸನ್ನ ತೀರ್ಥ ಸ್ವಾಮೀಜಿ
`ಅಖಿಲ ಭಾರತೀಯ ಹಿಂದೂ ರಾಷ್ಟ್ರ ಅಧಿವೇಶನದ (ವೈಶ್ವಿಕ್ ಹಿಂದೂ ರಾಷ್ಟ್ರ ಮಹೋತ್ಸವದ) ಆಯೋಜನೆಯು ಅತ್ಯಂತ ಆವಶ್ಯಕತೆಯ ವಿಷಯವಾಗಿದೆ. ವಿಶ್ವದಲ್ಲಿ ಹಿಂದೂಗಳಿಗಾಗಿ ಕೇವಲ ಭಾರತವೊಂದೇ ದೇಶ ಇದೆ. ಈ ವಿಶ್ವದಲ್ಲಿ ಮತ್ತು ಸಮಾಜದಲ್ಲಿ ಹಿಂದೂಗಳಿಗೆ ಗೌರವದಿಂದ ಬದುಕಬೇಕಾಗಿದ್ದರೆ, ಈ ಜಾಗೃತಿಯು ಅತ್ಯಂತ ಆವಶ್ಯಕವಾಗಿದೆ.