ತಮಿಳುನಾಡಿನ ದ್ರಮುಕ ಪಕ್ಷದ ಸಚಿವ ಎಸ್.ಎಸ್.ಶಿವಶಂಕರ್ ಹೇಳಿಕೆ
ಚೆನ್ನೈ (ತಮಿಳುನಾಡು) – ಪ್ರಭು ಶ್ರೀರಾಮನ ಅಸ್ತಿತ್ವದ ಯಾವುದೇ ಐತಿಹಾಸಿಕ ಪುರಾವೆ ಇಲ್ಲ. ಪ್ರಭು ಶ್ರೀರಾಮನನ್ನು ಅವತಾರ ಎಂದು ನಂಬುತ್ತಾರೆ. ಅವತಾರವಾದರೆ ಅಂತವರು ಮಾನವ ಜನ್ಮ ತಾಳುವುದಿಲ್ಲ. (‘ಅವತಾರ’ ಶಬ್ದದ ಅರ್ಥ ಕೂಡ ತಿಳಿಯದಿರುವ ಶಿವಶಂಕರ್ ಅವರ ಬುದ್ಧಿಮತ್ತೆ ಎಷ್ಟಿದೆ ಎಂಬುದು ಇದರಿಂದ ಸ್ಪಷ್ಟವಾಗುತ್ತದೆ ! – ಸಂಪಾದಕರು) ನಮ್ಮ ಇತಿಹಾಸವನ್ನು ತಿರುಚಲಾಗಿದೆ. ನಮ್ಮ ಇತಿಹಾಸವನ್ನು ಮರೆಮಾಚಿ ಬೇರೆ ಇತಿಹಾಸ ನಮ್ಮ ಮುಂದೆ ಮಂಡಿಸುವ ಪ್ರಯತ್ನ ನಡೆಯುತ್ತಿದೆ ಎಂದು ಅಸಮಾಧಾನಕಾರಕ ಮತ್ತು ನಿರಾಧಾರ ಹೇಳಿಕೆಯನ್ನು ಸಚಿವ ಎಸ್. ಎಸ್. ಶಿವಶಂಕರ್ ನೀಡಿದ್ದಾರೆ. ಚೆನ್ನೈ ಹತ್ತಿರವಿರುವ ಅರಿಯಲೂರು ಜಿಲ್ಲೆಯಲ್ಲಿನ ಚೋಳ ಸಾಮ್ರಾಜ್ಯದ ಮೊದಲ ರಾಜ ರಾಜೇಂದ್ರ ಅವರ ಜಯಂತಿಯ ಪ್ರಯುಕ್ತ ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ಅವರು ಮಾತನಾಡುತ್ತಿದ್ದರು.
‘There is no historical evidence of Bhagwan Shri Ram’s existence!’ – Statement by Tamil Nadu’s ruling #DMK Minister S.S. Shivshankar
There are numerous historical references to the existence of Bhagwan Shri Ram. Besides this, archaeology and astronomy also confirm Bhagwan Shri… pic.twitter.com/v0KPDeH5Xu
— Sanatan Prabhat (@SanatanPrabhat) August 3, 2024
ಶಿವಶಂಕರ್ ಅವರು ಹೇಳಿದ್ದು:
೧. ರಾಜೇಂದ್ರ ಚೋಳ ಅವರು ಕೆರೆಗಳನ್ನು ಕಟ್ಟಿದರು ಹಾಗೂ ದೇವಸ್ಥಾನಗಳನ್ನು ಕಟ್ಟಿದರು. ಚೋಳರಾಜನ ಹೆಸರಿನಲ್ಲಿರುವ ಶಿಲಾಶಾಸನ ಮತ್ತು ಹಸ್ತಲಿಖಿತ ದಾಖಲೆಗಳು ದೊರೆಯುತ್ತವೆ ; ಆದರೆ ಪ್ರಭು ಶ್ರೀರಾಮನ ಅಸ್ತಿತ್ವದ ಕುರಿತಾದ ಯಾವುದೇ ಐತಿಹಾಸಿಕ ಪುರಾವೆ ದೊರೆಯುತ್ತಿಲ್ಲ.
೨. ಪ್ರಧಾನಮಂತ್ರಿ ಮೋದಿ ನರೇಂದ್ರ ಮೋದಿ ಅವರು ಅಯೋಧ್ಯೆಯಲ್ಲಿನ ಶ್ರೀರಾಮ ಮಂದಿರದ ಉದ್ಘಾಟನೆ ಮಾಡುವಾಗ, ‘ಕೆಲವು ಸಾವಿರ ವರ್ಷಗಳ ಹಿಂದೆ ಪ್ರಭು ಶ್ರೀರಾಮ ಇಲ್ಲಿ ವಾಸಿಸುತ್ತಿದ್ದರು’ ಎಂದು ಹೇಳಿದ್ದರು. ಪ್ರತ್ಯಕ್ಷದಲ್ಲಿ ಪ್ರಭು ಶ್ರೀರಾಮನ ಅಸ್ತಿತ್ವದ ಯಾವುದೇ ಪುರಾವೆ ದೊರೆಯುವುದಿಲ್ಲ. ಆದ್ದರಿಂದ ಅದು ಇತಿಹಾಸವಲ್ಲ. ಪ್ರಭು ಶ್ರೀರಾಮನ ಕುರಿತು ಪ್ರಚಾರ ಮಾಡಿ ಸಮಾಜದ ದಿಕ್ಕು ತಪ್ಪಿಸಲಾಗುತ್ತಿದೆ ಎಂದು ಹೇಳಿದರು .
ಡಿಎಂಕೆ ಪಕ್ಷಕ್ಕೆ ಪ್ರಭು ಶ್ರೀರಾಮನ ಬಗ್ಗೆ ಇಷ್ಟೊಂದು ತಿರಸ್ಕಾರ ಏಕೆ ? – ಬಿಜೆಪಿಶಿವಶಂಕರ್ ಅವರ ಹೇಳಿಕೆಯ ಕುರಿತು ಬಿಜೆಪಿ ಪ್ರದೇಶಾಧ್ಯಕ್ಷ ಕೆ.ಅಣ್ಣಾಮಲೈ ಅವರು ಮಾತನಾಡಿ, ಡಿಎಂಕೆ ಪಕ್ಷಕ್ಕೆ ಪ್ರಭು ಶ್ರೀರಾಮನ ಬಗ್ಗೆ ಇಷ್ಟೊಂದು ತಿರಸ್ಕಾರ ಏಕೆ ? ಅವರು ಪ್ರಭು ಶ್ರೀರಾಮನನ್ನು ಈಗ ಏಕೆ ಉಲ್ಲೇಖಿಸಿದರು? ಹೊಸ ಸಂಸತ್ತಿನ ಕಟ್ಟಡದಲ್ಲಿ ಯಾವಾಗ ಚೋಳ ಸಾಮ್ರಾಜ್ಯದ ಸಿಂಗೋಲ್ (ಹಳೆಯ ಕಾಲದಲ್ಲಿನ ರಾಜದಂಡ) ಇರಿಸಲಾಯಿತು, ಆಗ ಇದೇ ಜನರು ಅದನ್ನು ವಿರೋಧಿಸಿದ್ದರು. ತಮಿಳುನಾಡಿನ ಇತಿಹಾಸ ೧೯೬೭ ರಿಂದ ಆರಂಭವಾಗುತ್ತದೆಂದು ಅನಿಸುವ ಜನರಿಗೆ ಈಗ ದೇಶದ ಸಮೃದ್ಧ ಸಂಸ್ಕೃತಿ ಮತ್ತು ಇತಿಹಾಸದ ಕುರಿತು ಪ್ರೀತಿ ಹುಟ್ಟಿದೆ, ಇದು ಹಾಸ್ಯಸ್ಪದವಲ್ಲವೇ? ೧೯೬೭ ರಲ್ಲಿ ರಾಜ್ಯದಲ್ಲಿ ಡಿಎಂಕೆ ಸರಕಾರದ ಮೊಟ್ಟ ಮೊದಲು ಅಧಿಕಾರ ಸ್ಥಾಪನೆ ಆಗಿತ್ತು ಎಂದವರು ಪ್ರತ್ಯುತ್ತರ ನೀಡಿದರು.
|
ಎಸ್ ಎಸ್ ಶಿವಶಂಕರ್ ಅವರ ಹೇಳಿಕೆ ಸರ್ವೋಚ್ಚ ನ್ಯಾಯಾಲಯದ ಅವಮಾನ ! – ಹಿಂದೂ ಜನಜಾಗೃತಿ ಸಮಿತಿ
ಈ ಬಗ್ಗೆ ಹಿಂದೂ ಜನಜಾಗೃತಿ ಸಮಿತಿಯ ರಾಷ್ಟ್ರೀಯ ವಕ್ತಾರರಾದ ಶ್ರೀ. ರಮೇಶ್ ಶಿಂದೆ ಅವರನ್ನು ಸನಾತನ ಪ್ರಭಾತದ ಪ್ರತಿನಿಧಿಯು ಸಂಪರ್ಕಿಸಿದಾಗ ಅವರು ಈ ಬಗ್ಗೆ ಪ್ರತಿಕ್ರಿಯೆ ನೀಡುತ್ತಾ, ಮೂಲತಃ ಡಿಎಂಕೆ ಪಕ್ಷಕ್ಕೆ ಧರ್ಮದ ಅಭ್ಯಾಸವಿಲ್ಲ. ಧರ್ಮವನ್ನು ವಿರೋಧಿಸಿಯೇ ಪಕ್ಷದ ಸ್ಥಾಪನೆ ಮಾಡಲಾಗಿದೆ. ಯಾವ ವಿಷಯದ ಅಭ್ಯಾಸ ಇರುವುದಿಲ್ಲವೊ ಅದರ ಬಗ್ಗೆ ನಾವು ಮಾತನಾಡಬಾರದು. ಡಾಕ್ಟರರು ಕೂಡ ಅವರಿಗೆ ತಿಳಿದಿರುವ ರೋಗದ ಬಗ್ಗೆ ಮಾತ್ರ ಮಾತನಾಡುತ್ತಾರೆ. ಆದರೆ ನಮ್ಮ ದೇಶದಲ್ಲಿ ಮಾತ್ರ ರಾಜಕೀಯ ಪಕ್ಷಗಳು ಯಾವುದೇ ವಿಷಯದ ಬಗ್ಗೆ ಈ ರೀತಿಯಾಗಿ ಮಾತನಾಡುತ್ತಾರೆ. ಶ್ರೀರಾಮ ಜನ್ಮಭೂಮಿ ಐತಿಹಾಸಿಕವಾಗಿದೆ ಎಂದು ಸ್ವತಃ ಸರ್ವೋಚ್ಚ ನ್ಯಾಯಾಲಯವೇ ಒಪ್ಪಿಕೊಂಡಿದ್ದು ಅದು ನೀಡಿರುವ ತೀರ್ಪಿನ ಬಳಿಕವೇ ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ಕಟ್ಟಲಾಗಿದೆ. ಆದ್ದರಿಂದ ಎಸ್.ಎಸ್. ಶಿವಶಂಕರ್ ಅವರ ಹೇಳಿಕೆ, ನ್ಯಾಯಾಲಯದ ತೀರ್ಪಿನ ಅವಮಾನವೇ ಆಗಿದೆ. ಹೇಟ್ ಸ್ಪೀಚ್ (ದ್ವೇಷಪೂರಿತ ಹೇಳಿಕೆ) ನೀಡುವವರ ವಿರುದ್ಧ ದೂರು ದಾಖಲಿಸುವವರು ಇಂತಹ ಹೇಳಿಕೆಗಳ ವಿರುದ್ಧ ದೂರು ನೀಡುವುದಿಲ್ಲ ಏಕೆ? ಎಂದು ಶಿಂದೆ ಪ್ರಶ್ನಿಸಿದರು.
ಸಂಪಾದಕೀಯ ನಿಲುವು
|