ಪುಣೆಯ ಶೇ. ೬೯ ರಷ್ಟು ಆಧ್ಯಾತ್ಮಿಕ ಮಟ್ಟದ ಸೌ. ಮಾಧುರಿ ಮಾಧವ ಇನಾಮದಾರ (ವಯಸ್ಸು ೭೯ ವರ್ಷ) ಇವರಿಂದ ಮಂಗಳೂರಿನ ಶ್ರೀಮತಿ ಅಶ್ವಿನಿ ಪ್ರಭು (ಆಧ್ಯಾತ್ಮಿಕ ಮಟ್ಟ ಶೇ. ೬೩, ವಯಸ್ಸು ೫೮ ವರ್ಷ) ಇವರಿಗೆ ಕಲಿಯಲು ಸಿಕ್ಕಿದ ಅಂಶಗಳನ್ನು ಮುಂದೆ ಕೊಡಲಾಗಿದೆ.
೧. ಕಲಿಯುವ ವೃತ್ತಿ
‘ಕನ್ನಡದಿಂದ ಮರಾಠಿ ಭಾಷೆಗೆ ಮತ್ತು ಮರಾಠಿಯಿಂದ ಕನ್ನಡ ಭಾಷೆಗೆ ಅನುವಾದ ಮಾಡುವವರಿಗಾಗಿ ಭಾಷಾಶುದ್ಧಿಗಾಗಿ ವಾರಕ್ಕೊಮ್ಮೆ ಸತ್ಸಂಗವನ್ನು ತೆಗೆದುಕೊಳ್ಳಲಾಗುತ್ತದೆ. ಅದರಲ್ಲಿ ಸಾಧಕರು ತಮ್ಮಿಂದಾದ ತಪ್ಪುಗಳನ್ನು ಹೇಳುತ್ತಾರೆ. ವ್ಯಾಕರಣ ಮತ್ತು ಮರಾಠಿಯಿಂದ ಕನ್ನಡ ಭಾಷೆಗೆ ಅನುವಾದ ಮಾಡುವಾಗ ‘ಹೇಗೆ ಸುಧಾರಣೆ ಆಗಬೇಕು ?’, ಎಂಬುದನ್ನು ಹೇಳಲಾಗುತ್ತದೆ. ಇನಾಮದಾರಕಾಕೂರವರು ಸಾಧಕರ ತಪ್ಪುಗಳಿಂದ ಕಲಿಯುತ್ತಾರೆ ಮತ್ತು ಇಂತಹ ತಪ್ಪುಗಳಿಗಾಗಿ ತಕ್ಷಣ ಕ್ಷಮೆಯಾಚನೆ ಮಾಡುತ್ತಾರೆ.
೨. ಸ್ವೀಕಾರವೃತ್ತಿ
ಅ. ಅವರು ಕಲಿಯುವ ಸ್ಥಿತಿಯಲ್ಲಿರುವುದರಿಂದ ತಮ್ಮ ಸಹ ಸಾಧಕರ ಆಧ್ಯಾತ್ಮಿಕ ಮಟ್ಟ ಅಥವಾ ವಯಸ್ಸಿನ ವಿಚಾರ ಮಾಡುವುದಿಲ್ಲ. ಅತ್ಯಂತ ನಮ್ರತೆಯಿಂದ ಮತ್ತು ಪ್ರತಿಷ್ಠೆಯನ್ನು ಕಾಪಾಡದೇ ಅವರು ಇತರ ಸಾಧಕರು ಹೇಳಿದ್ದನ್ನು ಸ್ವೀಕರಿಸುತ್ತಾರೆ.
ಆ. ಕಾಕೂರವರು ಒಂದು ಕಡತದ ಮೇಲೆ ಅನುವಾದಕರ ಹೆಸರನ್ನು ಹಾಕಲು ಮರೆತಿದ್ದರು. ಇದನ್ನು ಅವರಿಗೆ ಹೇಳಿದ ಕೂಡಲೇ ಅವರು ಅದನ್ನು ತಕ್ಷಣ ಒಪ್ಪಿಕೊಂಡರು ಮತ್ತು ಕ್ಷಮೆ ಕೇಳಿದರು. ಅನಂತರ ಎಂದಿಗೂ ಅವರು ಈ ತಪ್ಪನ್ನು ಮಾಡಲಿಲ್ಲ.
೩. ಕೇಳುವ ವೃತ್ತಿ ಮತ್ತು ಸಮಯಮಿತಿಯಲ್ಲಿ ಸೇವೆ ಪೂರ್ಣ ಮಾಡುವುದು
ಅ. ಕೆಲವೊಮ್ಮೆ ನಾವು ೨-೩ ಸಾಧಕರು ಅವರಿಗೆ ಸೇವೆಯನ್ನು ಕಳುಹಿಸುತ್ತೇವೆ, ಆಗ ಅವರು ಯಾವುದೇ ಒತ್ತಡವನ್ನು ತೆಗೆದು ಕೊಳ್ಳದೇ ಸಮಯಮಿತಿಯಲ್ಲಿ ಮತ್ತು ಆದ್ಯತೆಯನ್ನು ಕೇಳಿಕೊಂಡು ಸೇವೆಗಳ ಆಯೋಜನೆಯನ್ನು ಮಾಡುತ್ತಾರೆ ಮತ್ತು ಆದ್ಯತೆಗನುಸಾರ ನೀಡಿದ ಎಲ್ಲ ಸೇವೆಗಳನ್ನು ಪೂರ್ಣಗೊಳಿಸುತ್ತಾರೆ.
ಆ. ಜೂನ್‌ನಲ್ಲಿ ಅನೇಕ ಬಾಲಕರ ಗುಣವೈಶಿಷ್ಟ್ಯಗಳ ಕಡತಗಳು ಭಾಷಾಂತರಕ್ಕಾಗಿ ಬಂದಿದ್ದವು. ಕಾಕೂರವರು ವಿಶ್ರಾಂತಿಯನ್ನು ತೆಗೆದುಕೊಳ್ಳದೇ ಎಲ್ಲ ಕಡತಗಳನ್ನು ಸಮಯಕ್ಕೆ ಸರಿಯಾಗಿ ಪೂರ್ಣ ಮಾಡಿಕೊಟ್ಟರು.
೪. ಸೇವೆಯ ತಳಮಳ ಮತ್ತು ಸೇವಾ ಭಾವ
ಅ. ಕಾಕೂರವರು ಅವರ ಬಳಿಯಲ್ಲಿರುವ ಸೇವೆ ಮುಗಿದ ಕೂಡಲೇ ಅವರು ಸೇವೆ ಪೂರ್ಣವಾಗಿರುವುದನ್ನು ತಿಳಿಸಿ ಮುಂದಿನ ಸೇವೆಯನ್ನು ಕೇಳಿ ತೆಗೆದುಕೊಳ್ಳುತ್ತಾರೆ.
ಆ. ಕಾಕೂರವರಲ್ಲಿ ಸೇವಾಭಾವವು ಎಷ್ಟಿದೆ ಅಂದರೆ, ಯಾವಾಗ ಅವರ ಗಣಕಯಂತ್ರವು ಹಾಳಾಗುತ್ತದೆಯೋ, ಆಗ ಸೇವೆ ಮಾಡಲು ಕಾಕೂರವರು ತಮ್ಮ ಸಂಚಾರವಾಣಿಯಲ್ಲಿ ‘ವಾಯಿಸ್ ಟೈಪಿಂಗ್’ ಮಾಡಿ ಸೇವೆ ಮಾಡುತ್ತಾರೆ.
೫. ವ್ಯಷ್ಟಿ ಸಾಧನೆಯ ಗಾಂಭೀರ್ಯ
ಅ. ಕಾಕೂರವರು ಪ್ರತಿದಿನ ತಪ್ಪದೇ ತಮ್ಮ ವ್ಯಷ್ಟಿ ಮತ್ತು ಸಮಷ್ಟಿ ಸಾಧನೆಯ ವರದಿಯನ್ನು ಭಾಷಾಂತರ ಮಾಡುವವರ ಗುಂಪಿನಲ್ಲಿ ಕಳುಹಿಸುತ್ತಾರೆ. ಅವರು ತಮ್ಮ ವರದಿಯನ್ನು ಎಂದಿಗೂ ತಪ್ಪಿಸುವುದಿಲ್ಲ.
ಆ. ಕೆಲವು ಕಾರಣಗಳಿಂದ ಅವರಿಗೆ ವರದಿಯನ್ನು ಕೊಡಲು ಸಾಧ್ಯವಾಗದಿದ್ದರೆ, ಅವರು ಕಿರುಸಂದೇಶವನ್ನು ಕಳುಹಿಸಿ ತಿಳಿಸುತ್ತಾರೆ.’ (ಮುಂಗಡವಾಗಿ ಕಲ್ಪನೆ ನೀಡುತ್ತಾರೆ.)
– ಶ್ರೀಮತಿ ಅಶ್ವಿನಿ ಪ್ರಭು (ಆಧ್ಯಾತ್ಮಿಕ ಮಟ್ಟ ಶೇ. ೬೩, ವಯಸ್ಸು ೫೮ ವರ್ಷ), ಮಂಗಳೂರು.