‘ಸ್ವಭಾವಕ್ಕೆ ಔಷಧಿ ಇಲ್ಲ’, ಎಂದು ಹೇಳಿ ದುಃಖಕರ, ಕಷ್ಟಕರ ಜೀವನವನ್ನು ನಡೆಸುವುದಕ್ಕಿಂತ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಹೇಳಿದ ‘ಸ್ವಭಾವದೋಷ ಮತ್ತು ಅಹಂ ನಿರ್ಮೂಲನೆ’ ಪ್ರಕ್ರಿಯೆಗನುಸಾರ ಪ್ರಯತ್ನಿಸಿ ಆನಂದಮಯ ಜೀವನವನ್ನು ನಡೆಸಿ !
ಸನಾತನ ಸಂಸ್ಥೆಯ ವತಿಯಿಂದ ತೆಗೆದುಕೊಳ್ಳಲಾಗುವ ಸತ್ಸಂಗಗಳಲ್ಲಿ ‘ಸ್ವಭಾವದೋಷಗಳನ್ನು ಹೇಗೆ ಗುರುತಿಸಬೇಕು ? ಸ್ವಭಾವದೋಷಗಳಿಂದಾಗಿ ಆಗುವ ತಪ್ಪುಗಳನ್ನು ಹೇಗೆ ಬರೆಯಬೇಕು ? ಸ್ವಭಾವದೋಷ ನಿರ್ಮೂಲನೆಗಾಗಿ ಸ್ವಯಂಸೂಚನೆಗಳನ್ನು ನೀಡಿ ಅವುಗಳನ್ನು ಹೇಗೆ ದೂರ ಮಾಡಬೇಕು ?, ಎಂಬ ಬಗ್ಗೆ ಶಾಸ್ತ್ರೋಕ್ತ ಮತ್ತು ಸುಲಭ ಪದ್ಧತಿಯಲ್ಲಿ ಕಲಿಸಲಾಗುತ್ತದೆ.