ಶೇ. ೫೨ ರಷ್ಟು ಆಧ್ಯಾತ್ಮಿಕ ಮಟ್ಟವಿರುವ ಮತ್ತು ಉಚ್ಚ ಸ್ವರ್ಗಲೋಕದಿಂದ ಪೃಥ್ವಿಯ ಮೇಲೆ ಜನಿಸಿರುವ ಕು. ಹಂಸಿನಿ ಚೈತನ್ಯ ಆಚಾರ್ಯ (೧೨ ವರ್ಷ)

ಉಚ್ಚ ಸ್ವರ್ಗಲೋಕದಿಂದ ಪೃಥ್ವಿಯ ಮೇಲೆ ಜನಿಸಿರುವ ದೈವೀ (ಸಾತ್ತ್ವಿಕ) ಮಕ್ಕಳೆಂದರೆ ಮುಂಬರುವ ಹಿಂದೂ ರಾಷ್ಟ್ರವನ್ನು ನಡೆಸುವ ಪೀಳಿಗೆ ! ಕು. ಹಂಸಿನಿ ಆಚಾರ್ಯ ಈ ಪೀಳಿಗೆಯಲ್ಲಿ ಒಬ್ಬಳಾಗಿದ್ದಾಳೆ

‘ಸನಾತನದಲ್ಲಿ ಬಂದಿರುವ ದೈವೀ ಮಕ್ಕಳಿಂದಾಗಿ ‘ನಾನು ಸಾಧಕರನ್ನು ನಿರ್ಮಿಸಿದ್ದೇನೆ’, ಈ ಅಹಂಕಾರ ನನ್ನಲ್ಲಿ ನಿರ್ಮಾಣವಾಗಲಿಲ್ಲ.’ – ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ

ಪಾಲಕರೇ, ಇದನ್ನು ಗಮನದಲ್ಲಿರಿಸಿ

ನಿಮ್ಮ ಮಕ್ಕಳಲ್ಲಿ ಇಂತಹ ರೀತಿಯ ವೈಶಿಷ್ಟ್ಯಗಳಿದ್ದಲ್ಲಿ ಅವರು ಉಚ್ಚ ಲೋಕದಿಂದ ಪೃಥ್ವಿಯಲ್ಲಿ ಜನಿಸಿದ್ದಾರೆ ಎಂಬುದನ್ನು ಗಮನದಲ್ಲಿರಿಸಿ ಅವರು ಮಾಯೆಯಲ್ಲಿ ಸಿಲುಕಲಾರರು, ಬದಲಾಗಿ ಅವರಲ್ಲಿ ಸಾಧನೆಗೆ ಪೂರಕ ವಾದಂತಹ ಸಂಸ್ಕಾರ ಮಾಡಿ. ಇದರಿಂದ ಅವರ ಜನ್ಮದ ಕಲ್ಯಾಣವಾಗುವುದು ಮತ್ತು ನಿಮ್ಮ ಸಾಧನೆಯೂ ಆಗುವುದು’ – (ಪರಾತ್ಪರ ಗುರು) ಡಾ. ಆಠವಲೆ

ಸೌ. ಶಿಲ್ಪಾ ಆಚಾರ್ಯ

ಉತ್ತರ ಕನ್ನಡ ಜಿಲ್ಲೆಯ ಕುಮಟಾದ ಕು. ಹಂಸಿನಿ ಚೈತನ್ಯ ಆಚಾರ್ಯ ಅವಳ ಬಗ್ಗೆ ತಾಯಿ ಸೌ. ಶಿಲ್ಪಾ ಚೈತನ್ಯ ಆಚಾರ್ಯ ಇವರಿಗೆ ಗಮನಕ್ಕೆ ಬಂದ ಗುಣವೈಶಿಷ್ಟ್ಯಗಳನ್ನು ಇಲ್ಲಿ ನೀಡಲಾಗಿದೆ.

೧. ಜನನದ ಮೊದಲು

ಅ. ‘ನಾನು ಗರ್ಭಿಣಿಯಾಗಿದ್ದಾಗ ಸತತ ಕುಲದೇವಿಯ ನಾಮಜಪ ಮಾಡುತ್ತಿದ್ದೆ. ನಾನು ನಾಮಜಪ ಮಾಡುವಾಗ ಹೊಟ್ಟೆಯ ಗರ್ಭ ಚಲನವಲನ ಮಾಡಿ ಸ್ಪಂದಿಸುತ್ತಿತ್ತು.

೨. ಜನನದ ನಂತರ

೨ ಅ. ಜನನದಿಂದ ೫ ವರ್ಷ

ಅ. ನಾನು ಕುಳಿತು ನಾಮಜಪ ಮಾಡುತ್ತಿರುವಾಗ ಹಂಸಿನಿ ಬಾಲ್ಯದಿಂದಲೇ ನನ್ನ ಜೊತೆಗೆ ಕುಳಿತುಕೊಳ್ಳುತ್ತಿದ್ದಳು. ಅವಳು ಶಾಂತವಾಗಿ ಕುಳಿತು ಅವಳಿಗೆ ಹೇಳಿಕೊಟ್ಟ ನಾಮಜಪ ಮಾಡುತ್ತಿದ್ದಳು.

ಆ. ನಾನು ಅವಳನ್ನು ಸತ್ಸಂಗಕ್ಕೆ ಅಥವಾ ಬೇರೆ ಬೇರೆ ಕಾರ್ಯಕ್ರಮಕ್ಕೆ ಕರೆದುಕೊಂಡು ಹೋಗುತ್ತಿದ್ದೆ. ಅಲ್ಲಿ ಸಹ ಅವಳು ಯಾವತ್ತೂ ಗಲಾಟೆ, ಹಠ ಮಾಡದೇ ಪೂರ್ಣ ಕಾರ್ಯಕ್ರಮ ಆಗುವ ತನಕ ಶಾಂತವಾಗಿ ಇರುತ್ತಿದ್ದಳು.

೨ ಆ. ೫ ರಿಂದ ೧೨ ವರ್ಷ

೨ ಆ ೧. ಪ್ರೇಮಭಾವ

ಅ. ನಮ್ಮ ಮನೆಗೆ ಸಾಧಕರು ಬಂದಾಗ ಹಂಸಿನಿಯು ಪ್ರೀತಿಯಿಂದ ಬರಮಾಡಿಕೊಳ್ಳುತ್ತಾಳೆ ಮತ್ತು ಗೌರವದಿಂದ ಮಾತನಾಡುತ್ತಾಳೆ.

೨ ಆ ೨. ಪ್ರಬುದ್ಧತೆ

ಅ. ಹಂಸಿನಿ ಯಾವತ್ತೂ ಹಠ ಮಾಡುವುದಿಲ್ಲ. ಅವಳಿಗೆ ಊಟ-ತಿಂಡಿಯ ಬಗ್ಗೆ ಯಾವುದೇ ಇಷ್ಟಾನಿಷ್ಟವಿಲ್ಲ.

೨ ಆ ೩. ಸೇವೆಯ ಬಗ್ಗೆ ಆಸಕ್ತಿ

ಅ. ಅವಳು ನನ್ನೊಂದಿಗೆ ಸಂಸ್ಥೆಯ ಎಲ್ಲ ಕಾರ್ಯಕ್ರಮಕ್ಕೆ ಬರು ತ್ತಿದ್ದಳು. ಅವಳು ನನಗೆ ಸೇವೆಯಲ್ಲಿ ಸಹಾಯ ಮಾಡುತ್ತಿದ್ದಳು.

ಆ. ಒಮ್ಮೆ ನಾವು ರಾಮನಾಥಿಯ (ಗೋವಾ) ಸನಾತನ ಆಶ್ರಮಕ್ಕೆ ಹೋಗಿದ್ದೆವು. ಆಗ ಹಂಸಿನಿಯು ಸಾಧಕರಿಂದ ಸೇವೆಯನ್ನು ಕೇಳಿ ಪಡೆದುಕೊಂಡಳು ಮತ್ತು ಅದನ್ನು ಮನಃಪೂರ್ವಕ ಮಾಡಿದಳು.

೨ ಆ ೪. ಗುರುಗಳ ಬಗ್ಗೆ ಭಾವ

ಅ. ಗುರುದೇವರೇ ಎಲ್ಲ ಮಾಡುತ್ತಾರೆ. ಎಂದು ಅವಳಿಗೆ ಶ್ರದ್ಧೆ ಇದೆ.

ಆ. ಅವಳಿಗೆ ಬ್ರಹ್ಮೋತ್ಸವದ ಸಮಯದಲ್ಲಿ ಮೊದಲ ಬಾರಿಗೆ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಇವರ ದರ್ಶನವಾಯಿತು. ಆಗ ಅವಳಿಗೆ ಭಾವಜಾಗೃತಿಯಾಯಿತು ಮತ್ತು ಅವಳ ಕಣ್ಣು ಗಳಿಂದ ಭಾವಾಶ್ರು ಸುರಿಯುತ್ತಿತ್ತು. ಅವಳಿಗೆ ಗುರುದೇವರನ್ನು ನೋಡಿ ಆನಂದವಾಗುತ್ತಿತ್ತು.

– ಸೌ. ಶಿಲ್ಪಾ ಚೈತನ್ಯ ಆಚಾರ್ಯ (ಕು. ಹಂಸಿನಿಯ ತಾಯಿ) ಕುಮಟಾ, ಉತ್ತರ ಕನ್ನಡ ಜಿಲ್ಲೆ.