|
ಪ್ರಯಾಗರಾಜ (ಉತ್ತರ ಪ್ರದೇಶ) – ಮಥುರಾದ ಶ್ರೀ ಕೃಷ್ಣ ಜನ್ಮಭೂಮಿ-ಶಾಹಿ ಈದ್ಗಾ ಮಸೀದಿ ಪ್ರಕರಣದಲ್ಲಿ ಹಿಂದೂ ಪಕ್ಷವು ಸಲ್ಲಿಸಿದ 18 ಸಿವಿಲ್ ಮೊಕದ್ದಮೆಗಳನ್ನು ಎತ್ತಿಹಿಡಿದಿರುವುದನ್ನು ಪ್ರಶ್ನಿಸಿ ಮುಸ್ಲಿಂ ಪಕ್ಷದ ಮನವಿಯನ್ನು ಅಲಹಾಬಾದ ಉಚ್ಚ ನ್ಯಾಯಾಲಯ ವಜಾಗೊಳಿಸಿ, ‘ಶಾಹಿ ಈದ್ಗಾ ‘ದ ‘ಧಾರ್ಮಿಕ ಸ್ವರೂಪ’ ನಿರ್ಧರಿಸುವ ಆವಶ್ಯಕತೆಯಿದೆಯೆಂದು’ ಹೇಳಿದೆ.
1. ಹಿಂದೂ ಅರ್ಜಿದಾರರು ಸಲ್ಲಿಸಿದ ಅರ್ಜಿಗಳಿಂದ ‘ಪ್ರಾರ್ಥನಾ ಸ್ಥಳಗಳ ಕಾಯ್ದೆ’ (‘ಪ್ಲೇಸಸ್ ಆಫ್ ವರ್ಶಿಪ್’)ಯನ್ನು ಉಲ್ಲಂಘಿಸಿದೆ ಎಂಬ ಮುಸ್ಲಿಂ ಪಕ್ಷದ ಹೇಳಿಕೆಯನ್ನು ನ್ಯಾಯಾಲಯ ತಿರಸ್ಕರಿಸಿದೆ.
2. ಈ ಸಮಯದಲ್ಲಿ, ಮುಸ್ಲಿಂ ಪಕ್ಷವು 1991 ರ `ಪ್ರಾರ್ಥನಾ ಕಾಯ್ದೆ’ಯನ್ವಯ ದೇಶದ ಸ್ವಾತಂತ್ರ್ಯದ ದಿನದಂದು ಅಸ್ತಿತ್ವದಲ್ಲಿರುವ ಯಾವುದೇ ಪೂಜಾ ಸ್ಥಳದ ಧಾರ್ಮಿಕ ಸ್ವರೂಪವನ್ನು ಬದಲಾಯಿಸುವುದನ್ನು ನಿಷೇಧಿಸುತ್ತದೆ. ಕೇಲವ ಶ್ರೀರಾಮ ಜನ್ಮಭೂಮಿ-ಬಾಬ್ರಿ ಮಸೀದಿ ವಿವಾದವನ್ನು ಮಾತ್ರ ಆ ಕಾಯಿದೆಯ ವ್ಯಾಪ್ತಿಯಿಂದ ಹೊರಗಿಡಲಾಗಿದೆ,” ಎಂದು ಅವರು ಪ್ರತಿಪಾದಿಸಿದರು.
3. ಹಿಂದೂ ಪಕ್ಷವು ಸಲ್ಲಿಸಿದ ಮೊಕದ್ದಮೆಗಳಲ್ಲಿ, ಪುರಾತನ ಕಾಲದಿಂದಲೂ ಮಥುರಾದಲ್ಲಿರುವ ದೇವಸ್ಥಾನವನ್ನು ಕೆಡವಿ ನಿರ್ಮಿಸಿದ ಔರಂಗಜೇಬ್ ಕಾಲದ ಮಸೀದಿಯನ್ನು ತೆಗೆದುಹಾಕಬೇಕು ಎಂದು ಹೇಳಲಾಗಿದೆ.
4. ನ್ಯಾಯಮೂರ್ತಿ ಮಯಂಕ ಕುಮಾರ ಜೈನ ಅವರು ತಮ್ಮ ತೀರ್ಪಿನಲ್ಲಿ, 1991 ರ ಕಾಯಿದೆಯು ‘ಧಾರ್ಮಿಕ ಸ್ವರೂಪ’ ಎಂಬ ಪದವನ್ನು ವ್ಯಾಖ್ಯಾನಿಸಿಲ್ಲ. ಸಂಬಂಧಪಟ್ಟ ಧಾರ್ಮಿಕ ಸ್ಥಳವು ‘ದೇವಸ್ಥಾನ’ ಮತ್ತು ‘ಮಸೀದಿ’ ಎಂಬ ದ್ವಿಮುಖ ‘ಧಾರ್ಮಿಕ ಗುರುತು’ ಇರಲು ಸಾಧ್ಯವಿಲ್ಲ. ಆ ಸ್ಥಳ ಒಂದೋ ದೇವಸ್ಥಾನವಾಗಿದೆ ಅಥವಾ ಮಸೀದಿಯಾಗಿದೆ. ಆದ್ದರಿಂದ ಈ ಸ್ಥಳದ ‘ಧಾರ್ಮಿಕ ಸ್ವರೂಪ’ವು ಆಗಸ್ಟ್ 15, 1947 ರಂದು ಅಸ್ತಿತ್ವದಲ್ಲಿತ್ತೋ, ಅದನ್ನು ಎರಡೂ ಪಕ್ಷಗಳ ನೇತೃತ್ವದ ದಾಖಲೆಗಳಲ್ಲಿ ಮತ್ತು ಮೌಖಿಕ ಸಾಕ್ಷ್ಯಗಳ ಮೂಲಕ ನಿರ್ಧರಿಸಬೇಕು ಎಂದು ಹೇಳಿದರು.
5. ಹಿಂದೂ ಪಕ್ಷದ ನ್ಯಾಯವಾದಿ ವಿಷ್ಣು ಶಂಕರ ಜೈನ ಇವರು ಸುದ್ದಿಗಾರರಿಗೆ ಮಾತನಾಡುತ್ತಾ, ಶ್ರೀಕೃಷ್ಣ ಜನ್ಮಭೂಮಿ-ಶಾಹಿ ಈದ್ಗಾ ಮಸೀದಿ ಪ್ರಕರಣದ 18 ಅರ್ಜಿಗಳ ಸಂಯೋಜಿತ ವಿಚಾರಣೆಯನ್ನು ನಡೆಸಲು ಅಲಹಾಬಾದ ಉಚ್ಚ ನ್ಯಾಯಾಲಯ ನಿರ್ಧರಿಸಿದೆ. ಹಿಂದೂ ಪಕ್ಷ ಈಗ ಮಸೀದಿಯ ಸರ್ವೆಗೆ ಅನುಮತಿ ನೀಡಿರುವ ಅಲಹಾಬಾದ ಉಚ್ಚ ನ್ಯಾಯಾಲಯದ ಈ ಹಿಂದೆ ನೀಡಿದ್ದ ಆದೇಶಕ್ಕೆ ಸರ್ವೋಚ್ಚ ನ್ಯಾಯಾಲಯದಲ್ಲಿ ಪ್ರಶ್ನಿಸಲಾಗುವುದು ಎಂದು ಹೇಳಿದರು.
6. ಹಿಂದೂ ಪಕ್ಷವು, ಶಾಹಿ ಈದ್ಗಾ ಮಸೀದಿಯಲ್ಲಿ ಅನೇಕ ಚಿಹ್ನೆಗಳು ಮತ್ತು ಗುರುತುಗಳಿದ್ದು ಅವುಗಳು ಇದು ದೇವಸ್ಥಾನವಾಗಿತ್ತು ಎಂದು ಸಾಬೀತು ಪಡಿಸುತ್ತದೆ ಎಂದು ಹೇಳಿಕೊಂಡಿದೆ.
ಆಗಸ್ಟ್ 12 ರಂದು ಮುಂದಿನ ವಿಚಾರಣೆ !
ಈ ಸಂಬಂಧ ಉಭಯ ಪಕ್ಷಗಳ ವಾದ-ಪ್ರತಿವಾದಗಳು ಪೂರ್ಣಗೊಂಡ ಬಳಿಕ ನ್ಯಾಯಾಲಯ ಜೂನ್ 6ರಂದು ತನ್ನ ತೀರ್ಪನ್ನು ಕಾಯ್ದಿರಿಸಿತ್ತು. ಹಿಂದೂಗಳು ಈ ಅರ್ಜಿಗಳ ಮೂಲಕ ‘ಶಾಹಿ ಈದ್ಗಾ ಇರುವ ಜಾಗ ಹಿಂದೂಗಳಿಗೆ ಸೇರಿದ್ದು, ಅದನ್ನು ಹಿಂದೂಗಳಿಗೆ ಮರಳಿಸಬೇಕು ಮತ್ತು ಅಲ್ಲಿ ಪೂಜೆ ಸಲ್ಲಿಸಲು ಅವಕಾಶ ನೀಡಬೇಕು’ ಎಂದು ಆಗ್ರಹಿಸಿದ್ದಾರೆ. ಶಾಹಿ ಈದ್ಗಾ ಮಸೀದಿಯ ಭೂಮಿ ಹಿಂದೂಗಳ ಭೂಮಿ ಎಂದು ಹಿಂದೂ ಪಕ್ಷ ಸಲ್ಲಿಸಿರುವ ಅರ್ಜಿಯಲ್ಲಿ ಉಲ್ಲೇಖಿಸಿದೆ. ಅದೇ ಸಮಯದಲ್ಲಿ, ಮುಸ್ಲಿಂ ಪಕ್ಷವು ಪ್ರಾರ್ಥನಾ ಸ್ಥಳಗಳ ಕಾಯಿದೆ 1991, (ಪ್ಲೇಸಸ್ ಆಫ್ ವರ್ಶಿಪ್ 1991), ವಕ್ಫ್ ಕಾಯಿದೆ ಇತ್ಯಾದಿಗಳನ್ನು ಉಲ್ಲೇಖಿಸಿ ಹಿಂದೂಗಳ ಅರ್ಜಿಗಳನ್ನು ತಿರಸ್ಕರಿಸುವಂತೆ ಒತ್ತಾಯಿಸಿತ್ತು. ಮಥುರಾ ನ್ಯಾಯಾಲಯದಲ್ಲಿ ಹಿಂದೂ ಪಕ್ಷವು ಸಲ್ಲಿಸಿದ 18 ಪ್ರತ್ಯೇಕ ಸಿವಿಲ್ ಮೊಕದ್ದಮೆಗಳನ್ನು ಎತ್ತಿಹಿಡಿಯುವುದನ್ನು ಪ್ರಶ್ನಿಸಿತ್ತು. ಶಾಹಿ ಈದ್ಗಾ ಸಮಿತಿ ಸಲ್ಲಿಸಿದ್ದ ಅರ್ಜಿಯ ಮೇರೆಗೆ ಉಚ್ಚ ನ್ಯಾಯಾಲಯ ಈ ಮೇಲಿನ ನಿರ್ಧಾರವನ್ನು ಅಂಗೀಕರಿಸಿದೆ. ಈ ಪ್ರಕರಣದ ಮುಂದಿನ ವಿಚಾರಣೆ ಆಗಸ್ಟ್ 12 ರಂದು ನಡೆಯಲಿದೆ.