೧. ಹಳೆಯ ಗ್ರಂಥಗಳನ್ನಿಡುವ ಸ್ಟ್ಯಾಂಡ್ ನಿರುಪಯುಕ್ತವಾದುದರಿಂದ ಗ್ರಂಥಪ್ರದರ್ಶನ ಹಾಕಲು ಅಡಚಣೆ ಬರುವುದು
‘೨೦೧೦ ರಲ್ಲಿ ನಾನು ದಕ್ಷಿಣ ಭಾರತದಲ್ಲಿ ಪ್ರಚಾರಸೇವೆಯನ್ನು ಮಾಡುತ್ತಿದ್ದೆನು. ಧರ್ಮಪ್ರಚಾರದ ಅಂತರ್ಗತ ಸಾಧಕರು ಗ್ರಂಥಪ್ರದರ್ಶನ ಹಾಕುತ್ತಿದ್ದರು. ಹಳೆಯ ಗ್ರಂಥದ-ಸ್ಟ್ಯಾಂಡ್ ನಿರುಪಯುಕ್ತವಾದುದರಿಂದ ಸಾಧಕರಿಗೆ ಗ್ರಂಥಪ್ರದರ್ಶನ ಹಾಕಲು ಅಡಚಣೆಯಾಗುತ್ತಿತ್ತು. ಅದಕ್ಕೆ ಉಪಾಯವೆಂದು ಕೆಲವು ಸಾಧಕರು ಗ್ರಂಥಪ್ರದರ್ಶನ ಹಾಕಲು ಹೋಗುವಾಗ ‘ಪ್ಲಾಸ್ಟಿಕಿನ ಹಗುರವಾದ ಸಹಜವಾಗಿ ಎತ್ತುವಂತಹ ಮತ್ತು ಮಡಚಿಡಬಹುದಾದ’, ದೊಡ್ಡ ಮೇಜನ್ನು ತೆಗೆದುಕೊಂಡು ಹೋಗುತ್ತಿದ್ದರು ಅಥವಾ ಮರದ ಹಲಗೆಯನ್ನು ತೆಗೆದುಕೊಂಡು ಹೋಗಿ ಅದರ ಮೇಲೆ ಗ್ರಂಥಪ್ರದರ್ಶನವನ್ನು ಹಾಕುತ್ತಿದ್ದರು. ಕೆಲವೆಡೆ ಕಟ್ಟೆ ಇದ್ದರೆ, ಅದರ ಮೇಲೆ ಗ್ರಂಥಗಳನ್ನು ಪ್ರದರ್ಶಿಸಲಾಗುತ್ತಿತ್ತು.
೨. ಗ್ರಂಥ ವಿತರಣೆಗಾಗಿ ಸ್ಟ್ಯಾಂಡ್ ತಯಾರಿಸುವ ಸಂಕಲ್ಪನೆ ಮನಸ್ಸಿನಲ್ಲಿ ಬರುವುದು ಮತ್ತು ಅದಕ್ಕನುಸಾರ ಓರ್ವ ಸಾಧಕನಿಗೆ ಸ್ಟ್ಯಾಂಡ್ ತಯಾರಿಸಲು ಹೇಳುವುದು
ನನ್ನ ಮನಸ್ಸಿನಲ್ಲಿ, ‘ಗ್ರಂಥಪ್ರದರ್ಶನಕ್ಕಾಗಿ ಒಂದು ಹಗುರವಾದ, ಮರದ ಗ್ರಂಥದ ಸ್ಟ್ಯಾಂಡ್ ತಯಾರಿಸಬೇಕು’ ಅದರಿಂದ ಸಾಧಕರಿಗೆ ಗ್ರಂಥಪ್ರದರ್ಶನ ಹಾಕಲು ಸುಲಭವಾಗುವುದು’, ಎಂಬ ವಿಚಾರ ಬಂದಿತು. ಕರ್ನಾಟಕದಲ್ಲಿ ದೊಡ್ಡ ಪ್ರವಚನಗಳಿಗಾಗಿ ಧರ್ಮರಥದಲ್ಲಿ ಬಂದ ಓರ್ವ ಸಾಧಕನಿಗೆ ನಾನು ಗ್ರಂಥದ ಸ್ಟ್ಯಾಂಡ್‌ನ ಸಂಕಲ್ಪನೆಯ ಬಗ್ಗೆ ಹೇಳಿದೆನು. ಅವರು ತಕ್ಷಣ ಆ ರೀತಿಯ ಗ್ರಂಥದ ಸ್ಟ್ಯಾಂಡ್ ತಯಾರಿಸಲು ಆರಂಭಿಸಿದರು.
೩. ಸಾಧಕನು ಆವಶ್ಯಕತೆಗನುಸಾರ ಖಾನೆಗಳನ್ನು ತಯಾರಿಸಿ ಆಕರ್ಷಕ ಗ್ರಂಥದ ಸ್ಟ್ಯಾಂಡ್ ತಯಾರಿಸುವುದು
ಆ ಸಾಧಕರು ಗ್ರಂಥದ ಸ್ಟ್ಯಾಂಡ್ ತಯಾರಿಸುವಾಗ ನಾನು ಹೇಳಿದ ರೀತಿಯಲ್ಲಿ ಬದಲಾವಣೆ ಮಾಡಿದರು. ಕೆಲವು ಸಾಧಕರು ಅವರಿಗೆ ಕೆಲವು ಒಳ್ಳೆಯ ವಿಷಯಗಳನ್ನು ಸೂಚಿಸಿದರು. ಅದಕ್ಕನುಸಾರ ಶ್ರೀ. ಪಾಡಳೆ ಇವರು ಒಂದು ಅಂತಿಮ ಸ್ಟ್ಯಾಂಡ್ ತಯಾರಿಸಿದರು. ಗ್ರಂಥ ಮತ್ತು ಕಿರುಗ್ರಂಥಗಳನ್ನು ಇಡಲು ಖಾನೆಗಳು, ಪ.ಪೂ ಡಾಕ್ಟರರ ಮಾರ್ಗದರ್ಶನ ಮತ್ತು ಪ.ಪೂ. ಭಕ್ತರಾಜ ಮಹಾರಾಜರ ಭಜನೆಗಳ ಧ್ವನಿಸುರುಳಿ (ಕ್ಯಾಸೆಟ್) ಗಳನ್ನು ಇಡಲು ಬೇರೆ ಖಾನೆಯನ್ನು ಮಾಡಲಾಗಿತ್ತು. ದೈನಿಕ ಮತ್ತು ಸಾಪ್ತಾಹಿಕ ‘ಸನಾತನ ಪ್ರಭಾತ’ಗಳನ್ನು ಇಡಲು ಬೇರೆ ವ್ಯವಸ್ಥೆಯನ್ನೂ ಮಾಡಲಾಗಿತ್ತು. ಆ ಸ್ಟ್ಯಾಂಡ್ ಮುಚ್ಚಲು-ತೆರೆಯಲು ಸಹ ಬಹಳ ಸುಲಭ ಮತ್ತು ಹಗುರವಾಗಿತ್ತು. ಅದಕ್ಕೆ ಹಳದಿ ಬಣ್ಣವನ್ನು ಹಚ್ಚಿದ ನಂತರ ಅದು ತುಂಬಾ ಆಕರ್ಷಕವಾಗಿ ಕಾಣಿಸುತ್ತಿತ್ತು.
೪. ಪರಾತ್ಪರ ಗುರು ಡಾ. ಆಠವಲೆಯವರಿಗೆ ಗ್ರಂಥದ ಸ್ಟ್ಯಾಂಡ್ ಇಷ್ಟವಾಗುವುದು ಮತ್ತು ಅವರು ಅದನ್ನು ಶಿಬಿರದಲ್ಲಿ ತೋರಿಸಲು ಹೇಳುವುದು
ಗೋವಾದ ರಾಮನಾಥಿಯಲ್ಲಿನ ಸನಾತನದ ಆಶ್ರಮದಲ್ಲಿ ಸಾಧಕರ ಶಿಬಿರವಿತ್ತು. ಅಲ್ಲಿಗೆ ಹೋಗುವಾಗ ನಾನು ಆ ಗ್ರಂಥದ ಸ್ಟ್ಯಾಂಡನ್ನು ಜೊತೆಗೆ ತೆಗೆದುಕೊಂಡು ಹೋಗಿದ್ದೆನು. ಓರ್ವ ಸಾಧಕನ ಮಾಧ್ಯಮದಿಂದ ಪ.ಪೂ. ಡಾಕ್ಟರರಿಗೆ ಆ ಗ್ರಂಥದ ಸ್ಟ್ಯಾಂಡ್ನ್ನು ತೋರಿಸಿದೆನು. ಅವರು ನನಗೆ, ”ಚೆನ್ನಾಗಿದೆ, ಶಿಬಿರದಲ್ಲಿ ತೋರಿಸಿ”, ಎಂಬ ಸಂದೇಶ ಕಳುಹಿಸಿದರು. ನನಗೂ ಆ ಗ್ರಂಥದ ಸ್ಟ್ಯಾಂಡ್ ಬಹಳ ಇಷ್ಟವಾಗಿತ್ತು. ನಾನು ಆ ಗ್ರಂಥದ ಸ್ಟ್ಯಾಂಡ್ನ್ನು ಶಿಬಿರದಲ್ಲಿ ಸಾಧಕರಿಗೆ ತೋರಿಸಿದೆನು ಮತ್ತು ‘ಗ್ರಂಥದ ಸ್ಟ್ಯಾಂಡ್ ಎಷ್ಟು ಚೆನ್ನಾಗಿದೆ ಮತ್ತು ಹಗುರವಾಗಿದೆ’, ಎಂದು ಅದರ ವೈಶಿಷ್ಟ್ಯಗಳೊಂದಿಗೆ ಹೇಳಿ ಸಾಧಕರಿಗೆ ಅದರ ಬೇಡಿಕೆ ನೀಡಬೇಕು’, ಎಂದು ಹೇಳಿದೆನು.
೫. ಪರಾತ್ಪರ ಗುರು ಡಾ. ಆಠವಲೆಯವರು ‘ಗ್ರಂಥದ ಸ್ಟ್ಯಾಂಡ್‌ನ ಆವಶ್ಯಕತೆ ಇಲ್ಲ’, ಎಂಬ ಸಂದೇಶ ನೀಡಿರುವುದನ್ನು ಕೇಳಿ ಬೇಸರವಾಗುವುದು
ಶಿಬಿರವಾದ ನಂತರ ನಾನು ಸಾಧಕರ ಮಾಧ್ಯಮದಿಂದ ಗುರುದೇವರಿಗೆ ”ಗ್ರಂಥದ ಸ್ಟ್ಯಾಂಡ್‌ನ ಬೇಡಿಕೆಯ ಬಗ್ಗೆ ಏನು ಮಾಡಬೇಕು ?”, ಎಂದು ಕೇಳಿದೆನು, ಆಗ ಅವರು ನನಗೆ, ”ನಮಗೆ ಗ್ರಂಥದ ಸ್ಟ್ಯಾಂಡ್‌ನ ಆವಶ್ಯಕತೆ ಇಲ್ಲ”, ಎಂಬ ಸಂದೇಶ ಕಳುಹಿಸಿದರು. ಇದನ್ನು ಕೇಳಿದಾಗ ನನಗೆ ಬಹಳ ಬೇಸರವಾಯಿತು. ವಾಸ್ತವದಲ್ಲಿ ನನಗೆ ಅದನ್ನು ಸಹಜವಾಗಿ ಸ್ವೀಕರಿಸಲು ಬರಬೇಕಿತ್ತು; ಆದರೆ ನನಗೆ ಅದನ್ನು ತಕ್ಷಣ ಸ್ವೀಕರಿಸಲು ಆಗಲಿಲ್ಲ.
೬. ಕರ್ತೃತ್ವ ಮತ್ತು ಪ್ರಶಂಸೆಯ ಅಪೇಕ್ಷೆಯಿಂದ ಮನಸ್ಸಿಗೆ ಸುಖವೆನಿಸುವುದು
ಈ ಬಗ್ಗೆ ಚಿಂತನೆ ಮಾಡಿದಾಗ, ‘ಆ ಗ್ರಂಥದ ಸ್ಟ್ಯಾಂಡ್ ತಯಾರಿಸಲು ನಾನು ಬಹಳ ಪರಿಶ್ರಮಪಟ್ಟಿದ್ದೇನೆ ಮತ್ತು ಬಹಳಷ್ಟು ಪ್ರಯತ್ನ ಮಾಡಿ ಅದನ್ನು ಚೆನ್ನಾಗಿ ರಚಿಸಿದ್ದೇನೆ’, ಎಂಬ ಕರ್ತೃತ್ವದ ವಿಚಾರ ನನ್ನ ಮನಸ್ಸಿನಲ್ಲಿ ಹೆಚ್ಚಿತ್ತು’, ಎಂದು ನನ್ನ ಗಮನಕ್ಕೆ ಬಂದಿತು. ಎಲ್ಲ ಸಾಧಕರೂ ಆ ಗ್ರಂಥದ ಸ್ಟ್ಯಾಂಡ್ ನ್ನು ಬಹಳ ಪ್ರಶಂಸಿದುದರಿಂದ ನನ್ನ ಮನಸ್ಸಿಗೆ ಸುಖವೆನಿಸಿತ್ತು.
೭. ಅಹಂಭಾವದಿಂದ ಮಾಡಿದ ಕೃತಿ ಎಷ್ಟೇ ಚೆನ್ನಾಗಿದ್ದರೂ, ಅದು ದೇವರಿಗೆ ಇಷ್ಟವಾಗದಿರುವುದು
‘ಈಗ ಆ ರೀತಿಯ ಹೊಸ ಸ್ಟ್ಯಾಂಡ್ ತಯಾರಿಸಲಾಗುವುದಿಲ್ಲ’, ಎಂದು ನಾನು ಸಾಧಕರಿಂದ ಕೇಳಿದೆ. ಆಗ ಗುರುದೇವರ ಕೃಪೆಯಿಂದ ನನ್ನ ಮನಸ್ಸಿನಲ್ಲಿ ‘ದೇವರು ನನಗೆ ಸೂಚಿಸಿದರು ಮತ್ತು ಅವರೇ ಮಾಡಿಸಿಕೊಂಡರು’, ಎಂಬ ಕೃತಜ್ಞತೆಯ ಭಾವ ನನ್ನ ಮನಸ್ಸಿನಲ್ಲಿ ಇರಲಿಲ್ಲ. ಹಾಗಾಗಿ ‘ಸಾಧಕರು ತಮ್ಮ ಬಳಿ ಕರ್ತೃತ್ವ ಇಟ್ಟುಕೊಂಡರೆ ದೇವರಿಗೆ ಇಷ್ಟವಾಗುವುದಿಲ್ಲ. ಅಹಂಭಾವದಿಂದ ಮಾಡಿದ ಕೃತಿ ಎಷ್ಟೇ ಚೆನ್ನಾಗಿದ್ದರೂ, ಅದು ಶ್ರೀ ಗುರುಗಳಿಗೆ ಇಷ್ಟವಾಗುವುದಿಲ್ಲ’, ಎಂಬ ವಿಚಾರ ಬಂದಿತು.
೮. ಸರ್ವಾಂತರ್ಯಾಮಿ ಪರಾತ್ಪರ ಗುರು ಡಾ. ಆಠವಲೆಯವರು ಅಹಂಭಾವವು ಹೆಚ್ಚಾಗದಂತೆ ಕಾಪಾಡುವುದು
ಹೊಸ ಸ್ಟ್ಯಾಂಡ್ ತಯಾರಿಸುವ ಪ್ರಕ್ರಿಯೆ ಆರಂಭವಾಗುತ್ತಿದ್ದರೆ, ನನ್ನ ಅಹಂಭಾವ ಇನ್ನಷ್ಟು ಹೆಚ್ಚಾಗಬಹುದಿತ್ತು ಮತ್ತು ನನ್ನ ಸಾಧನೆಯಲ್ಲಿ ಹಾನಿಯಾಗುತ್ತಿತ್ತು; ಆದರೆ ‘ಸರ್ವಾಂತರ್ಯಾಮಿ ಗುರುಗಳು ಶಿಷ್ಯನ ಹಾನಿಯಾಗಲು ಬಿಡುವುದಿಲ್ಲ’, ಎಂದು ಈ ಪ್ರಸಂಗದಿಂದ ನನ್ನ ಗಮನಕ್ಕೆ ಬಂದಿತು. ಗುರುದೇವರ ಈ ಕೃಪೆಯ ಬಗ್ಗೆ ಅವರ ಚರಣಗಳಲ್ಲಿ ಕೋಟಿ ಕೋಟಿ ಕೃತಜ್ಞತೆಗಳು !
೯. ಪ್ರಸಂಗ ಘಟಿಸಿದ ನಂತರ ಸಾಧಕನ ತಪ್ಪು ಹೇಳಿದರೆ ಅವನಿಗೆ ಅವನಲ್ಲಿನ ಸ್ವಭಾವದೋಷ ಮತ್ತು ಅಹಂನ ತೀವ್ರತೆಯ ಸಂಪೂರ್ಣ ಅರಿವಾಗುವುದು
ಕೆಲವು ಸಾಧಕರ ಮನಸ್ಸಿನಲ್ಲಿ ಈ ರೀತಿಯ ಪ್ರಶ್ನೆ ಬರಬಹುದು, ‘ಆರಂಭದಲ್ಲಿ ನಾನು ಗುರುದೇವರಿಗೆ ಸಾಧಕರ ಮೂಲಕ ಗ್ರಂಥದ ಸ್ಟ್ಯಾಂಡ್ ತೋರಿಸಿದಾಗಲೇ ‘ಅವರು ಗ್ರಂಥದ ಸ್ಟ್ಯಾಂಡ್ ತಯಾರಿಸುವುದು ಬೇಡ’, ಎಂದು ಏಕೆ ಹೇಳಲಿಲ್ಲ ?’ ಅದರ ಉತ್ತರ ಹೀಗಿದೆ, ‘ಆಗಲೇ ಅವರು ನನಗೆ ‘ನಾವು ಗ್ರಂಥದ ಸ್ಟ್ಯಾಂಡ್ ತಯಾರಿಸುವುದು ಬೇಡ’, ಎಂದು ಹೇಳಿದ್ದರೆ, ನನ್ನಲ್ಲಿನ ಅಹಂನ ಲಕ್ಷಣ ಸಂಪೂರ್ಣವಾಗಿ ನನ್ನ ಗಮನಕ್ಕೆ ಬರುತ್ತಿರಲಿಲ್ಲ. ನಂತರ ಆ ಬಗ್ಗೆ ನನ್ನ ಯಾವ ರೀತಿ ಚಿಂತನೆಯಾಯಿತೋ, ಆ ರೀತಿ ಆಗುತ್ತಿರಲಿಲ್ಲ. ‘ನನ್ನಲ್ಲಿನ ಕರ್ತೃತ್ವ ಎಷ್ಟು ತೀವ್ರ ಇದೆ ?’, ಎಂಬುದೂ ನನಗೆ ತಿಳಿಯುತ್ತಿರಲಿಲ್ಲ. ಪ್ರತ್ಯಕ್ಷ ಪ್ರಸಂಗ ಘಟಿಸಿದ ನಂತರ ನನಗೆ ನನ್ನ ಅಹಂನ ಕೆಲವು ಲಕ್ಷಣಗಳು ಯೋಗ್ಯ ರೀತಿಯಲ್ಲಿ ಅರ್ಥವಾಗಲು ಸಹಾಯವಾಯಿತು.’
ಈಗಲೂ ಕೆಲವು ಸಾಧಕರು, ”ನೀವು ಈಗ ನನಗೆ ಈ ತಪ್ಪನ್ನು ಹೇಳುತ್ತಿದ್ದೀರಿ, ಅದನ್ನು ಮೊದಲೇ ಏಕೆ ಹೇಳಲಿಲ್ಲ ?’, ಎಂದು ಕೇಳುತ್ತಾರೆ. ಇದರ ಉತ್ತರ ಮೇಲಿನ ವಿವರಣೆಯಿಂದ ಅವರ ಗಮನಕ್ಕೆ ಬರಬಹುದು.
೧೦. ಕರ್ತೃತ್ವದ ತ್ಯಾಗ ಮಾಡಿ ಸೇವೆ ಮಾಡುವುದರ ಮಹತ್ವ
ಕೆಲವು ಸಾಧಕರು ಬಹಳ ಸೇವೆ ಮಾಡುತ್ತಾರೆ; ಆದರೆ ‘ನನ್ನಿಂದಾಗಿ ಸೇವೆ ಆಗುತ್ತಿದೆ, ನಾನು ಚೆನ್ನಾಗಿ ಸೇವೆ ಮಾಡುತ್ತೇನೆ’, ಎಂಬ ಕರ್ತೃತ್ವದ ವಿಚಾರ ಅವರ ಮನಸ್ಸಿನಲ್ಲಿರುತ್ತದೆ. ಅದೇ ರೀತಿ ‘ನಾವು ಮಾಡಿದ ಸೇವೆಯನ್ನು ಇತರರು ಪ್ರಶಂಸಿಸಬೇಕು’, ಎಂದೂ ಅವರಿಗೆ ಅನಿಸುತ್ತಿರುತ್ತದೆ. ಇಂತಹ ‘ಅಹಂ’ನ ವಿಚಾರ ಮನಸ್ಸಿನಲ್ಲಿದ್ದರೆ ಆ ಸೇವೆಯು ಈಶ್ವರನ ಚರಣಗಳಲ್ಲಿ ಅಂಕಿತವಾಗುವುದಿಲ್ಲ. ‘ಮಾಡುವವನು-ಮಾಡಿಸುವವನು ಭಗವಂತನೇ ಆಗಿದ್ದಾನೆ’, ಎಂಬ ಭಾವವನ್ನಿಟ್ಟು ಮತ್ತು ಕರ್ತೃತ್ವವನ್ನು ಈಶ್ವರನ ಚರಣಗಳಲ್ಲಿ ಅರ್ಪಿಸಿ ಕೃತಜ್ಞತಾಭಾವದಲ್ಲಿದ್ದರೆ ಆ ಸೇವೆಯು ಈಶ್ವರನ ವರೆಗೆ ತಲುಪುತ್ತದೆ. ‘ಕೃತಜ್ಞತಾಭಾವದಿಂದ ಮಾಡಿದ ಸೇವೆಯಿಂದ ಸಾಧನೆಯಾಗುತ್ತದೆ’, ಎಂದು ಈ ಪ್ರಸಂಗದಿಂದ ನನಗೆ ಕಲಿಯಲು ಸಿಕ್ಕಿತು.
ಸಚ್ಚಿದಾನಂದ ಪರಬ್ರಹ್ಮ ಗುರುದೇವರು ಸೂಚಿಸಿದ ಶಬ್ದಪುಷ್ಪಗಳನ್ನು ಕೃತಜ್ಞತಾಭಾವದಿಂದ ಅವರ ಚರಣಗಳಲ್ಲಿ ಅರ್ಪಿಸುತ್ತೇನೆ !
(ಮುಂದುವರಿಯುವುದು)
ಇದಂ ನ ಮಮ |’ (ಈ ಬರವಣಿಗೆ ನನ್ನದಲ್ಲ !)
– (ಸದ್ಗುರು) ರಾಜೇಂದ್ರ ಶಿಂದೆ, ಸನಾತನ ಆಶ್ರಮ, ದೇವದ, ಪನವೇಲ, (೧೬.೧೨.೨೦೨೩)