ಪಾಕಿಸ್ತಾನದಲ್ಲಿ ಮೊಟ್ಟ ಮೊದಲ ಬಾರಿ ಹಿಂದೂ ಲೆಫ್ಟಿನೆಂಟ್ ಕರ್ನಲ್ ನೇಮಕ !

ಪಾಕಿಸ್ತಾನ ಸೈನ್ಯದಲ್ಲಿ ೨ ಹಿಂದೂ ಅಧಿಕಾರಿಗಳಿಗೆ ಮೊಟ್ಟ ಮೊದಲ ಬಾರಿ ಲೆಫ್ಟಿನೆಂಟ್ ಕರ್ನಲ ಸ್ಥಾನಕ್ಕೆ ಪದೋನ್ನತಿ ನೀಡಲಾಗಿದೆ. ಮೇಜರ ಡಾ. ಕೈಲಾಶ ಕುಮಾರ ಮತ್ತು ಮೇಜರ ಡಾ. ಅನಿಲ ಕುಮಾರ ಎಂದು ಇಬ್ಬರು ಅಧಿಕಾರಿಗಳ ಹೆಸರುಗಳಾಗಿವೆ.

ತಮಿಳುನಾಡಿನ ದೇವಸ್ಥಾನದಿಂದ 10 ವರ್ಷಗಳ ಹಿಂದೆ ಕಳ್ಳತನವಾಗಿದ್ದ ಭಗವಾನ್ ಹನುಮಂತನ ಪ್ರಾಚೀನ ಮೂರ್ತಿ ಆಸ್ಟ್ರೇಲಿಯಾದಿಂದ ಭಾರತಕ್ಕೆ ತರುವರು

ತಮಿಳುನಾಡಿನ ಒಂದು ದೇವಸ್ಥಾನದಿಂದ 10 ವರ್ಷಗಳ ಹಿಂದೆ ಕಳ್ಳತನವಾದ ಭಗವಾನ ಹನುಮಂತನ ಪ್ರಾಚೀನ ಮೂರ್ತಿಯು ಆಸ್ಟ್ರೇಲಿಯದಲ್ಲಿ ಪತ್ತೆಯಾಗಿದ್ದೂ ಈಗ ಅದನ್ನು ಭಾರತಕ್ಕೆ ತರುವರು, ಎಂದು ಕೇಂದ್ರ ಸಂಸ್ಕøತಿ ಮಂತ್ರಿ ಜಿ. ಕಿಶನ್ ರೆಡ್ಡಿಯವರು ಮಾಹಿತಿ ನೀಡಿದ್ದಾರೆ.

ಯುಕ್ರೇನ್ ಯುದ್ಧದ ಪರಿಸ್ಥಿತಿಯಿಂದಾಗಿ, ಹಣ ಕೊಟ್ಟರೂ ನೀರು ಸಿಗಲಿಲ್ಲ !

ಭವಿಷ್ಯದಲ್ಲಿ ಮೂರನೇ ಮಹಾಯುದ್ಧ ಪ್ರಾರಂಭವಾದಾಗ ಭಾರತದಲ್ಲಿಯೂ ಇದೇ ರೀತಿಯ ಪರಿಸ್ಥಿತಿ ಉದ್ಭವಿಸಿದರೆ ಆಶ್ಚರ್ಯಪಡಬೇಕಾಗಿಲ್ಲ ! ಅಂತಹ ಪರಿಸ್ಥಿತಿಯಲ್ಲಿ, ದೇವರು ನಮ್ಮನ್ನು ರಕ್ಷಿಸಲು, ಸಾಧನೆ ಮಾಡುವುದು ಅಗತ್ಯವಾಗಿದೆ !

ಭಾರತದ ಬಳಿ ಸಹಾಯಕ್ಕಾಗಿ ಅಂಗಲಾಚುವ ಯುಕ್ರೆನ್ ಒಂದು ಸಮಯದಲ್ಲಿ ಭಾರತದ ಪರಮಾಣು ಪರೀಕ್ಷೆಗೆ ವಿರೋಧಿಸಿತ್ತು !

ಯುಕ್ರೆನ್ ಭಾರತವು 1998 ರಲ್ಲಿ ಮಾಡಿದ ಪರಮಾಣು ಪರೀಕ್ಷೆಗೆ ವಿಶ್ವ ಸಂಸ್ಥೆಯ ಭದ್ರತಾ ಪರಿಷತ್ತಿನಲ್ಲಿ ವಿರೋಧಿಸಿತ್ತು ಹಾಗೆಯೇ ಈ ಭದ್ರತಾ ಪರಿಷತ್ತಿನಲ್ಲಿ ಭಾರತದ ವಿರೋಧದಲ್ಲಿ ಮತದಾನವೂ ಮಾಡಿತ್ತು.

ಪಾಕಿಸ್ತಾನದಲ್ಲಿ ಪ್ರವಾದಿ ಮೊಹಮ್ಮದ ಇವರನ್ನು ಅವಮಾನಿಸಿದ್ದಕ್ಕಾಗಿ ಸಿಖ್ ವ್ಯಕ್ತಿಗೆ ಗಲ್ಲು ಶಿಕ್ಷೆ

ಪಂಜಾಬ್ ಪ್ರಾಂತದ ಒಂದು ನ್ಯಾಯಾಲಯವು ವಸೀಮ್ ಅಬ್ಬಾಸ್ ಎಂಬ ಸಿಖ್ ವ್ಯಕ್ತಿಗೆ ಮಹಮ್ಮದ್ ಪ್ರವಾದಿ ಮೊಹಮ್ಮದ ಇವರನ್ನು ಅವಮಾನಿಸಿದಕ್ಕಾಗಿ ಗಲ್ಲು ಶಿಕ್ಷೆ ವಿಧಿಸಿದೆ. ಹಾಗೂ ೫ ಲಕ್ಷ ಪಾಕಿಸ್ತಾನಿ ರೂಪಾಯಿ ದಂಡವು ವಿಧಿಸಲಾಗಿದೆ.

ಯುದ್ಧ ಘೋಷಿಸುತ್ತಾ ಯುಕ್ರೇನನ ಮೇಲೆ ರಶಿಯಾದಿಂದ ದಾಳಿ

ರಶಿಯಾದ ಅಧ್ಯಕ್ಷ ವ್ಲಾದಮೀರ ಪುತೀನರವರು ಯುಕ್ರೇನನ ವಿರುದ್ಧ ಯುದ್ಧವನ್ನು ಘೋಷಿಸಿ ಕೆಲವೇ ಕ್ಷಣಗಳಲ್ಲಿ ಯುಕ್ರೇನನ ರಾಜಧಾನಿ ಕೀವ ಸೇರಿದಂತೆ ಅನೇಕ ನಗರಗಳು ಬಾಂಬ್‌ಸ್ಫೋಟದಿಂದ ತಲ್ಲಣಿಸಿದವು. ರಶಿಯಾವು ಯುಕ್ರೇನನ ಮೇಲೆ ನಾಲ್ಕೂ ದಿಕ್ಕುಗಳಿಂದ ದಾಳಿ ನಡೆಸಿತು.

ಪಾಕಿಸ್ತಾನದಲ್ಲಿ ಅಂತರರಾರ್ಷ್ಟ್ರೀಯ ಮಹಿಳಾ ದಿನವನ್ನು ಹಿಜಾಬ್ ದಿನವೆಂದು ಆಚರಿಸಬೇಕು ! (ಅಂತೆ)

ಭಾರತದಲ್ಲಿ ಮುಸಲ್ಮಾನ ಮಹಿಳೆಯರಿಗೆ ಹಿಜಾಬ್ (ಮುಸಲ್ಮಾನ ಮಹಿಳೆಯರು ತಲೆ ಮತ್ತು ಕುತ್ತಿಗೆ ಮುಚ್ಚಿಕೊಳ್ಳಲು ಉಪಯೋಗಿಸುವ ವಸ್ತ್ರ) ಹಾಕಿಕೊಳ್ಳಲು ನಿಷೇಧಿಸಲಾಗುತ್ತಿದೆ.

ಪಾಕಿಸ್ಥಾನದ ಸೇನಾ ಮುಖ್ಯಸ್ಥ ಮತ್ತು ಭ್ರಷ್ಟ ನಾಯಕರ ಸ್ವಿಸ್ ಬ್ಯಾಂಕನಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ಸಂಪತ್ತು ಹೊಂದಿದ್ದಾರೆ ಎಂದು ಬಹಿರಂಗ !

ವಿಶ್ವದ ಮಂಚೂಣಿಯಲ್ಲಿರುವ ಬ್ಯಾಂಕ್‌ಗಳಲ್ಲಿ ಒಂದಾಗಿರುವ ‘ಕ್ರೆಡಿಟ್ ಸುಇಸ’ನ ಖಾತೆದಾರರ ಬಗ್ಗೆ ಆಘಾತಕಾರಿ ಮಾಹಿತಿ ಬೆಳಕಿಗೆ ಬಂದಿದೆ. ಸ್ವಿಸ್ ಬ್ಯಾಂಕಗಳಲ್ಲಿ ಒಂದಾದ ಈ ಬ್ಯಾಂಕ್‌ನಲ್ಲಿ ಪಾಕಿಸ್ಥಾನದಲ್ಲಿ ೧೪೦೦ ಜನರ ಒಟ್ಟು ೬೦೦ ಖಾತೆಗಳನ್ನು ಹೊಂದಿದೆ.

ಕಟ್ಟರವಾದಿಗಳು ವಿರೋಧಿಸಿದ್ದರಿಂದ ಕುವೈತ್‌ನಲ್ಲಿ ಮಹಿಳೆಯರಿಗಾಗಿ ಇದ್ದ ಯೋಗಾಸನ ಕಾರ್ಯಕ್ರಮಗಳನ್ನು ಸರಕಾರದಿಂದ ರದ್ದು

ಕುವೈತ್ ಸರಕಾರವು ಇಲ್ಲಿನ ಮಹಿಳೆಯರಿಗೆ ಇದ್ದ ಯೋಗಾಸನದ ಒಂದು ಕಾರ್ಯಕ್ರಮವನ್ನು ರದ್ದುಗೊಳಿಸಿದೆ. ಈ ಕಾರ್ಯಕ್ರಮದ ಜಾಹೀರಾತುಗಳನ್ನು ಪ್ರಕಟಿಸಿದ ನಂತರ, ದೇಶದ ಕಟ್ಟರವಾದಿ ಮುಸ್ಲಿಮರು ಇದು ‘ಇಸ್ಲಾಂಗೆ ಅವಮಾನ’ ಎಂದು ಹೇಳಿ ಇದನ್ನು ವಿರೋಧಿಸಿದರು.

ಅಮೇರಿಕೆಯಿಂದ ದೊರೆಯುವ ಆರ್ಥಿಕ ಸಹಾಯಕ್ಕೆ ನೇಪಾಳಿ ಜನರಿಂದ ವಿರೊಧ

ಅಮೇರಿಕಾದ ಸರಕಾರದ ಅಂಗಸಂಸ್ಥೆಯಾದ ‘ದಿ ಮಿಲೆನಿಯಮ್ ಚಾಲೆಂಜ್ ಕಾರ್ಪೋರೇಷನ್’ (ಎಮ್.ಸಿ.ಸಿ.)ಯು ನೇಪಾಳದಲ್ಲಿ ೨೦೧೭ ರಲ್ಲಿ ಮೂಲಭೂತ ಸೌಕರ್ಯ ಯೋಜನೆಗಳಿಗಾಗಿ ಶತಕೋಟಿ ರೂಪಾಯಿಗಳ ಅನುದಾನವನ್ನು ಅನುಮೊದಿಸಿದೆ.