ಪಣಜಿ (ಗೋವಾ) – ‘ಹೆಲ್ಪ್ ಫುಲ್ ಆರ್ಗನೈಜೇಷನ್ ಫಾರ್ ಲೈಕ್ ಮಾಂಯಡೇಡ್ ಇಂಡಿಯನ್ಸ್’ (ಹೋಲಿ) ಮತ್ತು ಭಾರತ ಟಿಬೇಟ ಸಹಯೋಗ ಮಂಚ್ ಗೋವಾ ಈ ಸಂಸ್ಥೆಯ ಜಂಟಿ ಆಶ್ರಯದಲ್ಲಿ ಪರ್ವರಿಯ ಅಜಾದ ಭವನದಲ್ಲಿ ಹಿಂದಿ ಭಾಷೆಯಲ್ಲಿ ಸಂಗೀತಮಯ ಶ್ರೀಮದ್ ಭಗವತ ಕಥೆ ಕಾರ್ಯಕ್ರಮದ ಆಯೋಜನೆ ಮಾಡಲಾಗಿದೆ. ಈ ಕಾರ್ಯಕ್ರಮ ನವರಾತ್ರಿಯ ಸಮಯದಲ್ಲಿ ಎಂದರೆ ಗುರುವಾರ, ಅಕ್ಟೋಬರ್ ೩ ರಿಂದ ಬುಧವಾರ ಅಕ್ಟೋಬರ್ ೯, ೨೦೨೪ ಈ ಕಾಲಾವಧಿಯಲ್ಲಿ ನಡೆಯುವುದು. ಈ ಸಮಯದಲ್ಲಿ ಪ್ರತಿದಿನ ಸಂಜೆ ೫ ರಿಂದ ರಾತ್ರಿ ೮ ಈ ಸಮಯದಲ್ಲಿ ಶ್ರೀಮದ್ ಭಾಗವತ ಈ ಗ್ರಂಥದ ಕುರಿತು ನಿರೂಪಣೆ ನಡೆಯುವುದು.
ಅಕ್ಟೋಬರ್ ೩ ರಂದು ಶ್ರೀಮದ್ ಭಾಗವತ ಮಹಾತ್ಮೆ ಶುಕದೇವ ಜನನ ಮತ್ತು ಪರೀಕ್ಷಿತ ಜನನ; ಅಕ್ಟೋಬರ್ ೪ ಕಪಿಲ ದೇವಹೂತಿ ಸಂವಾದ ಮತ್ತು ಧ್ರುವ ಚರಿತ್ರೆ; ಅಕ್ಟೋಬರ್ ೫ ರಂದು ಅಜಾಮಿಲ ಪ್ರಸಂಗ ಮತ್ತು ಪ್ರಲ್ಹಾದ ಚರಿತ್ರೆ; ಅಕ್ಟೋಬರ್ ೬ ರಂದು ವಾಮನ ಅವತಾರ, ಶ್ರೀರಾಮ ಜನನ, ಶ್ರೀ ಕೃಷ್ಣ ಜನನ; ಅಕ್ಟೋಬರ್ ೭ ರಂದು ಬಾಲಲೀಲೆ ಮತ್ತು ಗೋವರ್ಧನ ಪೂಜೆ; ಅಕ್ಟೋಬರ್ ೮ ರಂದು ಶ್ರೀ ಕೃಷ್ಣ- ರುಕ್ಮಿಣಿ ವಿವಾಹ ಮತ್ತು ಅಕ್ಟೋಬರ್ ೯ ರಂದು ಸುಧಾಮ ಚರಿತ್ರೆ ಮತ್ತು ಪರೀಕ್ಷಿತ ಮೋಕ್ಷ ಈ ವಿಷಯದ ಕುರಿತು ನಿರೂಪಣೆ ಮಾಡಲಾಗುವುದು. ಬಳಿಕ ಅಕ್ಟೋಬರ್ ೧೦, ೨೦೨೪ ರಂದು ಹೋಮ ಹವನ ಮತ್ತು ಪ್ರಸಾದ ವಿತರಣೆಯ ಕಾರ್ಯಕ್ರಮ ನಡೆಯುವುದು. ಗೋವಾದಲ್ಲಿ ಹಿಂದಿಯಲ್ಲಿ ಶ್ರೀಮದ್ ಭಾಗವತ ಕಥೆಯ ಇದು ಮೊದಲ ಕಾರ್ಯಕ್ರಮವಾಗಿದೆ. ಭಕ್ತರು ಈ ಕಾರ್ಯಕ್ರಮದ ಲಾಭ ಪಡೆಯಬೇಕೆಂದು ಆಯೋಜಕರು ಕರೆ ನೀಡಿದ್ದಾರೆ.