ಅರಬ ದೇಶದಲ್ಲಿ ಕಸದ ತೊಟ್ಟಿಯ ಮೇಲೆ ಪ್ರಧಾನಿ ಮೋದಿಯವರ ಛಾಯಾಚಿತ್ರ !

ಅರಬ ದೇಶದಲ್ಲಿನ ಒಂದು ಛಾಯಾಚಿತ್ರವು ಸದ್ಯ ಸಾಮಾಜಿಕ ಮಾಧ್ಯಮಗಳಿಂದ ಪ್ರಸಾರಿತವಾಗುತ್ತಿದೆ. ಇದರಲ್ಲಿ ಕಸದ ತೊಟ್ಟಿಯ ಮೇಲೆ ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಛಾಯಾಚಿತ್ರವನ್ನು ಹಚ್ಚಲಾಗಿದ್ದು ಅದರ ಮೇಲೆ ಬೂಟಿನಿಂದಾದ ಕಲೆಗಳು ಕಂಡುಬರುತ್ತಿವೆ.

ಹಾಗಿದ್ದರೆ ನಾನು ನನ್ನ ಬಟ್ಟೆಗಳನ್ನು ಮಾರಿ ಜನರಿಗೆ ಗೋಧಿಯ ಹಿಟ್ಟನ್ನು ಕಡಿಮೆ ದರದಲ್ಲಿ ದೊರಕಿಸಿಕೊಡುವೆನು ! – ಪಾಕಿಸ್ತಾನದ ಪ್ರಧಾನಮಂತ್ರಿ ಶಾಹಬಾಜ ಶರೀಫ

ಪ್ರಧಾನಮಂತ್ರಿ ಶಾಹಬಾಜ ಶರೀಫರು ಒಂದು ಸಭೆಯಲ್ಲಿ ಮಾತನಾಡುತ್ತಿದ್ದಾಗ, ನನ್ನ ಬಟ್ಟೆಗಳನ್ನು ಮಾರಿ ಆ ಹಣದಿಂದ ಜನರಿಗೆ ಗೋಧಿಯ ಹಿಟ್ಟನ್ನು ಅಗ್ಗದಲ್ಲಿ ದೊರಕಿಸಿಕೊಡುವೆನು, ಎಂಬ ಎಚ್ಚರಿಕೆಯನ್ನು ನೀಡಿದ್ದಾರೆ.

ಕಾಬೂಲನಲ್ಲಿ ಬಾಂಬ ಸ್ಫೋಟ, ೧೬ ಜನರ ಸಾವು

ಮೇ ೨೫ರ ಸಂಜೆ ಕಾಬೂಲನಲ್ಲಿ ೪ ಕಡೆ ಆದ ಸರಣಿ ಬಾಂಬ ಸ್ಫೋಟಗಳಲ್ಲಿ ಕನಿಷ್ಠ ೧೬ ಜನರು ಸಾವನ್ನಪ್ಪಿದ್ದಾರೆ ಮತ್ತು ೨೨ ಜನರು ಗಾಯಗೊಂಡಿದ್ದಾರೆ. ಮಜಾರ-ಎ-ಷರೀಫ ನಗರದ ಮಸೀದಿಯೊಂದರಲ್ಲಿ ಹಾಗೂ ಪ್ರಯಾಣಿಕರ ವಾಹನದಲ್ಲಿ ೩ ಬಾಂಬಗಳು ಸ್ಫೋಟಗೊಂಡಿವೆ.

ಪಾಕಿಸ್ತಾನದಲ್ಲಿ ಇಮ್ರಾನ ಖಾನರವರು ಆಂದೋಲನದಿಂದಾಗಿ ಹಿಂಸಾಚಾರ

ಇಮ್ರಾನ ಖಾನರವರ ಸಮರ್ಥಕರು ಮೆಟ್ರೋ ಸ್ಟೇಶನನ್ನು ಸುಟ್ಟು ಹಾಕಿದರು

ಜಗತ್ತಿನಲ್ಲಿ ಗಲ್ಲು ಶಿಕ್ಷೆ ನೀಡುವ ದೇಶಗಳ ಸೂಚಿಯಲ್ಲಿ ಚೀನಾವು ಮುಂಚೂಣಿಯಲ್ಲಿದೆ ! – ಅಮ್ನೆಸ್ಟಿ ಇಂಟರನ್ಯಾಶನಲ್‌

ಈ ಸಂಘಟನೆಯ ವರದಿಯಲ್ಲಿ ‘ಈ ಸೂಚಿಯಲ್ಲಿ ಚೀನಾ, ಉತ್ತರ ಕೋರಿಯಾ ಹಾಗೂ ವಿಯೆತನಾಮ ದೇಶಗಳ ಸೂಚಿಯನ್ನು ಸೇರಿಸಲಾಗಿಲ್ಲ. ಏಕೆಂದರೆ ಈ ದೇಶಗಳ ಅಪರಾಧಿಗಳಿಗೆ ಗಲ್ಲು ಹಾಗೂ ಗಲ್ಲು ಶಿಕ್ಷೆಗೆ ಸಂಬಂಧಿಸಿದ ಮಾಹಿತಿಯನ್ನು ನೀಡುವುದಿಲ್ಲ

ನೇಪಾಳವಿಲ್ಲದೆ ನಮ್ಮ ಶ್ರೀರಾಮನೂ ಅಪೂರ್ಣ ! – ಪ್ರಧಾನಿ ನರೇಂದ್ರ ಮೋದಿ

ಪ್ರಧಾನಿ ನರೇಂದ್ರ ಮೋದಿ ನೇಪಾಳ ಪ್ರವಾಸಕ್ಕೆ ತೆರಳಿದ್ದಾರೆ. ಮೇ ೧೬ ರಂದು ಬುದ್ಧ ಪೂರ್ಣಿಮೆಯ ಸಂದರ್ಭದಲ್ಲಿ ಅವರು ನೇಪಾಳದ ಭಗವಾನ ಬುದ್ಧನ ಜನ್ನಸ್ಥಳವಾದ ಲುಂಬಿನಿಗೆ ಹೋಗಿ ಅಲ್ಲಿನ ಮಾಯಾದೇವಿಯ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದರು.

ಜಾಗತಿಕ ಕ್ಷಾಮದ ಬಗ್ಗೆ ಜರ್ಮನಿ ಎಚ್ಚರಿಕೆ !

ಜಾಗತಿಕ ಮಟ್ಟದಲ್ಲಿ ಆಹಾರ ಬೆಲೆ ಏರಿಕೆಗೆ ರಷ್ಯಾದ ಯುದ್ಧ ನೀತಿಯೇ ಕಾರಣ ಎಂದು ಜರ್ಮನಿಯ ವಿದೇಶಾಂಗ ಸಚಿವೆ ಅನ್ನಾಲೆನಾ ಬೆರಬಾಕ ಹೇಳಿದ್ದಾರೆ. ಯುಕ್ರೇನ ವಿರುದ್ಧ ರಷ್ಯಾ ಯುದ್ಧ ಕಾರ್ಯಾಚರಣೆಯನ್ನು ಪಿತೂರಿಯಿಂದ ‘ಧಾನ್ಯ ಯುದ್ಧ’ವಾಗಿ ಪರಿವರ್ತಿಸಲಾಗಿದೆ.

ಅಮೇರಿಕಾ ಕೇಂದ್ರಿತವಾಗಿರುವ ಪ್ರಪಂಚ ಇತಿಹಾಸದ ತೆರೆಮರೆಗೆ ಸೇರಲಿದೆ – ರಷ್ಯಾ

ಅಂತಾರಾಷ್ಟ್ರೀಯ ಸಂಬಂಧಗಳ ಬಗ್ಗೆ ಪಾಶ್ಚಾತ್ಯ ದೇಶದ ವಿಚಾರಸರಣಿಯಲ್ಲಿ ಸ್ವಾರ್ಥ ಅಡಗಿರುತ್ತದೆ. ಆದ್ದರಿಂದ ಪಾಶ್ಚಾತ್ಯ ದೇಶಗಳಲ್ಲಿ ಇಬ್ಬರ ನಡುವಿನ ಸಂಬಂಧಗಳು ಕೆಡಬಹುದು ಮತ್ತು ಬೇಗನೆ ಅಮೇರಿಕಾ ಕೇಂದ್ರಿತ ಪ್ರಪಂಚ ಇತಿಹಾಸದ ತೆರೆಮರೆಗೆ ಸೇರಲಿದೆ ಎಂಬ ಎಚ್ಚರಿಕೆ ರಷ್ಯಾದ ಮಾಜಿ ರಾಷ್ಟ್ರಾಧ್ಯಕ್ಷ ದಿಮಿತ್ರಿ ಮೆದವೆದೇವ ನೀಡಿದರು.

ಚಂದ್ರನ ಮೇಲಿರುವ ಮಣ್ಣಿನಲ್ಲಿ ಸಸ್ಯ ಬೆಳೆಸಲು ವಿಜ್ಞಾನಿಗಳಿಗೆ ಯಶಸ್ಸು !

ಯಾವುದೇ ಭೂಮಿಯಲ್ಲಿ ವನಸ್ಪತಿಯನ್ನು ಬೆಳೆಸಲು ಆ ಭೂಮಿಯು ಫಲವತ್ತಾಗಿರುವುದು ಆವಶ್ಯಕವಾಗಿದೆ. ಚಂದ್ರನ ಸಂಶೋಧನೆ ಮಾಡುವ ‘ನಾಸಾ’ ಎಂಬ ಅಮೇರಿಕಾದ ಸಂಶೋಧನಾ ಸಂಸ್ಥೆಯು ಇದಕ್ಕಾಗಿ ಮುಂದಾಳತ್ವವನ್ನು ವಹಿಸಿದೆ.

ಕರ್ನಾಟಕದಲ್ಲಿ ಅಜಾನ ಸಮಯದಲ್ಲಿ ಹನುಮಾನ್ ಚಾಲೀಸಾ ಪಠಣೆ ಮಾಡಿದ್ದರಿಂದ ಪಾಕಿಸ್ತಾನಕ್ಕೆ ಹೊಟ್ಟೆಯುರಿ !

ಪಾಕಿಸ್ತಾನದ ವಿದೇಶಾಂಗ ಸಚಿವಾಲಯವು ಭಾರತದಲ್ಲಿ ಅಜಾನ ಸಮಯದಲ್ಲಿ ಹನುಮಾನ್ ಚಾಲೀಸಾ ಪಠಣ ಮಾಡಿರುವ ಬಗ್ಗೆ ಕಿಡಿಕಾರಿದೆ. ವಿದೇಶಾಂಗ ಸಚಿವಾಲಯದಿಂದ ಪ್ರಸಾರ ಮಾಡಲಾಗಿರುವ ಪತ್ರಿಕೆಯಲ್ಲಿ, ಈ ಘಟನೆ ಶ್ರೀರಾಮ ಸೇನೆಯ ಪ್ರಮುಖರು ಆಜಾನ್‌ನ ವಿರುದ್ಧ ಮಾಡಿರುವ ಹೇಳಿಕೆಯಿಂದ ನಡೆಯುತ್ತಿದೆ.