ಶಿವ ಮಂದಿರವನ್ನು ಕೆಡವಿ ಮೊಯಿನುದ್ದೀನ್ ಚಿಸ್ತಿ ದರ್ಗಾ ನಿರ್ಮಿಸಲಾಗಿದ್ದೂ, ಅದನ್ನು ಹಿಂದೂಗಳಿಗೆ ನೀಡಿ !

ಹಿಂದೂ ಸೇನೆಯಿಂದ ಅಜ್ಮೇರ (ರಾಜಸ್ಥಾನ) ಜಿಲ್ಲಾ ನ್ಯಾಯಾಲಯದಲ್ಲಿ ಅರ್ಜಿ !

ಅಜ್ಮೇರ (ರಾಜಸ್ಥಾನ) – ಅಜ್ಮೇರ ಜಿಲ್ಲಾ ನ್ಯಾಯಾಲಯದಲ್ಲಿ ಇಲ್ಲಿನ ಪ್ರಸಿದ್ಧ ಮೊಯಿನುದ್ದೀನ್ ಚಿಸ್ತಿ ದರ್ಗಾ ವಿರುದ್ಧ ದಿವಾಣಿ ಮೊಕದ್ದಮೆ ದಾಖಲಿಸಲಾಗಿದೆ. ‘ಅಜ್ಮೇರ ದರ್ಗಾವು ಶಿವನ ದೇವಸ್ಥಾನವಾಗಿದ್ದೂ ಈ ಮಂದಿರವನ್ನು ವಶಕ್ಕೆ ಪಡೆದು ಅಲ್ಲಿ ದರ್ಗಾವನ್ನು ನಿರ್ಮಿಸಲಾಗಿದೆ. ದರ್ಗಾ ಸಮಿತಿಗೆ ಜಾಗದ ಒತ್ತುವರಿ ತೆರವಿಗೆ ಸೂಚನೆ ನೀಡಬೇಕು, ಹಾಗೆಯೇ ಈ ಸ್ಥಳವನ್ನು ಶ್ರೀ ಸಂಕಟಮೋಚನ ಮಹಾದೇವ ವಿರಾಜಮಾನ ದೇವಸ್ಥಾನ ಎಂದು ಘೋಷಿಸಬೇಕು ಹಾಗೂ ದೇವಾಲಯದ ಪುನರ್ ನಿರ್ಮಾಣಕ್ಕೆ ಕೇಂದ್ರ ಸರಕಾರಕ್ಕೆ ಸೂಚನೆ ನೀಡಬೇಕು’, ಎಂದು ಒತ್ತಾಯಿಸಿ ಅರ್ಜಿ ಸಲ್ಲಿಸಲಾಗಿದೆ. ಹಿಂದೂ ಸೇನೆಯ ಅಧ್ಯಕ್ಷ ವಿಷ್ಣು ಗುಪ್ತಾ ಇವರು ಈ ಅರ್ಜಿ ದಾಖಲಿಸಿದ್ದಾರೆ.

1. ಈ ಅರ್ಜಿಯಲ್ಲಿ ಭಾರತೀಯ ಪುರಾತತ್ವ ಸಮೀಕ್ಷಾ ಇಲಾಖೆಗೆ ದರ್ಗಾದ ಸಮೀಕ್ಷೆ ನಡೆಸಲು ಆದೇಶ ನೀಡುವಂತೆ ವಿನಂತಿಸಲಾಗಿದೆ. ಮುಖ್ಯ ದ್ವಾರದ ಛಾವಣಿಯ ವಿನ್ಯಾಸವು ಹಿಂದೂ ವಾಸ್ತುಶೈಲಿಯ ಪ್ರಕಾರವಾಗಿದೆ. ಇದರಿಂದ ಇದು ದೇವಸ್ಥಾನವೆಂದು ಸಾಬೀತಾಗುತ್ತದೆ.

2. ಈ ಅರ್ಜಿಯಲ್ಲಿ, ಈ ಮೇಲ್ಛಾವಣಿಗಳ ವಸ್ತು ಮತ್ತು ಶೈಲಿಗಳ ಹಿಂದೂ ಮೂಲ ಸ್ಪಷ್ಟವಾಗಿ ಒತ್ತಿಹೇಳುತ್ತದೆ ಎಂದು ಹೇಳಲಾಗಿದೆ. ದುರದೃಷ್ಟವಶಾತ್, ಬಣ್ಣ ಮತ್ತು ಇತರ ಪ್ರಕ್ರಿಯೆಗಳಿಂದಾಗಿ ಅವುಗಳ ಉತ್ಕೃಷ್ಟ ಕೆತ್ತನೆಯನ್ನು ಮುಚ್ಚಿಡಲಾಗಿದೆ. ಈ ಬಣ್ಣವನ್ನು ತೆಗೆದು ಹಾಕಿದರೆ ವಾಸ್ತವ ಬಹಿರಂಗವಾಗುವುದು. ಇಲ್ಲಿನ ನೆಲಮಾಳಿಗೆಯು ಗರ್ಭಗುಡಿಯಾಗಿದೆ.

3. ವಿಷ್ಣು ಗುಪ್ತಾ ಇವರು ಅರ್ಜಿಯಲ್ಲಿ, ‘ಅಜ್ಮೇರ ದರ್ಗಾ ಖಾಲಿ ಜಾಗದಲ್ಲಿ ನಿರ್ಮಿಸಲಾಗಿತ್ತು’, ಎಂದು ತಿಳಿಸುವ ಯಾವುದೇ ದಾಖಲೆಗಳು ಲಭ್ಯವಿಲ್ಲ’. ಬದಲಾಗಿ ಐತಿಹಾಸಿಕ ವರದಿಗಳು ಆ ಸ್ಥಳದಲ್ಲಿ ಮಹಾದೇವ ದೇವಸ್ಥಾನ ಮತ್ತು ಜೈನ ಮಂದಿರವಿತ್ತು ಎಂದು ಸೂಚಿಸುತ್ತವೆ. ಅಲ್ಲಿ ಹಿಂದೂ ಮತ್ತು ಜೈನ ಭಕ್ತರು ತಮ್ಮ ದೇವತೆಗಳನ್ನು ಪೂಜಿಸುತ್ತಿದ್ದರು. ಇಲ್ಲಿ ಹಿಂದೂಗಳು ಭಗವಾನ ಶಂಕರನ ಜಲಾಭಿಷೇಕವನ್ನು ಮಾಡುತ್ತಿದ್ದರು.

4. ಈ ಅರ್ಜಿಯಲ್ಲಿ ಅಜ್ಮೇರ ನಿವಾಸಿ ಹರವಿಲಾಸ ಶಾರದಾ ಇವರು 1911 ರಲ್ಲಿ ಬರೆದ ‘ಐತಿಹಾಸಿಕ ಮತ್ತು ವಿವರಣಾತ್ಮಕ’ ಪುಸ್ತಕದ ಸಂದರ್ಭವನ್ನು ಉಲ್ಲೇಖಿಸಲಾಗಿದೆ. ಇದರಲ್ಲಿ ಸಧ್ಯದ 75 ಅಡಿ ಎತ್ತರದ ದ್ವಾರದ ನಿರ್ಮಾಣಕ್ಕಾಗಿ ದೇವಸ್ಥಾನದ ರಾಶಿಯನ್ನು ಉಪಯೋಗಿಸಲಾಗಿದೆಯೆಂದು ಹೇಳಲಾಗಿದೆ. ಹರವಿಲಾಸ ಶಾರದಾ ಇವರು `ರಾಯಲ್ ಏಷ್ಯಾಟಿಕ್ ಬ್ರಿಟನ್ ಮತ್ತು ಐರ್ಲೆಂಡ್’ ಸದಸ್ಯರಾಗಿದ್ದರು. ಇದಲ್ಲದೇ ಅವರು ಅಜ್ಮೇರನ ಹೆಚ್ಚುವರಿ ಆಯುಕ್ತರಾಗಿದ್ದರು.

5. ವಿಷ್ಣು ಗುಪ್ತಾ ಅವರ ನ್ಯಾಯವಾದಿ ಶಶಿ ರಂಜನ್ ಕುಮಾರ್ ಸಿಂಗ್ ಇವರ ಮೂಲಕ ಅರ್ಜಿ ದಾಖಲಿಸಿದ್ದಾರೆ. ಇದರ ವಿಚಾರಣೆ ಅಕ್ಟೋಬರ್ 10 ರಂದು ನಡೆಯುವ ಸಾಧ್ಯತೆ ಇದೆ.

ದರ್ಗಾ ಸಮಿತಿಯಿಂದ ದಾವೆ ನಿರಾಕರಣೆ !

ಮುಸಲ್ಮಾನರು, ಅಜ್ಮೇರ ದರ್ಗಾ ಅವರ ಸೂಫಿ ಪಂಥದ ಸಂತ ಖ್ವಾಜಾ ಮೊಯಿನುದ್ದೀನ್ ಚಿಶ್ತಿಯ ಗೋರಿ ಎಂದು ಹೇಳಿದ್ದಾರೆ. ಅಖಿಲ ಭಾರತೀಯ ಸೂಫಿ ಸಜ್ಜಾಪ್ರದಾನ ಪರಿಷತ್ತಿನ ಅಧ್ಯಕ್ಷ ನಸಿರುದ್ದೀನ್ ಚಿಶ್ತಿ ಮತ್ತು ದರ್ಗಾ ದಿವಾನ ಸೈಯದ್ ಜೈನುಲ್ ಅಬೇದಿನ್ ನ ಉತ್ತರಾಧಿಕಾರಿ ಮತ್ತು ದರ್ಗಾ ಸೇವಕರ ಸಂಘಟನೆ ಅಂಜುಮನ್ ಸೈಯದ್ ಜಗದಾನ ಕಾರ್ಯದರ್ಶಿ ಸರವರ ಚಿಶ್ತಿ ಅವರು ವಿಷ್ಣು ಸೇನ ಅವರ ಮನವಿ ನಿರಾಧಾರ ಎಂದು ಹೇಳಿದ್ದಾರೆ. ಅವರು, ಧಾರ್ಮಿಕ ಸ್ಥಳಗಳ ವಿರುದ್ಧ ಷಡ್ಯಂತ್ರ ನಡೆಸಿದರೆ ಅದನ್ನು ಸಹಿಸಿಕೊಳ್ಳುವುದಿಲ್ಲ. ಇತಿಹಾಸ ನೋಡಿದರೆ, ದರ್ಗಾ ಖ್ವಾಜಾ ಸಾಹೇಬರ ವಿಷಯದಲ್ಲಿ ಎಂದಿಗೂ ಆಕ್ಷೇಪಿಸಲಾಗಿಲ್ಲ. ಮೊಗಲರಿಂದ ಖಿಲಜಿ ಮತ್ತು ತುಘಲಕ ವರೆಗೆ ಹಿಂದೂ ರಾಜರು ಮತ್ತು ಮರಾಠರು ಕೂಡ ದರ್ಗಾಗಳನ್ನು ಬಹಳ ಗೌರವದಿಂದ ನೋಡಿದ್ದಾರೆ ಮತ್ತು ಅವರ ಶ್ರದ್ಧೆಯನ್ನು ವ್ಯಕ್ತಪಡಿಸಿದ್ದಾರೆ ಎಂದು ಹೇಳಿದರು.