ಮಾಲ್ಡೀವ್ಸ್‌ನಲ್ಲಿ ಭಾರತೀಯ ಪ್ರವಾಸಿಗರ ಸಂಖ್ಯೆ 50 ಸಾವಿರಕ್ಕಿಂತ ಕಡಿಮೆ

9 ತಿಂಗಳಲ್ಲಿ 88 ಸಾವಿರ ಭಾರತೀಯ ಪ್ರವಾಸಿಗರು ಮಾಲ್ಡೀವ್ಸ್ ಗೆ ಭೇಟಿ ನೀಡಿದ್ದಾರೆ

ಮಾಲೆ (ಮಾಲ್ಡೀವ್ಸ್) – ಭಾರತೀಯ ಪ್ರವಾಸಿಗರು ಮಾಲ್ಡೀವ್ಸ್‌ ಮೇಲೆ ಅಘೋಷಿತ ಬಹಿಷ್ಕಾರ ಹಾಕಿದ ನಂತರ ಮಾಲ್ಡೀವ್ ಸರಕಾರವು ಭಾರತೀಯ ಪ್ರವಾಸಿಗರನ್ನು ಆಕರ್ಷಿಸಲು ಶ್ರಮಿಸುತ್ತಿದೆ; ಆದರೆ ಇದರಲ್ಲಿ ಅವರಿಗೆ ಯಶಸ್ಸು ಸಿಗುತ್ತಿಲ್ಲವೆಂದು ಕಂಡು ಬರುತ್ತಿದೆ. ಇದರಿಂದ ಈಗಾಗಲೇ ಅದರ ಆರ್ಥಿಕ ವ್ಯವಸ್ಥೆಯ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ.

ಮಾಲ್ಡೀವ್ಸ್‌ಗೆ ಭಾರತೀಯ ಪ್ರವಾಸಿಗರ ಸಂಖ್ಯೆ ಈ ವರ್ಷ 50 ಸಾವಿರಕ್ಕೂ ಹೆಚ್ಚು ಕಡಿಮೆಯಾಗಿದೆ. ಮಾಲ್ಡೀವ್ಸ್ ಪ್ರವಾಸೋದ್ಯಮ ಸಚಿವಾಲಯದ ಅಂಕಿಅಂಶಗಳ ಪ್ರಕಾರ, ಕಳೆದ ವರ್ಷ ಸೆಪ್ಟೆಂಬರ್ 24 ರವರೆಗೆ ಭಾರತದಿಂದ 1 ಲಕ್ಷ 46 ಸಾವಿರದ 57 ಪ್ರವಾಸಿಗರು ಮಾಲ್ಡೀವ್ಸ್‌ಗೆ ಬಂದಿದ್ದರು. ಅದೇ ಹೊತ್ತಿಗೆ ಈ ವರ್ಷ ಸೆಪ್ಟೆಂಬರ್ 24ರವರೆಗೆ ಭಾರತಕ್ಕೆ ಬಂದಿರುವ ಪ್ರವಾಸಿಗರ ಸಂಖ್ಯೆ ಕೇವಲ 88 ಸಾವಿರದ 202 ಆಗಿದೆ. ಈ ರೀತಿ ಭಾರತೀಯ ಪ್ರವಾಸಿಗರ ಸಂಖ್ಯೆ 57 ಸಾವಿರದ 855 ರಷ್ಟು ಕಡಿಮೆಯಾಗಿದೆ.

ಸಂಪಾದಕೀಯ ನಿಲುವು

ಭಾರತ ವಿರೋಧಿ ಮತ್ತು ಚೀನಾಪ್ರೇಮಿ ಮಾಲ್ಡೀವ್ಸ್ ವಿರುದ್ಧ ಭಾರತೀಯರು ಕಠಿಣ ನಿಲುವು ತೆಗೆದುಕೊಂಡಿರುವಾಗ 88 ಸಾವಿರ ಭಾರತೀಯ ಪ್ರವಾಸಿಗರು ಅಲ್ಲಿಗೆ ಹೇಗೆ ಹೋಗುತ್ತಾರೆ ? ಎನ್ನುವ ಪ್ರಶ್ನೆ ಉದ್ಭವಿಸಿದೆ. ಈ ಪ್ರವಾಸಿಗರು ಯಾರು ? ಎಂದು ತನಿಖೆಯಾಗಬೇಕು !