ಅಮೇರಿಕೆಯಿಂದ ದೊರೆಯುವ ಆರ್ಥಿಕ ಸಹಾಯಕ್ಕೆ ನೇಪಾಳಿ ಜನರಿಂದ ವಿರೊಧ

ಅಮೇರಿಕಾ ಚೀನಾದ ಶತ್ರು ಆಗಿದ್ದರಿಂದ ಚೀನಾದ ಓಲೈಕೆಯಿಂದಾಗಿ ನೇಪಾಳದಿಂದ ವಿರೋದ ವ್ಯಕ್ತವಾಗುತ್ತಿದೆಯೇ ? ಇದನ್ನು ಅಮೇರಿಕಾ ಕಂಡು ಹಿಡಿಯುವುದೇ? – ಸಂಪಾದಕರು

ಕಠ್ಮಂಡು (ನೇಪಾಳ) – ಅಮೇರಿಕಾದ ಸರಕಾರದ ಅಂಗಸಂಸ್ಥೆಯಾದ ‘ದಿ ಮಿಲೆನಿಯಮ್ ಚಾಲೆಂಜ್ ಕಾರ್ಪೋರೇಷನ್’ (ಎಮ್.ಸಿ.ಸಿ.)ಯು ನೇಪಾಳದಲ್ಲಿ ೨೦೧೭ ರಲ್ಲಿ ಮೂಲಭೂತ ಸೌಕರ್ಯ ಯೋಜನೆಗಳಿಗಾಗಿ ಶತಕೋಟಿ ರೂಪಾಯಿಗಳ ಅನುದಾನವನ್ನು ಅನುಮೊದಿಸಿದೆ. ಇದರಲ್ಲಿ ೩೦೦ ಕಿ.ಮೀ. ಉದ್ದದ ವಿದ್ಯುತ ವಹನ ಮಾರ್ಗ ಮತ್ತು ರಸ್ತೆ ಸುಧಾರಣೆ ಯೋಜನೆ ಒಳಗೊಂಡಿದೆ. ಈ ಯೋಜನೆಯನ್ನು ನೇಪಾಳಿ ಸಂಸದನಲ್ಲಿ ಫೆಬ್ರುವರಿ ೨೦, ೨೦೨೨ರಂದು ಅನುಮೊದನೆಗಾಗಿ ಮಂಡಿಸಲಾಯಿತು. ನೇಪಾಳಿ ಜನರು ಮೂಲಭೂತ ಸೌಕರ್ಯ ಯೋಜನೆಯನ್ನು ನಿರ್ಮಿಸುವ ಯೋಜನೆಗಳನ್ನು ವಿರೋಧಿಸುತ್ತಿದ್ದಾರೆ. ಈ ಯೋಜನೆಯ ವಿರೋಧಿಸುವುದಕ್ಕಾಗಿ ಕಠ್ಮಂಡುವಿನಲ್ಲಿ ಜಮಾಯಿಸಿದ ಪ್ರತಿಭಟನಾಕಾರರ ಮೇಲೆ ಪೋಲಿಸರು ಜಲಫಿರಂಗಿ ಹಾರಿಸಿದರು ಹಾಗೆಯೇ ಅಶ್ರು ವಾಯು ಕೂಡಾ ಉಪಯೋಗಿಸಿದರು. ಆ ವೇಳೆ ಪೋಲಿಸರೊಂದಿಗೆ ನಡೆದ ಘರ್ಷಣೆಯಲ್ಲಿ ಕೆಲವು ಪ್ರತಿಭಟನಾಕಾರರು ಗಾಯಗೊಂಡಿದ್ದಾರೆ.

೧. ನೇಪಾಳದ ಅಧಿಕಾರಿಗಳು ನೀಡಿದ ಮಾಹಿತಿ ಪ್ರಕಾರ, ಅಮೇರಿಕಾದ ಆರ್ಥಿಕ ನೆರವು ಅನುದಾನದ ರೂಪದಲ್ಲಿರುವುದರಿಂದ ಅದನ್ನು ಮರು ಪಾವತಿಸಲಾಗುವದಿಲ್ಲ ಮತ್ತು ಬೇರೆ ಯಾವುದೇ ಷರತ್ತುಗಳನ್ನು ವಿಧಿಸಲಾಗಿಲ್ಲ.

೨. ವಿರೋಧಿಗಳು ಮಾತ್ರ ‘ಈ ಒಪ್ಪಂದವು ನೇಪಾಳದ ಸಾರ್ವಭೌಮತ್ವ ಮತ್ತು ಕಾನೂನನ್ನು ದುರ್ಬಲಗೊಳಿಸುತ್ತದೆ; ಏಕೆಂದರೆ ಈ ಯೋಜನೆಗಳ ನಿರ್ಧಾರ ಕೈಗೊಳ್ಳುವ ಕಾರ್ಯ ಜನಪ್ರತಿನಿಧಿಗಳ ಮೇಲುಸ್ತುವಾರಿಯಲ್ಲಿ ಇರುವದಿಲ್ಲ’, ಎಂದು ಅಕ್ಷೇಪ ವ್ಯಕ್ತಪಡಿಸಿದ್ದಾರೆ.

೩. ನೇಪಾಳದಲ್ಲಿರುವ ಅಮೇರಿಕದ ರಾಯಭಾರಿ ಕಚೆರಿಯು, ‘ಈ ಯೋಜನೆಯು ಅಮೇರಿಕಾದಿಂದ ನೇಪಾಳದ ಜನರಿಗಾಗಿ ಉಡುಗೊರೆಯಾಗಿದೆ’ ಎಂದು ಹೇಳಿದೆ.