ತಮಿಳುನಾಡಿನ ದೇವಸ್ಥಾನದಿಂದ 10 ವರ್ಷಗಳ ಹಿಂದೆ ಕಳ್ಳತನವಾಗಿದ್ದ ಭಗವಾನ್ ಹನುಮಂತನ ಪ್ರಾಚೀನ ಮೂರ್ತಿ ಆಸ್ಟ್ರೇಲಿಯಾದಿಂದ ಭಾರತಕ್ಕೆ ತರುವರು

( 10 ವರ್ಷಗಳ ಹಿಂದೆ ಕಳ್ಳತನವಾದ ಭಗವಾನ ಹನುಮಂತನ ಪ್ರಾಚೀನ ಮೂರ್ತಿ )

ನವದೆಹಲಿ – ತಮಿಳುನಾಡಿನ ಒಂದು ದೇವಸ್ಥಾನದಿಂದ 10 ವರ್ಷಗಳ ಹಿಂದೆ ಕಳ್ಳತನವಾದ ಭಗವಾನ ಹನುಮಂತನ ಪ್ರಾಚೀನ ಮೂರ್ತಿಯು ಆಸ್ಟ್ರೇಲಿಯದಲ್ಲಿ ಪತ್ತೆಯಾಗಿದ್ದೂ ಈಗ ಅದನ್ನು ಭಾರತಕ್ಕೆ ತರುವರು, ಎಂದು ಕೇಂದ್ರ ಸಂಸ್ಕೃತಿ ಮಂತ್ರಿ ಜಿ. ಕಿಶನ್ ರೆಡ್ಡಿಯವರು ಮಾಹಿತಿ ನೀಡಿದ್ದಾರೆ. ಈ ಮೂರ್ತಿ ಕಂಚಿನದ್ದಾಗಿದೆ. ಎಪ್ರಿಲ್ 9, 2012 ರಂದು ತಮಿಳುನಾಡಿನ ಅರಿಯಾಲುರ ಜಿಲ್ಲೆಯ ವೆಲ್ಲೂರು ಗ್ರಾಮದ ವರ್ದರಾಜಾ ಪೆರುಮಲ ದೇವಸ್ಥಾನದಿಂದ ಈ ಮೂರ್ತಿಯನ್ನು ಕದಿಯಲಾಗಿತ್ತು. 2014 ರಲ್ಲಿ ಆಸ್ಟ್ರೇಲಿಯದಲ್ಲಿ ಈ ಮೂರ್ತಿಯ 29 ಲಕ್ಷ ರೂಪಾಯಿಗೆ ಹರಾಜು ಮಾಡಲಾಗಿತ್ತು. ಹರಾಜು ಮಾಡುವವರಿಗೆ ಹಾಗೂ ಮೂರ್ತಿ ಖರೀದಿಸಿದವರಿಗೆ ಈ ಮೂರ್ತಿಯು ಕಳ್ಳತನದ್ದಾಗಿದೆ ಎಂದು ತಿಳಿದಿರಲಿಲ್ಲ.