ನವದೆಹಲಿ – ರಷ್ಯಾದಿಂದ ಆಗುತ್ತಿರುವ ದಾಳಿಯ ಹಿನ್ನೆಲೆಯಲ್ಲಿ ಯುಕ್ರೆನ ಭಾರತದ ಹತ್ತಿರ ಸಹಾಯಕ್ಕಾಗಿ ಅಂಗಲಾಚಿದೆ. ಇದೇ ಯುಕ್ರೆನ್ ಭಾರತವು 1998 ರಲ್ಲಿ ಮಾಡಿದ ಪರಮಾಣು ಪರೀಕ್ಷೆಗೆ ವಿಶ್ವ ಸಂಸ್ಥೆಯ ಭದ್ರತಾ ಪರಿಷತ್ತಿನಲ್ಲಿ ವಿರೋಧಿಸಿತ್ತು ಹಾಗೆಯೇ ಈ ಭದ್ರತಾ ಪರಿಷತ್ತಿನಲ್ಲಿ ಭಾರತದ ವಿರೋಧದಲ್ಲಿ ಮತದಾನವೂ ಮಾಡಿತ್ತು. ಯುಕ್ರೆನಿನ ಈ ಭಾರತ ವಿರೋಧಿ ನಿಲುವಿನ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಚರ್ಚೆಯು ನಡೆಯುತ್ತಿದೆ. 1998 ರಲ್ಲಿ ಜಗತ್ತಿನೆಲ್ಲೆಡೆಯ 25 ದೇಶಗಳು ಭಾರತಕ್ಕೆ ವಿರೋಧಿಸಿತ್ತು.
Did you know: Ukraine had condemned India after the 1998 Nuclear tests, voted against India at the UNSChttps://t.co/5J7C02huMK
— OpIndia.com (@OpIndia_com) February 24, 2022
ಯುದ್ಧದ ಮೊದಲನೆ ದಿನ ಅಂದರೆ ಫೆಬ್ರವರಿ 24 ರಂದು ಯುಕ್ರೆನಿನ ರಾಷ್ಟ್ರಪತಿ ವ್ಲಾದಿಮಿರ ಝೆಲೆಂಸಕೀಯ ಸರಕಾರವು ‘ರಷ್ಯಾದೊಂದಿಗಿನ ಭಾರತದ ಸಂಬಂಧವು ಉತ್ತಮವಾಗಿದೆ. ಆದ್ದರಿಂದ ರಷ್ಯಾದ ದಾಳಿಯನ್ನು ತಡೆಯುದಕ್ಕಾಗಿ ಭಾರತವು ಒಳ್ಳೆಯ ನಿರ್ಣಾಯಕ ಪಾತ್ರವನ್ನು ನಿಭಾಯಿಸಬಲ್ಲದು. ಆದ್ದರಿಂದ ಪ್ರದಾನಮಂತ್ರಿ ನರೇಂದ್ರ ಮೋದಿಯವರು ಕೂಡಲೇ ಹಸ್ತಕ್ಷೇಪ ಮಾಡಿ ರಷ್ಯಾ ಹಾಗೂ ಯುಕ್ರೆನನ ಪ್ರಧಾನಮಂತ್ರಿಗಳೊಂದಿಗೆ ಸಂಪರ್ಕ ಸಾಧಿಸಬೇಕು’, ಎಂದು ಪ್ರಧಾನಮಂತ್ರಿ ಮೋದಿಯವರಿಗೆ ಕರೆ ನೀಡಿದ್ದಾರೆ.