ಯುದ್ಧ ಘೋಷಿಸುತ್ತಾ ಯುಕ್ರೇನನ ಮೇಲೆ ರಶಿಯಾದಿಂದ ದಾಳಿ

  • ಯುಕ್ರೇನನ ೪೦ ಸೈನಿಕರು ಹಾಗೂ ೧೦ ನಾಗರಿಕರ ಸಾವು

  • ಯುರೋಪಿಯನ್ ಯುನಿಯನ್ ರಶಿಯಾದ ಮೇಲೆ ಕಠಿಣ ನಿರ್ಬಂಧ ಹೇರಲಿದೆ

  • ಭಾರತವು ಹಸ್ತಕ್ಷೇಪ ಮಾಡುವಂತೆ ಯುಕ್ರೇನನ ಬೇಡಿಕೆ

  • ರಶಿಯಾದೊಂದಿಗಿನ ರಾಜಕೀಯ ಸಂಬಂಧವನ್ನು ಮುರಿದ ಯುಕ್ರೇನ

ಕೀವ (ಯುಕ್ರೇನ) – ರಶಿಯಾದ ಅಧ್ಯಕ್ಷ ವ್ಲಾದಮೀರ ಪುತೀನರವರು ಯುಕ್ರೇನನ ವಿರುದ್ಧ ಯುದ್ಧವನ್ನು ಘೋಷಿಸಿ ಕೆಲವೇ ಕ್ಷಣಗಳಲ್ಲಿ ಯುಕ್ರೇನನ ರಾಜಧಾನಿ ಕೀವ ಸೇರಿದಂತೆ ಅನೇಕ ನಗರಗಳು ಬಾಂಬ್‌ಸ್ಫೋಟದಿಂದ ತಲ್ಲಣಿಸಿದವು. ರಶಿಯಾವು ಯುಕ್ರೇನನ ಮೇಲೆ ನಾಲ್ಕೂ ದಿಕ್ಕುಗಳಿಂದ ದಾಳಿ ನಡೆಸಿತು. ರಶಿಯಾವು ಯುಕ್ರೇನ ಮೂಲಭೂತ ಸೌಕರ್ಯಗಳ ಸ್ಥಾನಗಳಲ್ಲಿ ಕ್ಷಿಪಣಿಗಳಿಂದ ಸುರಿಮಳೆ ಗೈದಿತು, ಹಾಗೂ ಅದರ ೨ ವಿಮಾನ ನೆಲೆಗಳನ್ನೂ ಕೂಡ ನಾಶ ಮಾಡಿದೆ. ಈ ದಾಳಿಯ ಸಮಯದಲ್ಲಿ ರಶಿಯಾದ ವಿಮಾನವನ್ನು ಬೀಳಿಸಿರುವ ಯುಕ್ರೆನಿನ ದಾವೆಯನ್ನು ಪುತಿನರವರು ತಳ್ಳಿ ಹಾಕಿದ್ದಾರೆ. ಈ ಎಲ್ಲಾ ಘಟನೆಗಳ ಬಳಿಕ ಯುಕ್ರೇನ ದೇಶದಲ್ಲಿನ ಎಲ್ಲಾ ವಿಮಾನಗಳ ಹಾರಾಟವನ್ನು ರದ್ದು ಪಡಿಸಿತು. ‘ಹಿಂದೆ ಯುಕ್ರೇನನಲ್ಲಿನ ನಾಗರಿಕರ ಸುರಕ್ಷೆಗೋಸ್ಕರ ಈ ದಾಳಿ ಅಗತ್ಯವಿತ್ತು’, ಎಂದು ಪುತಿನರವರು ಹೇಳಿದ್ದರು. ‘ಜೊತೆಗೆ ಬೇರೆ ದೇಶಗಳು ರಶಿಯಾದ ಕಾರ್ಯಾಚರಣೆಯಲ್ಲಿ ಹಸ್ತಕ್ಷೇಪ ನಡೆಸಲು ಪ್ರಯತ್ನಿಸಿದರೆ ಅವರು ಎಂದೂ ಕೂಡ ಎಂದೂ ಅನುಭವಿಸದೆ ಇರುವಂತಹ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ’, ಎಂದು ಪುತಿನರವರು ಎಚ್ಚರಿಕೆ ನೀಡಿದರು.

ರಶಿಯಾದ ದಾಳಿಯಲ್ಲಿ ಯುಕ್ರೇನನ ೪೦ ಸೈನಿಕರು ಹಾಗೂ ೧೦ ನಾಗರಿಕರ ಸಾವು : ರಶಿಯಾಗೂ ಹಾನಿ !

‘ರಾಯಟರ್ಸ’ ವಾರ್ತಾವಾಹಿನಿಯು ನೀಡಿರುವ ಮಾಹಿತಿಗೆ ಅನುಸಾರವಾಗಿ ರಶಿಯಾ ನಡೆಸಿರುವ ದಾಳಿಯಲ್ಲಿ ಯುಕ್ರೇನನ ೪೦ ಸೈನಿಕರು ಹಾಗೂ ೧೦ ನಾಗರಿಕರು ಮೃತಪಟ್ಟಿದ್ದಾರೆ. ಯುಕ್ರೇನ ನೀಡಿರುವ ಮಾಹಿತಿಯನುಸಾರ ಅದರ ಸೈನಿಕರು ರಶಿಯಾ ಪ್ರೇಮಿ ೫೦ ಪ್ರತ್ಯೇಕತಾವಾದಿಗಳನ್ನು ಕೊಂದಿದೆ. ರಶಿಯಾದ ೬ ವಿಮಾನಗಳನ್ನು ಹಾಗೂ ೧ ಹೆಲಿಕಾಪ್ಟರ ಅನ್ನು ಹೊಡೆದುರುಳಿಸಿರುವುದಾಗಿ ಯುಕ್ರೇನ ಹೇಳಿದೆ.

ಬೆಳಿಗ್ಗೆಯಿಂದ ರಶಿಯಾ-ಯುಕ್ರೇನ ಯುದ್ಧದ ಘಟನಾವಳಿ !

೧. ರಶಿಯಾದ ಅಧ್ಯಕ್ಷರಾದ ವ್ಲಾದಿಮಾರ ಪುತೀನರವರು ರಶಿಯಾದ ಕಾಲಗಣನೆಗನುಸಾರ ಮಧ್ಯರಾತ್ರಿ ೨ ಘಂಟೆ ೫೫ ನಿಮಿಷಗಳಿಂದ ಒಂದು ದೂರದರ್ಶನದ ಮೂಲಕ ಯುಕ್ರೇನನ ಪೂರ್ವ ಡೊನಬಾಸ ಭಾಗದಲ್ಲಿ ಸೈನಿಕರ ಕಾರ್ಯಚರಣೆ ಮಾಡುವುದಾಗಿ ಘೋಷಿಸಿತು.

೨. ಪುತಿನರವರು ಈ ದಾಳಿಯು ರಶಿಯಾ ತನ್ನ ಸ್ವಸಂರಕ್ಷಣೆಗೋಸ್ಕರ ಮಾಡುತ್ತಿರುವುದಾಗಿ ಹೇಳಿ ಯುಕ್ರೇನಿಯನ ಸೈನಿಕರು ತಮ್ಮ ಶಸ್ತ್ರಗಳನ್ನು ಕೆಳಗಿಡಲು ಕರೆ ನೀಡಿದರು.

೩. ಯುಕ್ರೇನನನ್ನು ಎಲ್ಲಾ ಕಡೆಯಿಂದಲೂ ರಶಿಯಾದ ಸೈನ್ಯ ಹಾಗೂ ಟ್ಯಾಂಕ್‌ಗಳನ್ನು ಸುತ್ತುವರೆದಿದೆ. ರಶಿಯಾದ ಸೈನ್ಯದ ಒಂದು ತುಕಡಿಯು ಯುಕ್ರೇನನ ರಾಜಧಾನಿ ಕೀವನ ಉತ್ತರದಲ್ಲಿರುವ ಬೆಲಾರೂಸನಿಂದ ಹಾಗೂ ಒಂದು ತುಕಡಿಯು ದಕ್ಷಿಣದಲ್ಲಿರುವ ಕ್ರಿಮಿಯಾದಿಂದ ಪ್ರವೇಶಿಸಿದೆ. ಈ ಪ್ರದೇಶವನ್ನೇ ರಶಿಯಾವು ೨೦೧೪ರಲ್ಲಿ ಯಕ್ರೇನನಿಂದ ಕಸಿದುಕೊಂಡಿತ್ತು.

೪. ರಶಿಯಾದ ದಾಳಿಯಲ್ಲಿ ೮ ನಾಗರಿಕರು ಸಾವನ್ನಪ್ಪಿರುವ ಮಾಹಿತಿಯನ್ನು ಯುಕ್ರೇನ ನೀಡಿದೆ.

೫. ಯುಕ್ರೇನನಲ್ಲಿ ನಾಗರಿಕರು ತಮ್ಮ ಜೀವವನ್ನು ಕೈಯ್ಯಲ್ಲಿ ಹಿಡಿದುಕೊಂಡು ಜೀವಿಸುತ್ತಿದ್ದಾರೆ. ಹಲವರು ತಾವು ವಾಸಿಸುತ್ತಿರುವ ಸ್ಥಾನದಿಂದ ಓಡಿ ಹೋಗಿದ್ದಾರೆ. ಯುಕ್ರೇನನ ನಾಗರಿಕರಿಗೆ ಈ ದಾಳಿಯು ಅಪೇಕ್ಷಿತವಾಗಿದ್ದರೂ ಕೂಡ ಅದರ ವ್ಯಾಪ್ತಿ ಅನಪೇಕ್ಷಿತವಾಗಿತ್ತು.

೬. ರಶಿಯಾದ ದಾಳಿಯಿಂದ ತೈಲದ ಬೆಲೆಯಲ್ಲಿ ೭ ವರ್ಷಗಳಲ್ಲಿ ಮೊದಲ ಬಾರಿ ೧೦೦ ಡಾಲರ ಪ್ರತಿ ಬ್ಯಾರಲಗೆ ತಲುಪಿತು.

೭. ರಶಿಯಾದ ಚಾಲನೆ (ರೂಬಲ) ಡಾಲರ ಹಾಗೂ ಯುರೋಪನ ತುಲನೆಯಲ್ಲಿ ಎಲ್ಲ ಕಾಲಕ್ಕಿಂತಲೂ ಕೆಳಮಟ್ಟಕ್ಕೆ ಇಳಿದಿದೆ.

ಯುಕ್ರೇನನಲ್ಲಿ ‘ಮಾರ್ಶಲ ಲಾ’ ಜಾರಿ !

ಯುಕ್ರೇನವು ದೇಶದಲ್ಲಿ ‘ಮಾರ್ಶಲ ಲಾ’ ಅನ್ನು ಘೋಷಿಸಿತು. ಯುಕ್ರೇನ ವಿದೇಶಾಂಗ ಸಚಿವ ದಿಮಿತ್ರೊ ಕುಲೆಬಾರವರು ಅಮೇರಿಕಾ ಸೇರಿದಂತೆ ಎಲ್ಲಾ ಪ್ರಮುಖ ದೇಶಗಳನ್ನು ರಶಿಯಾದ ಮೇಲೆ ಕಠಿಣ ನಿರ್ಬಂಧಗಳನ್ನು ಹೇರಲು ನೀಡಿದ ಕರೆಯು ‘ಮಾರ್ಶಲ ಲಾ’ ಎಂಬ ನಾಗರಿಕ ಸರಕಾರದ ಬದಲು ಸೈನ್ಯದ ಮೂಲಕ ಶಾಸಿತ ಕಾಯಿದೆಯಾಗಿದೆ. ಆಪತ್ಕಾಲೀನ ಪರಿಸ್ಥಿತಿಯಲ್ಲಿ, ಸಂಕಟಕ್ಕೆ ಪ್ರತಿಸಾದ ನೀಡಲು ಅಥವಾ ವ್ಯಾಪಿಸಿರುವ ಪ್ರದೇಶದ ಮೇಲೆ ನಿಯಂತ್ರಣ ಪಡೆಯುವುದಕ್ಕಾಗಿ ಮಾರ್ಶಲ ಲಾ ಅನ್ನು ಘೋಷಿಸಲಾಗುತ್ತದೆ. ‘ಮಾರ್ಶಲ ಲಾ’ ಘೋಷಿಸಿದ ಬಳಿಕ ನಾಗರಿಕ ಸ್ವಾತಂತ್ರ್ಯ ಹಾಗೂ ಅದರ ಮೂಲಭೂತ ಅಧಿಕಾರಗಳನ್ನು ರದ್ದು ಪಡಿಸಲಾಗುತ್ತದೆ. ಈ ಕಾಯಿದೆ ಅನ್ವಯವಾದ ತಕ್ಷಣ ನಾಗರಿಕರ ಮುಕ್ತ ಸಂಚಾರ, ಭಾಷಣ ಸ್ವಾತಂತ್ರ್ಯದಂತಹ ಮೂಲಭೂತ ಅಧಿಕಾರಗಳನ್ನು ಸ್ವಲ್ಪ ಕಾಲದವರೆಗೂ ರದ್ದು ಪಡಿಸಲಾಗುತ್ತದೆ.

(ಸೌಜನ್ಯ : India Today)

ರಶಿಯಾವು ಇಲ್ಲಿಯತನಕ ನೋಡದೆ ಇರುವಂತಹ, ಕಠಿಣ ನಿರ್ಬಂಧವನ್ನು ಹೇರುವೆವು ! – ಬ್ರಿಟನ

ಯುರೊಪಿಯನ್ ಯುನಿಯನ್ ರಶಿಯಾದ ಮೇಲೆ ಕಠಿಣ ನಿರ್ಬಂಧ ಹೇರುವುದು : ರಶಿಯಾದ ರಾಷ್ಟ್ರಾಧ್ಯಕ್ಷ ವ್ಲಾದಮಿರ ಪುತೀನರವರು ಯುಕ್ರೇನ ಮೇಲೆ ನಡೆಸಿದ ದಾಳಿ ಪೂರ್ವನಿಯೋಜಿತ ಹಾಗೂ ಅನ್ಯಾಯಕಾರಕವಾಗಿದೆ. ರಶಿಯಾವು ಇಲ್ಲಿಯತನಕ ನೋಡದೆ ಇರುವಷ್ಟು, ಕಠಿಣ ನಿರ್ಬಂಧಗಳನ್ನು ನಾವು ಅದರ ಮೇಲೆ ಹೇರಲಿದ್ದೇವೆ, ಎಂದು ಬ್ರಿಟನನ ವಿದೇಶಾಂಗ ಸಚಿವ ಜೇಮ್ಸ ಕಲೆವಹರ್ಲೀಯವರು ವ್ಯಕ್ತಪಡಿಸಿದರು. ಈ ನಿರ್ಬಂಧಗಳಿಗೆ ತಕ್ಷಣ ಒಪ್ಪಿಗೆ ಸಿಗುವುದು ಹಾಗೂ ಅದು ಇಂದಿನಿಂದಲೇ ಅನ್ವಯವಾಗುವುದು. ನಾವು ಯುಕ್ರೇನನ ನಾಗರಿಕರ ಬೆಂಬಲವಾಗಿದ್ದೇವೆ. ಅವರ ಸುರಕ್ಷೆಗೋಸ್ಕರ ನಾವು ಯುಕ್ರೇನಗೆ ಎಲ್ಲಾ ರೀತಿಯ ಸಹಾಯ ಮಾಡುವೆವು ಎಂದು ಹೇಳಿದರು.
ಯುರೊಪೀಯನ್ ಯುನಿಯನನಿಂದ ರಶಿಯಾದ ಮೇಲೆ ಕಠಿಣ ನಿರ್ಬಂಧಗಳನ್ನು ಹೇರಲು ಕ್ರಮ ಕೈಗೊಳ್ಳಲಾಗುತ್ತಿದೆ. ನಾವು ಯುರೊಪಿಯನ್ ಯುನಿಯನನಲ್ಲಿನ ರಶಿಯಾದ ಆಸ್ತಿಯನ್ನು ಮುಟ್ಟುಗೋಲುಗೊಳಿಸಲಾಗುವುದು ಹಾಗೂ ರಶಿಯಾದ ಬ್ಯಾಂಕುಗಳನ್ನು ಯುರೊಪಿಯನ್ ಆರ್ಥಿಕ ಮಾರುಕಟ್ಟಯಲ್ಲಿ ಪ್ರವೇಶಿಸುವುದನ್ನು ತಡೆಯಲಾಗುವುದು.

ಭಾರತವು ಹಸ್ತಕ್ಷೇಪ ಮಾಡಲಿ ! – ಯುಕ್ರೇನನ ಬೇಡಿಕೆ

ಭಾರತ ಹಾಗೂ ರಶಿಯಾದ ಸಂಬಂಧ ಉತ್ತಮವಾಗಿದೆ. ಆದ್ದರಿಂದ ರಶಿಯಾದ ದಾಳಿಯನ್ನು ತಡೆಯಲು ಭಾರತವು ಒಂದು ಉತ್ತಮ ನಿರ್ಣಾಯಕ ನಿಲುವನ್ನು ನಿರ್ವಹಿಸಬಹುದು. ಆದ್ದರಿಂದ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ತಕ್ಷಣ ಹಸ್ತಕ್ಷೇಪ ಮಾಡಿ ರಶಿಯಾ ಹಾಗೂ ಯುಕ್ರೇನನ ಪ್ರಧಾನಮಂತ್ರಿಗಳೊಂದಿಗೆ ಸಂಪರ್ಕ ಸಾಧಿಸಲಿ, ಎಂದು ಯುಕ್ರೇನ ಭಾರತದಲ್ಲಿನ ರಾಯಭಾರಿ ಇಗೊರ ಪೊಲಿಖಾರವರು ಪ್ರಧಾನಮಂತ್ರಿ ಮೋದಿಯವರಲ್ಲಿ ಕೇಳಿಕೊಂಡಿದ್ದಾರೆ.

ಯುಕ್ರೇನನಲ್ಲಿ ನಾಗರಿಕರು ಬ್ಯಾಂಕಿನಿಂದ ಹಣ ತೆಗೆಯಲು ಮಿತ !

ಯುದ್ಧದ ಹಿನ್ನಲೆಯಲ್ಲಿ ಯುಕ್ರೇನ್‌ನ ನಾಗರಿಕರು ಬ್ಯಾಂಕಿನಿಂದ ಪ್ರತಿದಿನ ಕೇವಲ ೧೦ ಸಾವಿರ ರಿವ್ನಿಯಾ (ಯುಕ್ರೇನ ಚಾಲನೆ)ಯಷ್ಟು ಹಣ ಮಾತ್ರ ತೆಗೆಯಬಹುದು, ಎಂದು ಯುಕ್ರೇನನ ಮಧ್ಯವರ್ತೀ ಬ್ಯಾಂಕ ಘೋಷಿಸಿದೆ. ನಾಗರಿಕರಲ್ಲಿ ಭಯ ನಿರ್ಮಾಣವಾಗಿರುವುದರಿಂದ ಹಣ ತೆಗೆಯುವುದು ಹಾಗೂ ಜೀವನಾವಶ್ಯಕ ವಸ್ತುಗಳನ್ನು ಖರೀದಿಸಲು ಮಾರುಕಟ್ಟೆಯಲ್ಲಿ ನಾಗರಿಕರು ಗುಂಪು ಮಾಡುತ್ತಿದ್ದಾರೆ.

ನಾಗಿರಿಕರು ದೇಶದ ಸುರಕ್ಷಾದಳಗಳಲ್ಲಿ ಭಾಗವಹಿಸಲಿ ! – ಯುಕ್ರೇನ

ಯುಕ್ರೇನಿಯನ ನಾಗರಿಕರು ದೇಶದ ಸುರಕ್ಷಾದಳಗಳಲ್ಲಿ ಭಾಗವಹಿಸಲು ಪ್ರೋತ್ಸಾಹ ನೀಡಲಾಗುತ್ತಿದೆ.

ಸಂಯಮವಹಿಸಲು ಚೀನಾದ ಆವಾಹನೆ !

ಚೀನಾದ ವಿದೇಶಾಂಗ ಮಂತ್ರಾಲಯದ ವಕ್ತಾರರಾದ ಹುಆ ಚುನಯಿಂಗರವರು ಯುಕ್ರೇನನ ಪರಿಸ್ಥಿತಿಗೆ ಸಂಬಂಧಪಟ್ಟಂತೆ ಎಲ್ಲಾ ಘಟಕಗಳನ್ನು ಸಂಯಮವಾಗಿಡಲು ಕರೆ ಮಾಡಿದ್ದಾರೆ. ಚುನಯಿಂಗರವರು ರಶಿಯಾದ ಕೃತಿಗೆ ಮಾತ್ರ ‘ದಾಳಿ’ ಎಂದು ಹೇಳಲಿಲ್ಲ.

ರಶಿಯಾದೊಂದಿಗೆ ಇರುವ ಎಲ್ಲಾ ರಾಜಕೀಯ ಸಂಬಂಧವನ್ನು ಮುರಿದ ಯುಕ್ರೇನ !

ಯುಕ್ರೇನನ ಅಧ್ಯಕ್ಷ ವೊಲೊಡಿಮಿರ ಝೆಲೆನ್ಸ್ಕೀಯವರು ಟ್ವೀಟ ಮಾಡಿ ಯುಕ್ರೇನ ರಶಿಯಾದೊಂದಿಗೆ ಇರುವ ಎಲ್ಲಾ ರಾಜಕೀಯ ಸಂಬಂಧಗಳನ್ನು ಮುರಿದಿರುವುದಾಗಿ ಘೋಷಿಸಿದ್ದಾರೆ. ಅದರೊಂದಿಗೆ ಝೆಲೆನ್ಸ್ಕೀಯವರು ‘ರಶಿಯಾದಲ್ಲಿ ಯಾರೆಲ್ಲಾ ತಮ್ಮ ವಿವೇಕವನ್ನು ಕಳೆದುಕೊಂಡಿಲ್ಲವೋ ಅವರೆಲ್ಲಾ ಹೊರಗೆ ಕಳುಹಿಸಿ ರಶಿಯಾವನ್ನು ನಿರ್ಬಂಧಗೊಳಿಸುವ ಸಮಯ ಬಂದಿದೆ’, ಎಂದು ಕರೆ ನೀಡಿದರು.

ಭಾರತೀಯ ಜ್ಯೋತಿಷಿಯು ಹೇಳಿರುವ ಭವಿಷ್ಯವಾಣಿಯ ಪ್ರಕಾರ ರಷ್ಯಾ ಮತ್ತು ಯುಕ್ರೇನ್ ನಡುವಿನ ಯುದ್ಧ ಫೆಬ್ರುವರಿ ೨೪ ರಂದು ಆರಂಭ

ನವದೆಹಲಿ – ನನ್ನ ಲೆಕ್ಕದ ಪ್ರಕಾರ ಮಾತುಕತೆ ಅಥವಾ ಚರ್ಚೆ ಫೆಬ್ರವರಿ ೩೩ ವರೆಗೂ ನಡೆಯಬಹುದು ಮತ್ತು ಫೆಬ್ರುವರಿ ೨೪, ೨೦೨೨ ನಂತರ ಯಾವುದೇ ದಿನ ಯುದ್ಧವಾಗಬಹುದು. ಫೆಬ್ರುವರಿ ೨೪ ರ ನಂತರ ಚರ್ಚೆ ವಿಫಲವಾಗುವುದು. ಗ್ರಹ ಮತ್ತು ನಕ್ಷತ್ರದ ಪ್ರಕಾರ ರಶಿಯಾ ಮತ್ತು ಯುಕ್ರೇನ್ ಇವರಲ್ಲಿ ಯುದ್ಧ ಯಾವಾಗ ಬೇಕಾದರೂ ಪ್ರಾರಂಭವಾಗಬಹುದು. ಅದರಲ್ಲಿ ಅದು ಫೆಬ್ರವರಿ ೨೪ ರಿಂದ ಮಾರ್ಚ್ ೧೫, ೨೦೨೨ ಈ ಸಮಯದಲ್ಲಿ ಯುದ್ಧ ಆಗಬಹುದು. ಇದರಲ್ಲಿ ಯುಕ್ರೇನ್‌ಗೆ ಹಾನಿಯಾಗಲಿದೆ. ಈ ಪರಿಸ್ಥಿತಿ ಮಾರ್ಚ ೧೫ ರಿಂದ ಮೇ ೫, ೨೦೨೨ ಈ ಸಮಯದಲ್ಲಿ ನಿಯಂತ್ರಣಕ್ಕೆ ಬರಬಹುದು, ಈ ರೀತಿಯ ಭವಿಷ್ಯವಾಣಿಯನ್ನು ಜ್ಯೋತಿಷ್ಯ ಪಂಡಿತ ಸಂಜೀವಕುಮಾರ ಶ್ರೀವಾಸ್ತವ ಇವರು ಫೆಬ್ರುವರಿ ೧೩ ರಂದು ಟ್ವೀಟ್ ಮೂಲಕ ಹೇಳಿದ್ದರು. ಅವರ ಹೇಳಿದ ಭವಿಷ್ಯದಂತೆ ಫೆಬ್ರುವರಿ ೨೩ ರಾತ್ರಿ ಮತ್ತು ಫೆಬ್ರುವರಿ ೨೪ ರ ಬೆಳಿಗ್ಗೆ ಯುದ್ಧ ಪ್ರಾರಂಭವಾಗಿದೆ.