ಅಂಗನವಾಡಿ ಉದ್ಯೋಗಕ್ಕೆ ಉರ್ದು ಕಡ್ಡಾಯ; ರಾಜ್ಯದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಆದೇಶ !

ಭಾಜಪದಿಂದ ವಿರೋಧ

ಬೆಂಗಳೂರು – ರಾಜ್ಯದಲ್ಲಿನ ಅಂಗನವಾಡಿ ಶಿಕ್ಷಕರಿಗಾಗಿ ಉರ್ದು ಭಾಷೆ ಅನಿವಾರ್ಯಗೊಳಿಸಿದ್ದರಿಂದ ವಿರೋಧ ವ್ಯಕ್ತವಾಗುತ್ತಿದೆ. ಚಿಕ್ಕಮಂಗಳೂರ ಜಿಲ್ಲೆಯ ಮುದಿಗೆರೆಯಲ್ಲಿನ ಅಂಗನವಾಡಿ ಶಿಕ್ಷಕಿ ಉದ್ಯೋಗಕ್ಕೆ ಉರ್ದು ಅನಿವಾರ್ಯ ಮಾಡಲಾಗಿದೆ. ಈ ಕುರಿತು ಮಹಿಳಾ ಮತ್ತು ಬಾಲ ಕಲ್ಯಾಣ ಇಲಾಖೆಯಿಂದ ಅಧಿಕೃತ ಆದೇಶ ಪ್ರಸಾರ ಮಾಡಲಾಗಿದೆ. ಭಾಜಪ ಇದಕ್ಕೆ ವಿರೋಧ ವ್ಯಕ್ತಪಡಿಸಿದೆ. ರಾಜ್ಯದಲ್ಲಿ ಉರ್ದು ಅಧಿಕೃತ ಸರಕಾರಿ ಭಾಷೆ ಇಲ್ಲದಿರುವಾಗ ಇದನ್ನು ಅನಿವಾರ್ಯಗೊಳಿಸುವುದು ತಪ್ಪು ಎಂದು ಹೇಳಲಾಗುತ್ತಿದೆ.