ಬಾಂಗ್ಲಾದೇಶಿ ಸೈನ್ಯದ ಇಸ್ಲಾಮಿಕರಣ !
ಢಾಕಾ (ಬಾಂಗ್ಲಾದೇಶ್) – ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ ಹಸೀನಾ ಇವರು ದೇಶ ತೊರೆದು ಹೋಗಲು ಅನಿವಾರ್ಯಗೊಳಿಸಿದ ನಂತರ ಬಾಂಗ್ಲಾದೇಶ ವೇಗವಾಗಿ ಕಟ್ಟರವಾದದ ಕಡೆಗೆ ವಾಲುತ್ತಿದೆ. ಈಗ ಬಾಂಗ್ಲಾದೇಶದ ಸೈನ್ಯ ಕೂಡ ಇಸ್ಲಾಮಿ ಕಟ್ಟರವಾದಿಗಳ ಕೈ ಸೇರಿದೆ. ಬಾಂಗ್ಲಾದೇಶದ ಸೈನ್ಯವು ಮೊದಲ ಬಾರಿಗೆ ಮಹಿಳಾ ಸೈನಿಕರಿಗೆ ಹಿಜಾಬ್ ಗೆ ಅನುಮತಿ ನೀಡಿದೆ. ‘ಮಹಿಳಾ ಸೈನಿಕರು ಹಿಜಾಬ ಧರಿಸಬೇಕಿದ್ದರೆ ಅವರು ಧರಿಸಬಹುದು, ಎಂದು ‘ಡಜ್ಯುಟಂಟ್ ಜನರಲ್’ ಕಾರ್ಯಾಲಯದಿಂದ ಆದೇಶ ನೀಡಲಾಗಿದೆ. ಇದರಲ್ಲಿ ಮಹಿಳಾ ಸೈನ್ಯ ಸಿಬ್ಬಂದಿಗಾಗಿ ಹಿಜಾಬ್ ಧರಿಸುವುದು ಐಚ್ಚಿಕ ಗೊಳಿಸಲಾಗಿದೆ. ಈ ಹಿಂದೆ ಬಾಂಗ್ಲಾದೇಶದ ಮಹಿಳಾ ಸೈನಿಕರಿಗೆ ಸಮವಸ್ತ್ರದ ಸಹಿತ ಹಿಜಾಬ್ ಧರಿಸಲು ಅನುಮತಿ ಇರಲಿಲ್ಲ.
ವಿವಿಧ ಸಮವಸ್ತ್ರದ ಜೊತೆಗೆ (ಯುದ್ಧ ಸಮವಸ್ತ್ರ, ಕಾರ್ಯ ನಿರತ ಸಮವಸ್ತ್ರ, ಸೀರೆ) ಹಿಜಾಬದ ನಮೂನೆಗಳನ್ನು ಪ್ರಸ್ತುತಪಡಿಸಬೇಕೆಂದು ಸಹಾಯಕ ಕಾರ್ಯಾಲಯವು ಆದೇಶ ನೀಡಿದೆ. ಫ್ಯಾಬ್ರಿಕ್, ಬಣ್ಣ ಮತ್ತು ಆಕಾರ ಕೂಡ ನಮೂನೆಯಲ್ಲಿ ಸೇರಿಸಲು ಹೇಳಿದ್ದಾರೆ. ಈಗ ಹಿಜಾಬ್ ಧರಿಸಿರುವ ಮಹಿಳಾ ಸೈನಿಕರ ಬಣ್ಣದ ಫೋಟೋಗಳು ಸಂಬಂಧಿತ ಇಲಾಖೆಯಲ್ಲಿ ಜಮ ಗೊಳಿಸಬೇಕಾಗುವುದು.
ಸಂಪಾದಕೀಯ ನಿಲುವುಭವಿಷ್ಯದಲ್ಲಿ ಬಾಂಗ್ಲಾದೇಶದ ಮಹಿಳೆಯರಿಗೆ ಸೈನ್ಯದಲ್ಲಿನ ಪ್ರವೇಶ ನಿಷೇಧಿಸಿದರೆ ಅದರಲ್ಲಿ ಆಶ್ಚರ್ಯ ಅನಿಸಬಾರದು ! |