|
|
ಇಸ್ಲಾಮಾಬಾದ (ಪಾಕಿಸ್ತಾನ) – ಭಾರತದಲ್ಲಿ ಮುಸಲ್ಮಾನ ಮಹಿಳೆಯರಿಗೆ ಹಿಜಾಬ್ (ಮುಸಲ್ಮಾನ ಮಹಿಳೆಯರು ತಲೆ ಮತ್ತು ಕುತ್ತಿಗೆ ಮುಚ್ಚಿಕೊಳ್ಳಲು ಉಪಯೋಗಿಸುವ ವಸ್ತ್ರ) ಹಾಕಿಕೊಳ್ಳಲು ನಿಷೇಧಿಸಲಾಗುತ್ತಿದೆ. ಈ ಬಗ್ಗೆ ಜಾಗತಿಕ ಸಮುದಾಯದ ಗಮನವನ್ನು ಸೆಳೆಯಲು ಮಾರ್ಚ ೮ ರಂದು ಪ್ರಸ್ತಾಪಿತ ಔರತ್ ಮಾರ್ಚಗೆ (ಮಹಿಳೆಯರ ಹಕ್ಕಿಗಾಗಿ ತೆಗೆಯಲಾಗುವ ಮೋರ್ಚ)ಕ್ಕೆ ನಿಷೇಧವನ್ನು ಹಾಕಿ ಅದರ ಬದಲು ಹಿಜಾಬ್ ದಿನ ಎಂದು ಆಚರಿಸಬೇಕು, ಎಂಬ ಬೇಡಿಕೆಯನ್ನು ಪಾಕಿಸ್ತಾನದ ಧಾರ್ಮಿಕ ಪ್ರಕರಣಗಳ ಸಚಿವ ನೂರುಲ ಹಕ ಕಾದರೀಯವರು ಪ್ರದಾನಮಂತ್ರಿ ಇಮ್ರಾನ್ ಖಾನರಿಗೆ ಪತ್ರವನ್ನು ಬರೆದು ಬೇಡಿಕೆಯನ್ನು ಮಾಡಿದ್ದಾರೆ. ಮಾರ್ಚ ೮ ಇದು ಅಂತರರಾರ್ಷ್ಟ್ರೀಯ ಮಹಿಳಾ ದಿನವಾಗಿದೆ.
Pakistan’s Minister for Religious Affairs Noorul Haq Qadri has requested the Prime Minister @ImranKhanPTI to celebrate Hijab Day on March 8, which is celebrated as Women’s day. https://t.co/KqoxCGLGRC
— WION (@WIONews) February 20, 2022
ಕಾದರೀಯವರು ತಮ್ಮ ಮಾತನ್ನು ಮುಂದುವರೆಸುತ್ತಾ, ೨೦೧೮ ರಿಂದ ಅಂತರರಾರ್ಷ್ಟೀಯ ಮಹಿಳಾ ದಿನವನ್ನು ಪಾಕಿಸ್ತಾನದಲ್ಲಿ ಔರತ್ ಮಾರ್ಚ ಎಂದು ಆಯೋಜಿಸಲಾಗುತ್ತಿದೆ. ಈ ರೀತಿ ಮೆರವಣಿಗೆ ತೆಗೆಯುವುದು ಇಸ್ಲಾಮ್ ನ ಸಿದ್ಧಾಂತದ ವಿರುದ್ಧವಾಗಿದೆ. ಈ ದಿನ ಯಾವುದೇ ಕಾರ್ಯಕ್ರಮಗಳಿಂದ ಇಸ್ಲಾಂನ ಮೌಲ್ಯ, ಸಮಾಜದ ಮಾನದಂಡ, ಹಿಜಾಬ್ ಮುಂತಾದ ವಿಷಯಗಳ ಪ್ರಶ್ನೆಯನ್ನು ಕೇಳುವುದು ಅಥವಾ ಅದರ ಅವಮಾನ ಮಾಡುವುದು ಇದಕ್ಕಾಗಿ ಅನುಮತಿ ನೀಡಬಾರದು. ಇದರಿಂದ ಮುಸಲ್ಮಾನರ ಭಾವನೆಗೆ ನೋವಾಗುತ್ತದೆ ಎಂದು ಹೇಳಿದರು.