ಯುಕ್ರೇನ್ನಲ್ಲಿ ಸಿಲುಕಿರುವ ಸಂಭಾಜಿನಗರದ ವಿದ್ಯಾರ್ಥಿಗಳು ನೀಡಿದ ಮಾಹಿತಿ
ಭವಿಷ್ಯದಲ್ಲಿ ಮೂರನೇ ಮಹಾಯುದ್ಧ ಪ್ರಾರಂಭವಾದಾಗ ಭಾರತದಲ್ಲಿಯೂ ಇದೇ ರೀತಿಯ ಪರಿಸ್ಥಿತಿ ಉದ್ಭವಿಸಿದರೆ ಆಶ್ಚರ್ಯಪಡಬೇಕಾಗಿಲ್ಲ ! ಅಂತಹ ಪರಿಸ್ಥಿತಿಯಲ್ಲಿ, ದೇವರು ನಮ್ಮನ್ನು ರಕ್ಷಿಸಲು, ಸಾಧನೆ ಮಾಡುವುದು ಅಗತ್ಯವಾಗಿದೆ !- ಸಂಪಾದಕರು
ಸಂಭಾಜಿನಗರ – ಯುಕ್ರೇನ್ನಲ್ಲಿ ಸಿಲುಕಿರುವ ಸಂಭಾಜಿನಗರದ ವಿದ್ಯಾರ್ಥಿಗಳಿಗೆ `ಸ್ಥಳೀಯ ಯುಕ್ರೇನ್ ಅಧಿಕಾರಿಗಳು ನಮಗೆ ಮನೆಯಿಂದ ಹೊರ ಬರದಂತೆ, ವಿಮಾನ ನಿಲ್ದಾಣಗಳು ಅಥವಾ ರೈಲು ನಿಲ್ದಾಣಗಳಲ್ಲಿ ನಿಲ್ಲದಂತೆ ಇತ್ಯಾದಿ ಸೂಚನೆಗಳನ್ನು ನೀಡಿದ್ದಾರೆ. ಎಲ್ಲೆಡೆ ಉದ್ವಿಗ್ನ ವಾತಾವರಣವಿದೆ. ಇಲ್ಲಿ ನೀರು ಖರೀದಿಸಬೇಕಾಗುತ್ತಿದೆ. ಬೆಳಗ್ಗೆಯಿಂದಲೇ ಅದಕ್ಕಾಗಿ ಜನದಟ್ಟಣೆ ಇರುತ್ತದೆ. ಇಲ್ಲಿ ನೀರು ಸರಬರಾಜು ಮಾಡುವ ಯಂತ್ರಗಳಿವೆ. ಎಲ್ಲರೂ ಜನಜಂಗುಳಿ ಮಾಡಿದ್ದರಿಂದ ನೀರು ಕೂಡ ಖಾಲಿಯಾಗಿದೆ. ಸದ್ಯ ಇಲ್ಲಿ ನೀರು ಕೂಡ ಸಿಗುತ್ತಿಲ್ಲ’ ಎಂದು `ದಿವ್ಯಾ ಮರಾಠಿ’ ವರದಿಗಾರರಿಗೆ ದೂರವಾಣಿ ಮೂಲಕ ಮಾಹಿತಿ ನೀಡಿದರು. ಭೂಮಿಕಾ ಶಾರ್ದೂಲ್ ಮತ್ತು ಶ್ರುತಿಕಾ ಚವ್ಹಾಣ್ ಅವರು ಪಶ್ಚಿಮ ಯುಕ್ರೇನ್ನ ಲಬಿಬ್ನಲ್ಲಿ ವಾಸಿಸುತ್ತಿದ್ದಾರೆ, ಅಲ್ಲಿ ಅವರು ವೈದ್ಯಕೀಯ ಶಿಕ್ಷಣ ಪಡೆಯುತ್ತಿದ್ದಾರೆ. ಅವರನ್ನು ಸಂಪರ್ಕಿಸಿದಾಗ ಈ ಮೇಲ್ಕಂಡ ಮಾಹಿತಿ ನೀಡಿದರು. ಇವರಿಬ್ಬರು ಭಾರತಕ್ಕೆ ಮರಳಲು ವಿಮಾನದ ಟಿಕೆಟ್ ಕಾಯ್ದಿರಿಸಿದ್ದರು; ಆದರೆ, ವಿಮಾನಯಾನ ಸಂಸ್ಥೆಯನ್ನು ಮುಚ್ಚಿದ್ದರಿಂದ ಅವರು ಇನ್ನೂ ಅಲ್ಲಿಯೇ ಸಿಲುಕಿಕೊಂಡಿದ್ದಾರೆ.
युक्रेनमध्ये युद्धजन्य परिस्थितीमुळे पैसे देऊन पाणी, रेशन मिळेना; युक्रेनमध्ये अडकलेल्या औरंगाबादच्या दोन मुलींनी सांगितली आपबीत https://t.co/pNz92BFUPh
— Divya Marathi (@MarathiDivya) February 25, 2022