ಪಾಕಿಸ್ಥಾನದ ೨೦೦ ಖಾತೆದಾರರಲ್ಲಿ ೧ ಸಾವಿರದಾ ೯೦೦ ಕೋಟಿ ರೂಪಾಯಿಗಳಷ್ಟು ಕಪ್ಪು ಹಣ !
ಪಾಕಿಸ್ಥಾನದ ರಾಜಕಾರಣಿಗಳಿಗೆ ಈ ಹಣವನ್ನು ಇತರ ಇಸ್ಲಾಮಿಕ್ ರಾಷ್ಟ್ರಗಳಿಂದ ಅಥವಾ ಚೀನಾದಿಂದ ಭಾರತ ವಿರೋಧಿ ಚಟುವಟಿಕೆಗಳಿಗಾಗಿ ಸಿಕ್ಕಿದೆಯೇ ?, ಭಾರತವು ಈ ದೃಷ್ಟಿಯಿಂದ ತನಿಖೆ ಮಾಡುವಂತೆ ಭಾರತವು ಒತ್ತಾಯಿಸಬೇಕು !
ಹೊಸ ದೆಹಲಿ – ವಿಶ್ವದ ಮಂಚೂಣಿಯಲ್ಲಿರುವ ಬ್ಯಾಂಕ್‌ಗಳಲ್ಲಿ ಒಂದಾಗಿರುವ ‘ಕ್ರೆಡಿಟ್ ಸುಇಸ’ನ ಖಾತೆದಾರರ ಬಗ್ಗೆ ಆಘಾತಕಾರಿ ಮಾಹಿತಿ ಬೆಳಕಿಗೆ ಬಂದಿದೆ. ಸ್ವಿಸ್ ಬ್ಯಾಂಕಗಳಲ್ಲಿ ಒಂದಾದ ಈ ಬ್ಯಾಂಕ್‌ನಲ್ಲಿ ಪಾಕಿಸ್ಥಾನದಲ್ಲಿ ೧೪೦೦ ಜನರ ಒಟ್ಟು ೬೦೦ ಖಾತೆಗಳನ್ನು ಹೊಂದಿದೆ. ‘ದಿ ನ್ಯೂಸ್’ ಪ್ರಕಟಿಸಿದ ವರದಿಯ ಪ್ರಕಾರ, ಈ ಖಾತೆಗಳಲ್ಲಿ ಹಲವು ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿರುವ ಖಾತೆಗಳೂ ಸೇರಿವೆ; ಆದರೆ ಇಗ ಮುಚ್ಚಲಾಗಿವೆ. ಆ ಸಮಯದಲ್ಲಿ ಹಲವಾರು ಸಾಮಾಜಿಕ ಜವಾಬ್ದಾರಿಗಳನ್ನು ನಿರ್ವಹಿಸುತ್ತಿದ್ದ ಅನೇಕ ಪಾಕಿಸ್ಥಾನಿ ರಾಜಕಾರಣಿಗಳು ಮತ್ತು ಅಧಿಕಾರಿಗಳು ಇದರಲ್ಲಿ ಸೇರಿದ್ದಾರೆ. ಇವರಲ್ಲಿ ಪಾಕಿಸ್ಥಾನಿ ಗುಪ್ತಚರ ಸಂಸ್ಥೆ ‘ಐಎಸ್‌ಐ’ನ ಮಾಜಿ ಮುಖ್ಯಸ್ಥ ಜನರಲ್ ಅಖ್ತರ ಅಬ್ದುರ್ರಹಮಾನ್ ಕೂಡಾ ಸೇರಿದ್ದಾರೆ. ಅಬ್ದುರ್ರಹಮಾನ ೧೯೭೯ ರಿಂದ ೧೯೮೭ರ ವರೆಗೆ ‘ಐಎಸ್‌ಐ’ನ ಮುಖ್ಯಸ್ಥರಾಗಿದ್ದರು.
A leak of data from a leading Swiss bank has revealed information about 600 accounts linked to 1400 Pakistani citizenshttps://t.co/o8nk09chd0
— WION (@WIONews) February 21, 2022
ಪಾಕಿಸ್ಥಾನದ ಚುನಾವಣಾ ಆಯೋಗಕ್ಕೆ ತಮ್ಮ ಆಸ್ತಿಯನ್ನು ಘೋಷಿಸುವಾಗ, ಸಂಬಂಧಪಟ್ಟ ರಾಜಕಾರಣಿಗಳು ತಮ್ಮ ಸ್ವಿಸ್ ಬ್ಯಾಂಕ್ ಖಾತೆಗಳನ್ನು ಎಂದಿಗೂ ಉಲ್ಲೇಖಿಸಲಿಲ್ಲ. ವರದಿಯ ಪ್ರಕಾರ, ಸುಮಾರು ೨೦೦ ಪಾಕಿಸ್ಥಾನಿ ಖಾತೆದಾರರ ಖಾತೆಗಳಲ್ಲಿನ ಮೊತ್ತವು ೧೦೦ ಮಿಲಿಯನ್ ಸ್ವಿಸ್ ಫ್ರಾಕ್‌ಗಳಷ್ಟು (೧ ಸಾವಿರದ ೯೦೦ ಕೋಟಿ ರೂಪಾಯಿಗಳು) ಇವೆ.