ತೀಸ್ತಾ ನದಿಯ ನೀರು ಹಂಚಿಕೆಯ ಕುರಿತು ಭಾರತದ ಜೊತೆಗೆ ಶೀರ್ಘದಲ್ಲೇ ಚರ್ಚೆ ! – ಬಾಂಗ್ಲಾದೇಶ

ಈ ಹಿಂದೆ ಮಮತಾ ಬ್ಯಾನರ್ಜಿ ಇವರಿಂದ ಹಂಚಿಕೆಗೆ ವಿರೋಧವಿತ್ತು

ಢಾಕಾ – ಬಾಂಗ್ಲಾದೇಶ ಬೇಗನೆ ತೀಸ್ತಾ ನದಿಯ ನೀರು ಹಂಚಿಕೆಯ ಕುರಿತು ಭಾರತದ ಜೊತೆಗೆ ಚರ್ಚಿಸಲು ಯೋಚಿಸುತ್ತಿದೆ, ಎಂದು ಬಾಂಗ್ಲಾದೇಶದ ಮಧ್ಯಂತರ ಸರಕಾರದ ಜಲ ಸಂಪನ್ಮೂಲ ಇಲಾಖೆಯ ಸಲಹೆಗಾರ ಸಯಿದಾ ರಿಜವಾನ್ ಹಸನ್ ಇವರು ಮಾಹಿತಿ ನೀಡಿದರು. ‘ಸಾಮೂಹಿಕ ನದಿಯ ನೀರಿನಲ್ಲಿ ಬಾಂಗ್ಲಾದೇಶದ ಪಾಲು’ ಈ ವಿಷಯದ ಕುರಿತು ಸಂವಾದದಲ್ಲಿ ಹಸನ್ ಮಾತನಾಡುತ್ತಿದ್ದರು.

೨೦೧೧ ರಲ್ಲಿ ಅಂದಿನ ಪ್ರಧಾನಿ ಮನಮೋಹನ ಸಿಂಗ ಇವರ ಢಾಕಾ ಪ್ರವಾಸದಲ್ಲಿ ಭಾರತ ಮತ್ತು ಬಾಂಗ್ಲಾದೇಶ ಇವರಲ್ಲಿ ತೀಸ್ತಾ ನದಿಯ ನೀರು ಹಂಚಿಕೆಯ ಕುರಿತು ಒಪ್ಪಂದ ಆಗುವುದಿತ್ತು; ಆದರೆ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಇವರು ‘ತೀಸ್ತಾ ನದಿಯ ನೀರು ಹಂಚಿಕೆಯಿಂದ ಬಂಗಾಲ ರಾಜ್ಯದಲ್ಲಿ ನೀರಿನ ಕೊರತೆ ನಿರ್ಮಾಣವಾಗುವುದು’, ಎಂದು ಹೇಳುತ್ತಾ ಈ ಒಪ್ಪಂದಕ್ಕೆ ವಿರೋಧ ವ್ಯಕ್ತಪಡಿಸಿದ್ದರು.

ಬಾಂಗ್ಲಾದೇಶದ ಬೇಡಿಕೆಗಳು ಸ್ಪಷ್ಟ ಮತ್ತು ದೃಢವಾಗಿ ಮಂಡಿಸಲಾಗುವುದು !

ಸಯಿದಾ ರಿಜವಾನ ಹಸನ್ ಮಾತು ಮುಂದುವರೆಸಿ, ಅಂತರಾಷ್ಟ್ರೀಯ ನದಿಗಳ ನೀರು ಹಂಚಿಕೆಯ ಪ್ರಶ್ನೆ ಜಟಿಲವಾಗಿದೆ; ಆದರೆ ಅಗತ್ಯ ಮಾಹಿತಿಯ ಕೊಡು ಕೊಳ್ಳುವಿಕೆ ರಾಜಕೀಯ ಆಗಬಾರದು. ಯಾವುದಾದರೂ ದೇಶಕ್ಕೆ ಮಳೆಯ ಅಂಕಿ ಸಂಖ್ಯೆ ತಿಳಿದಿರುವುದು ಅಗತ್ಯವಾಗಿದೆ. ಯಾವುದೇ ದೇಶ ಈ ಅಂಶದ ಕುರಿತು ಅಂತರಾಷ್ಟ್ರೀಯ ನ್ಯಾಯಾಲಯದಲ್ಲಿ ಒಂದರ ಪರವಾಗಿ ಹೋಗುಲು ಸಾಧ್ಯವಿಲ್ಲ. ಬಾಂಗ್ಲಾದೇಶದ ಬೇಡಿಕೆಗಳು ಸ್ಪಷ್ಟ ಮತ್ತು ದೃಢವಾಗಿ ಮಂಡಿಸಲಾಗುವುದು. ದೇಶದ ಆಂತರಿಕ ಒಟ್ಟಾಗಿ ನದಿಗಳ ಸಂರಕ್ಷಣೆ ಮಾಡುವುದು ಕೂಡ ಅಗತ್ಯವಾಗಿದೆ ಎಂದು ಅವರು ಹೇಳಿದರು.

ಈ ತಿಂಗಳ ಆರಂಭದಲ್ಲಿ, ಬಾಂಗ್ಲಾದೇಶದ ಮಧ್ಯಂತರ ಸರಕಾರದ ಪ್ರಮುಖ ಮಹಮ್ಮದ್ ಯುನೂಸ್ ಇವರು, ಅವರ ಸರಕಾರ ದೀರ್ಘಕಾಲದಿಂದ ಬಾಕಿ ಉಳಿದಿರುವ ತೀಸ್ತಾ ನೀರು ಹಂಚಿಕೆ ಒಪ್ಪಂದದ ಕುರಿತು ಭಾರತದ ಜೊತೆಗೆ ಇರುವ ಭಿನ್ನಾಭಿಪ್ರಾಯ ಪರಿಹರಿಸಲು ಪ್ರಯತ್ನ ಮಾಡುವುದು ಎಂದು ಹೇಳಿದರು.