ಪದ್ಮಾಸನ ಮತ್ತು ಶ್ವಾನಾಸನ ಇಸ್ಲಾಂ ಧರ್ಮಕ್ಕೆ ಅಪಾಯಕಾರಿ ಎಂದು ದಾವೆ
ಇಸ್ಲಾಂ ಧರ್ಮದ ಪ್ರಮುಖ ರಾಷ್ಟ್ರವಾಗಿರುವ ಸೌದಿ ಅರೇಬಿಯಾದಲ್ಲಿಯೂ ಈಗ ಯೋಗಾಸನದ ಕಾರ್ಯಕ್ರಮಗಳು ಪ್ರಾರಂಭಿಸಲಾಗುತ್ತಿರುವಾಗ ಇತರ ಇಸ್ಲಾಮಿಕ್ ದೇಶಗಳು ತಮ್ಮನ್ನು ತಾವು ಹೆಚ್ಚು ಕಟ್ಟರವಾದಿಗಳೆಂದು ತೋರಿಸಲು ಪ್ರಯತ್ನಿಸುತ್ತಿರುವುದು ಸ್ಪಷ್ಟವಾಗುತ್ತಿದೆ, ಎಂಬುದು ಇದರಿಂದ ಗಮನಕ್ಕೆ ಬರುತ್ತದೆ !
ಕುವೈತ್ ಸಿಟಿ (ಕುವೈತ್) – ಕುವೈತ್ ಸರಕಾರವು ಇಲ್ಲಿನ ಮಹಿಳೆಯರಿಗೆ ಇದ್ದ ಯೋಗಾಸನದ ಒಂದು ಕಾರ್ಯಕ್ರಮವನ್ನು ರದ್ದುಗೊಳಿಸಿದೆ. ಈ ಕಾರ್ಯಕ್ರಮದ ಜಾಹೀರಾತುಗಳನ್ನು ಪ್ರಕಟಿಸಿದ ನಂತರ, ದೇಶದ ಕಟ್ಟರವಾದಿ ಮುಸ್ಲಿಮರು ಇದು ‘ಇಸ್ಲಾಂಗೆ ಅವಮಾನ’ ಎಂದು ಹೇಳಿ ಇದನ್ನು ವಿರೋಧಿಸಿದರು. ಪದ್ಮಾಸನ ಮತ್ತು ಶ್ವಾನಾಸನ ಈ ಆಸನಗಳು ‘ಇಸ್ಲಾಂ ಧರ್ಮಕ್ಕೆ ಅಪಾಯಕಾರಿ’ ಎಂದು ಕಟ್ಟರವಾದಿಗಳು ಹೇಳುತ್ತಿದ್ದಾರೆ. ಆದ್ದರಿಂದ ಕುವೈತ್ ಸಂಸತ್ತಿನ ಹೊರಗೆ ಮಹಿಳೆಯರು ಕಟ್ಟರವಾದಿಯ ವಿರುದ್ಧ ಪ್ರತಿಭಟನೆ ನಡೆಸಿದರು. ಈ ಕುರಿತು ಕುವೈತ್‌ನ ಮಹಿಳಾ ಕಾರ್ಯಕರ್ತೆ ನಜೀಬಾ ಹಯಾತ್ ಇವರು ಮಾತನಾಡಿ, ಇಂತಹ ಕಟ್ಟರವಾದಿಗಳ ವಿರೋಧದಿಂದ ದೇಶ ಹಿಂದುಳಿದಿದೆ ಎಂದು ಹೇಳಿದರು.
‘इस्लाम के लिए खतरनाक है पद्मासन और श्वानासन’: कुवैत की सरकार ने योग शिविर को रोका, मुल्ला-मौलवियों के खिलाफ सड़क पर महिलाएँ#Yoga #Kuwait #Womenhttps://t.co/G0AxOPhTX8
— ऑपइंडिया (@OpIndia_in) February 21, 2022
ಕುವೈತ್‌ನಲ್ಲಿ ಈ ರೀತಿಯ ವಿರೋಧಗಳ ಹೊರತಾಗಿಯು, ಸೌದಿ ಅರೇಬಿಯಾದಲ್ಲಿ ಜನೆವರಿ ೨೦೨೨ ರಲ್ಲಿ ಸಾರ್ವಜನಿಕ ಸ್ಥಳದಲ್ಲಿ ಯೋಗ ಮಹೋತ್ಸವವನ್ನು ಆಯೋಜನೆ ಮಾಡಲಾಗಿತ್ತು.