ತಾಲಿಬಾನವು ಗುರುದ್ವಾರದಲ್ಲಿನ ತೆಗೆದು ಹಾಕಿದ್ದ ಧ್ವಜವನ್ನು ಮತ್ತೆ ಹಾಕಿದರು !

ಅಫ್ಘನಿಸ್ತಾನದ ಪಕತಿಯಾ ಪ್ರದೇಶದ ಥಾಲ್ ಸಾಹಿಬ್ ಗುರುದ್ವಾರದಲ್ಲಿ ಹಾಕಲಾಗಿದ್ದ ಪವಿತ್ರ ಧ್ವಜವನ್ನು ತಾಲಿಬಾನಿಗಳು ತೆಗೆದಿದ್ದರು; ಆದರೆ ಅಂತರರಾಷ್ಟ್ರೀಯ ಒತ್ತಡದಿಂದಾಗಿ ತಾಲಿಬಾನವು ಅದನ್ನು ಮತ್ತೆ ಹಾಕಿದೆ. ಭಾರತವೂ ಕೂಡಾ ಧ್ವಜವನ್ನು ತೆಗೆದಿರುವ ಬಗ್ಗೆ ತೀರ್ವವಾಗಿ ಖಂಡಿಸಿತ್ತು.

ಭಾರತದ ೧೪ ಅಮೂಲ್ಯ ಮತ್ತು ಪ್ರಾಚೀನ ಕಲಾಕೃತಿಗಳನ್ನು ಹಿಂದಿರುಗಿಸಲಿರುವ ಆಸ್ಟ್ರೇಲಿಯಾ !

ಆಸ್ಟ್ರೇಲಿಯಾ ತನ್ನ ರಾಷ್ಟ್ರೀಯ ಕಲಾಕೃತಿ ಸಂಗ್ರಹಾಲಯದಲ್ಲಿರುವ ಭಾರತದ ೧೪ ಅತ್ಯಮೂಲ್ಯ ಪ್ರಾಚೀನ ಕಲಾಕೃತಿಗಳನ್ನು ಭಾರತಕ್ಕೆ ಹಿಂದಿರುಗಿಸಲಿದೆ. ಇದರಲ್ಲಿ ವಿಗ್ರಹಗಳು, ಚಿತ್ರಗಳು, ಛಾಯಾಚಿತ್ರಗಳು ಇತ್ಯಾದಿ ಒಳಗೊಂಡಿವೆ. ಇವುಗಳಲ್ಲಿ ಹಲವು ಕಲಾಕೃತಿಗಳು ೧೨ ನೇ ಶತಮಾನದಷ್ಟು ಹಳೆಯದಾಗಿವೆ.