ಬುರಖಾ ಅಂದರೆ ‘ಓವನ’ ಆಗಿರುವುದರಿಂದ ನನಗೆ ಅದು ಬೇಡವಾಗಿದೆ !

ಕರ್ನಾಟಕದಲ್ಲಿ ಹಿಜಾಬ ಬಗ್ಗೆ ಬೆಂಬಲ ನೀಡುವ ನೊಬಲ ಪ್ರಶಸ್ತಿ ಪಡೆದುಕೊಂಡ ಮಲಾಲಾ ಯುಸೂಫಾಝಾಈ ಈಕೆಯ ಬುರಖಾ ವಿಷಯದಲ್ಲಿನ ಅಭಿಪ್ರಾಯ

ಮನಸ್ಸಿಗೆ ಬಂದಂತೆ ಹಿಜಾಬ ಹಾಗೂ ಬುರಖಾದ ಬಗ್ಗೆ ತನ್ನ ಅಭಿಪ್ರಾಯವನ್ನು ಮಂಡಿಸುವ ದ್ವಿಮುಖ ನೀತಿಯ ಮಲಾಲಾ ಯುಸೂಫಝಾಈ ಈಕೆಗೆ ಸಿಕ್ಕಿರುವ ನೊಬಲ ಪ್ರಶಸ್ತಿಯನ್ನು ಹಿಂಪಡೆದುಕೊಳ್ಳುವಂತೆ ಭಾರತವು ಬೇಡಿಕೆ ಮಾಡಬೇಕು !

(ಟಿಪ್ಪಣಿ : ‘ಓವನ’ ಅಂದರೆ ಖಾದ್ಯಪದಾರ್ಥಗಳನ್ನು ಬೇಯಿಸುವ ಒಂದು ಯಂತ್ರ)

ನವ ದೆಹಲೀ – ಕೆಲವು ವರ್ಷಗಳ ಹಿಂದೆ ಅಫಗಾನಿಸ್ತಾನದಲ್ಲಿ ತಾಲಿಬಾನಿಯರ ಗುಂಡಿಗೆ ಗಾಯಗೊಂಡ ಹಾಗೂ ಶಾಂತತೆಗಾಗಿ ನೊಬಲ ಪ್ರಶಸ್ತಿಯನ್ನು ಗಳಿಸಿದ ಅಫಗಾನಿಸ್ತಾನದ ಯುವತಿ ಮಲಾಲಾ ಯುಸಫಝಾಈ ಈಕೆಯು ಕರ್ನಾಟಕದಲ್ಲಿ ಹಿಜಾಬ ಪ್ರಕರಣದಲ್ಲಿ ಮುಸಲ್ಮಾನ ಯುವತಿಯರ ಬೇಡಿಕೆಗೆ ಬೆಂಬಲ ನೀಡಿದ್ದಾಳೆ. ಆದ್ದರಿಂದ ಈಗ ಅವಳನ್ನು ಸಾಮಾಜಿಕ ಮಾಧ್ಯಮಗಳಿಂದ ವಿರೋಧಿಸಲಾಗುತ್ತಿದೆ. ಮಲಾಲಾ ಬರೆದಿರುವ ಪುಸ್ತಕದ ಆಧಾರವನ್ನು ನೀಡಲಾಗುತ್ತಿದೆ. ಈ ಪುಸ್ತಕದಲ್ಲಿ ಮಲಾಲಾಳು ಬುರಖಾದ ವಿಷಯವಾಗಿ, ‘ಇಸ್ಲಾಮೀ ಕಟ್ಟರವಾದಿ ಮಹಿಳೆಯರಿಗೆ ಬುರಖಾ ತೊಡಲು ಕಡ್ಡಾಯ ಪಡಿಸುತ್ತಾರೆ. ಬುರಖಾ ತೊಡುವುದು ಅಂದರೆ ಒಂದು ದೊಡ್ಡ ಬಟ್ಟೆಯಲ್ಲಿ ‘ಶಟಲಕಾಕ (ಬ್ಯಾಡಮಿಂಟನಲ್ಲಿ ಬಳಸುವ ಒಂದು ವಸ್ತು)ನಂತಿದೆ. ಈ ಬುರಖಾದಲ್ಲಿ ಕೇವಲ ಒಂದು ಸಣ್ಣ ಕಿಂಡಿ ಇದೆ ಹಾಗೂ ಬೇಸಿಗೆಯ ದಿನದಲ್ಲಿ ಬುರಖಾ ‘ಓವನ’(ಖಾದ್ಯಪದಾರ್ಥವನ್ನು ಬೇಯಿಸುವ ಒಂದು ಯಂತ್ರ) ನಂತಿದೆ. ನನಗೆ ಅದು ಬೇಡವಾಗಿದೆ.’ ಎಂದು ಬರೆದಿದ್ದಾಳೆ.

ಮಲಾಲಾ ಬ್ರಿಟನನಲ್ಲಿನ ಮಹಾವಿದ್ಯಾಲಯದಲ್ಲಿ ಕಲಿಯುತ್ತಿರುವಾಗ ಅವಳು ಎಂದಿಗೂ ಹಿಜಾಬ ಅಥವಾ ಬುರಖಾ ತೊಟ್ಟುಕೊಳ್ಳುತ್ತಿರಲಿಲ್ಲ, ಎಂದು ಕೂಡ ತಿಳಿದು ಬಂದಿದೆ.