ಚೀನಾದ ೪೦ ರಿಂದ ೪೫ ಸೈನಿಕರು ಹತರಾಗಿರುವ ಬಗ್ಗೆ ಹೆಚ್ಚಿನ ಪ್ರಸಾರ ಮಾಧ್ಯಮದವರು ಈವರೆಗೂ ಹೇಳಿದ್ದಾರೆ; ಆದರೆ ಸುಳ್ಳು ಹೇಳುವ ಚೀನಾ ಇದನ್ನು ನಿರಾಕರಿಸುತ್ತಾ ಬಂದಿದೆ. ಆದರೂ ಈ ಘಟನೆಯಿಂದ ಭಾರತೀಯ ಸೈನ್ಯದ ಕ್ಷಮತೆಯ ಅರಿವು ಚೀನಾಗೆ ಆಗಿದೆ. ಇದು ಏನು ಕಡಿಮೆಯಿಲ್ಲ !
ಕ್ಯಾನಬೇರಾ (ಆಸ್ಟ್ರೇಲಿಯಾ) – ಲಡಾಖ್‌ನ ಗಲವಾನ್ ಕಣಿವೆಯಲ್ಲಿ ಜೂನ್ ೨೦೨೦ ರಲ್ಲಿ ಚೀನಾ ಮತ್ತು ಭಾರತೀಯ ಸೈನಿಕರ ನಡುವೆ ನಡೆದ ಘರ್ಷಣೆಯಲ್ಲಿ ಚೀನಾದ ೩೮ ಸೈನಿಕರು ಮೃತಪಟ್ಟಿದ್ದರು, ಎಂಬ ಮಾಹಿತಿ ಆಸ್ಟ್ರೇಲಿಯಾದ ‘ದಿ ಕ್ಲಾಕ್ಸನ್’ ಎಂಬ ದೈನಿಕದಲ್ಲಿ ಮಾಹಿತಿ ನೀಡಿದೆ. ಈ ಘರ್ಷಣೆಯಲ್ಲಿ ಚೀನಾ ಈವರೆಗೆ ಕೇವಲ ನಾಲ್ಕು ಸೈನಿಕರು ಸಾವನ್ನಪ್ಪಿದ್ದಾರೆ ಎಂದು ಹೇಳಿದೆ.
In the early stages of the June 15-16 battle, many Chinese soldiers were killed while attempting to swim in the fast-flowing Galwan river in sub-zero temperature, the investigative report has claimed.https://t.co/tdCF3PVlhK
— Hindustan Times (@htTweets) February 2, 2022
೧. ‘ದ ಕ್ಲಾಕ್ಸನ್’ ಇದರ ಸಂಪೂರ್ಣ ಪ್ರಕರಣದ ವಿಚಾರಣೆ ನಡೆಸಲು ಅಂಥನಿ ಕ್ಲಾನ್ ಇವರ ನೇತೃತ್ವದಲ್ಲಿ ಸಂಶೋಧಕರ ಸ್ವತಂತ್ರ ಸಮಿತಿ ಸ್ಥಾಪನೆ ಮಾಡಿತ್ತು. ಈ ಸಮಿತಿಯಿಂದ ‘ಗಲವಾನ್ ಡಿ ಕೋಡೆಡ’ (ಗಲವಾನ ಹಿಂದಿನ ರಹಸ್ಯ ಬಿಚ್ಚಿಟ್ಟಿದೆ) ಎಂಬ ಹೆಸರಿನ ಅವರ ವರದಿ ಪ್ರಸಿದ್ಧವಾಗಿತ್ತು. ಸಂಶೋಧಕರ ಹೇಳಿಕೆಯ ಪ್ರಕಾರ ಜೂನ್ ೧೫,೧೬, ೨೦೨೦ ರಾತ್ರಿ ಕಡಿಮೆ ತಾಪಮಾನದಿಂದ ಚೀನಾದ ೩೮ ಸೈನಿಕರು ನದಿಯಲ್ಲಿ ಕೊಚ್ಚಿ ಹೋಗಿದ್ದರಿಂದ ಸಾವನ್ನಪ್ಪಿದರು.
೨. ಈ ವಾರ್ತೆಯಿಂದ ಚೀನಾದಲ್ಲಿ ಸಾಮಾಜಿಕ ಜಾಲತಾಣ ‘ವಿಬೊ’ದ ಅನೇಕ ಬಳಕೆದಾರರ ಆಧಾರದಿಂದ ಈ ಸಮಿತಿಯು ೩೮ ಎಂಬ ಸಂಖ್ಯೆ ಹೇಳಿದೆ. ಚೀನಾದಿಂದ ‘ವಿಬೊ’ದಲ್ಲಿನ ಎಲ್ಲಾ ಪೋಸ್ಟ್‌ಗಳನ್ನು ತೆಗೆದು ಹಾಕಲಾಗಿತ್ತು. ಚೀನಾದಿಂದ ಸಾವನ್ನಪ್ಪಿರುವ ೩೮ ಜನರಿಗೆ ಪದಕ ಘೋಷಣೆ ಮಾಡಲಾಗಿದೆ.