ಚೀನಾ ಅರುಣಾಚಲ ಪ್ರದೇಶದ ೧೫ ಸ್ಥಳಗಳ ಹೆಸರನ್ನು ಬದಲಿಸಿದೆ !

ಭಾರತದಿಂದ ತೀವ್ರ ವಿರೋಧ

ಭಾರತದ ರಾಜ್ಯಗಳ ಸ್ಥಳಗಳ ಹೆಸರು ಬದಲಾಯಿಸುವ ಧೈರ್ಯ ಚೀನಾ ಹೇಗೆ ಮಾಡುತ್ತದೆ ? ಚೀನಾದ ಮೇಲೆ ಭಾರತದ ವರ್ಚಸ್ಸು ಇಲ್ಲವೇ ? ಭಾರತ ಸರಕಾರವು ಈಗ ಚೀನಾದ ಸ್ಥಳಗಳ ಹೆಸರನ್ನು ಬದಲಾಯಿಸಿ ಅದಕ್ಕೆ ಏಟಿಗೆ ಎದುರೇಟು ಉತ್ತರ ನೀಡಬೇಕು !

ನವ ದೆಹಲಿ – ಚೀನಾವು ಅರುಣಾಚಲ ಪ್ರದೇಶದಲ್ಲಿನ ೧೫ ಸ್ಥಳಗಳ ಹೆಸರನ್ನು ಬದಲಾಯಿಸಿದೆ. ಇದನ್ನು ಭಾರತ ತೀವ್ರವಾಗಿ ಪ್ರತಿಕ್ರಿಯೆ ವ್ಯಕ್ತಪಡಿಸಿ ‘ಅರುಣಾಚಲ ಪ್ರದೇಶ ಭಾರತದ ಅವಿಭಾಜ್ಯ ಭಾಗವಾಗಿದೆ. ಹೆಸರು ಬದಲಾಯಿಸುವದರಿಂದ ವಸ್ತುಸ್ಥಿತಿ ಬದಲಾಗುವುದಿಲ್ಲ. ಸ್ಥಳಗಳ ಹೆಸರು ಬದಲಾಯಿಸಿರುವ ರೀತಿ ಸಹಿಸಿಕೊಳ್ಳಲಾಗುವುದಿಲ್ಲ’, ಎಂದು ಹೇಳಿದೆ. ಚೀನಾ ಸತತವಾಗಿ ಅರುಣಾಚಲ ಪ್ರದೇಶ ಟಿಬೆಟಿನ ಭಾಗವಾಗಿರುವುದಾಗಿ ಹಕ್ಕು ಸಾಧಿಸುತ್ತಿದೆ. ಟಿಬೆಟ್ ಮೇಲೆ ಪ್ರಸ್ತುತ ಚೀನಾದ ನಿಯಂತ್ರಣವಿದೆ.