ವಿಶ್ವವಿಖ್ಯಾತ ನಾಲಂದಾ ವಿಶ್ವವಿದ್ಯಾಲಯ ಈಗ ಸಾರ್ವಜನಿಕರಿಗಾಗಿ ಆಕರ್ಷಣೆಯ ಕೇಂದ್ರ !

ಪಾಟಲೀಪುತ್ರ : ಬಿಹಾರದ ನಾಲಂದಾ ವಿಶ್ವವಿದ್ಯಾಲಯವು ಜಗತ್ತಿನ ಮೊದಲ ವಿಶ್ವವಿದ್ಯಾಲಯವಾಗಿತ್ತು. ಅದು ಒಂದು ಕಾಲದಲ್ಲಿ ಜ್ಞಾನದ ಅಂತರರಾಷ್ಟ್ರೀಯ ಕೇಂದ್ರವಾಗಿತ್ತು. ಈ ವಿಶ್ವವಿದ್ಯಾಲಯದ ಸ್ಥಾಪನೆಯನ್ನು ಗುಪ್ತರ ರಾಜಮನೆತನದ ಕಾಲದಲ್ಲಿ ೫ನೇ ಶತಕದಲ್ಲಿ ಆಗಿತ್ತು. ಅಲ್ಲಿಗೆ ವಿಶ್ವದಾದ್ಯಂತದಿಂದ ವಿದ್ಯಾರ್ಥಿಗಳು ಜ್ಞಾನಾರ್ಜನೆಗಾಗಿ ಬರುತ್ತಿದ್ದರು. ಕ್ರಿಸ್ತಶಕ ೧೧೯೩ ರಂದು ಇಸ್ಲಾಂ ಆಕ್ರಮಣಕಾರರು ಅದನ್ನು ಧ್ವಂಸಗೊಳಿಸಿದರು. ಈಗ ಅದನ್ನು ಮರಳಿ ಹೊಸ ಸ್ವರೂಪದಲ್ಲಿ ನಿರ್ಮಾಣ ಮಾಡಲಾಗುತ್ತಿದೆ. ಆದ್ದರಿಂದ ವಿಶ್ವವಿದ್ಯಾಲಯದ ಈ ಹೊಸ ರೂಪ ಜನರ ಆಕರ್ಷಣೆಯ ಕೇಂದ್ರವಾಗಿದೆ.

೧. ಪ್ರಾಚೀನ ನಾಲಂದಾ ವಿಶ್ವವಿದ್ಯಾಲಯದ ಪರಿಸರದಲ್ಲಿ ೫೨ ಕೆರೆಗಳು ಇದ್ದವು. ಈ ಕೆರೆಗಳೂ ಕೂಡಾ ನಾಲಂದಾ ವಿಶ್ವವಿದ್ಯಾಲಯದ ಸಮಕಾಲೀನವೆಂದು ತಿಳಿಯಲಾಗುತ್ತಿದೆ. ವಿಶ್ವವಿದ್ಯಾಲಯದ ಆಚಾರ್ಯರು ಮತ್ತು ವಿದ್ಯಾರ್ಥಿಗಳು ಈ ಕೆರೆಯನ್ನು ಉಪಯೋಗಿಸುತ್ತಿದ್ದರು. ಅಲ್ಲದೇ ಅದರ ನೀರನ್ನು ಗ್ರಾಮಸ್ಥರು ದಿನನಿತ್ಯದ ಕೆಲಸಗಳಿಗೆ ಮತ್ತು ಹೊಲಗಳಿಗೆ ನೀರು ಹರಿಸಲು ಉಪಯೋಗಿಸುತ್ತಿದ್ದರು. ಹಿಂದಿನ ಕಾಲದಲ್ಲಿ ಕೆರೆಗಳು ಮಳೆಗಾಲದಲ್ಲಿ ಜಲ ಸಂರಕ್ಷಣೆಯ ಮುಖ್ಯ ಕೇಂದ್ರವಾಗಿತ್ತು.

೨. ಈ ವಿಶ್ವವಿದ್ಯಾಲಯದ ಕೆಲವು ಅವಶೇಷಗಳು ಬಾಕಿ ಉಳಿದಿವೆ. ಈಗಿನ ನಿತೀಶ ಕುಮಾರ ಸರಕಾರವು ಅದರ ಕಾಯಕಲ್ಪ ಮಾಡಲು ನಿರ್ಣಯ ಕೈಗೊಂಡರು ಮತ್ತು ಈಗ ಅದು ಹೊಸ ಸ್ವರೂಪದಲ್ಲಿ ಜ್ಞಾನಾರ್ಜನೆ ನೀಡಲು ಸಜ್ಜಾಗಿದೆ.