‘ಹುಂಡೈ’ನ ತಪ್ಪಿಗಾಗಿ ಕ್ಷಮೆಯಾಚಿಸಿದ ದಕ್ಷಿಣ ಕೊರಿಯಾದ ವಿದೇಶಾಂಗ ಸಚಿವ !

ಕಾಶ್ಮೀರಪ್ರಶ್ನೆಯಲ್ಲಿ ಪಾಕಿಸ್ತಾನಕ್ಕೆ ಬೆಂಬಲ ನೀಡಿದ ಪ್ರಕರಣ

ಭಾರತದಲ್ಲಿರುವ ದೇಶಪ್ರೇಮಿಗಳು ಧ್ವನಿಯೆತ್ತಿದ್ದರಿಂದ ದಕ್ಷಿಣ ಕೊರಿಯಾಗೆ ಭಾರತದೊಂದಿಗೆ ಇರುವ ವ್ಯಾಪಾರ ಸಂಬಂಧ ಹಾಳಾಗಬಾರದು; ಆದ್ದರಿಂದ ಕ್ಷಮೆ ಕೇಳಿದೆ; ಆದರೆ ‘ಹುಂಡೈ’ ಇನ್ನೂ ಕ್ಷಮೆ ಕೇಳಿಲ್ಲ, ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿರಿ ! ಭಾರತೀಯರ ರಾಷ್ಟ್ರಭಾವನೆಗೆ ಗೌರವಿಸದಿರುವ ಇಂತಹ ಕಂಪನಿಗಳ ಮೇಲೆ ಬಹಿಷ್ಕಾರ ಹಾಕಬೇಕು !

ನವ ದೆಹಲಿ – ದಕ್ಷಿಣ ಕೊರಿಯಾದ ಸಂಸ್ಥೆ ‘ಹುಂಡೈ’ಯು ಪಾಕಿಸ್ತಾನದಿಂದ ಫೆಬ್ರವರಿ ೫ ರಂದು ಆಚರಿಸಲಾಗುವ ‘ಕಾಶ್ಮೀರ ಏಕಜುಟತಾ ದಿವಸ’ಗೆ ಪಾಕಿಸ್ತಾನ ಬೆಂಬಲವಾಗಿ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ ಮಾಡಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ದಕ್ಷಿಣ ಕೊರಿಯಾದ ವಿದೇಶಾಂಗ ಸಚಿವರು ಕ್ಷಮೆ ಕೇಳಿದ್ದಾರೆ. ಭಾರತದಲ್ಲಿ ದೊಡ್ಡ ಪ್ರಮಾಣದಲ್ಲಿ ಹುಂಡೈಯನ್ನು ವಿರೋಧಿಸಲಾಗುತ್ತಿದೆ. ಆದ್ದರಿಂದ ದಕ್ಷಿಣ ಕೊರಿಯಾದ ವಿದೇಶಾಂಗ ಸಚಿವ ಚುಂಗ ಯುಯಿ-ಯೋಂಗರವರು ಭಾರತದ ವಿದೇಶಾಂಗ ಸಚಿವ ಎಸ್. ಜೈಶಂಕರರವರಿಗೆ ಕರೆ ಮಾಡಿ ಕ್ಷಮೆ ಕೇಳಿದರು.

ಭಾರತ ಸರಕಾರವು ಈ ವಿಷಯದಲ್ಲಿ ದಕ್ಷಿಣ ಕೊರಿಯಾದ ರಾಯಭಾರಿಯವರನ್ನು ಪ್ರಶ್ನಿಸಿ ಅವರ ಹೇಳಿಕೆಗೆ ಅಸಮಧಾನವನ್ನು ಸೂಚಿಸಿತ್ತು. ಸೆಊಲ್‌ನ ಭಾರತೀಯ ರಾಯಭಾರಿಗಳೂ ಕೂಡ ಇದೇ ಸಂದೇಶವನ್ನು ದಕ್ಷಿಣ ಕೋರಿಯಾ ಸರಕಾರಕ್ಕೆ ನೀಡಿತ್ತು.

‘ಹುಂಡೈ’ನ ವಿರೋಧವಾದ ಬಳಿಕ ಈ ಕಂಪನಿಯು ಈ ಪ್ರಕರಣದಲ್ಲಿ ವಿಷಾದ ವ್ಯಕ್ತ ಪಡಿಸಿದ ಸಂದೇಶವು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರ ಮಾಡಿತ್ತು; ಆದರೆ ನೇರವಾಗಿ ಕ್ಷಮೆ ಕೇಳಲಿಲ್ಲ.