ಭೂತಾನ ಪ್ರದೇಶದಲ್ಲಿ ಚೀನಾದಿಂದ ಗ್ರಾಮದ ನಿರ್ಮಾಣ !

ಭೂತಾನ ಪ್ರದೇಶವನ್ನು ಸೈನಿಕರ ಚಟುವಟಿಕೆಗಳಿಗೆ ಉಪಯೋಗಿಸುವ ಚೀನಾದ ಹೊಸ ಕುತಂತ್ರ !

ಭೂತಾನ ಪ್ರದೇಶದಲ್ಲಿ ಅನಧಿಕೃತ ಕಟ್ಟಡಗಳನ್ನು ನಿರ್ಮಿಸಿ ಅಲ್ಲಿ ಚೀನಿ ಸೈನಿಕರನ್ನು ನುಸುಳಿಸುವುದು ಮತ್ತು ತನ್ಮೂಲಕ ಭಾರತದ ಮೇಲೆ ಒತ್ತಡ ಹೇರುವುದು ಚೀನಾದ ಪಿತೂರಿಯಾಗಿದೆ. ಈ ಪಿತೂರಿಯನ್ನು ವಿಫಲಗೊಳಿಸಲು ಈಗ ಭಾರತವು ಆಕ್ರಮಣಕಾರಿ ನೀತಿಯನ್ನು ಅವಲಂಬಿಸುವುದು ಆವಶ್ಯಕವಾಗಿದೆ !- ಸಂಪಾದಕರು 

ನವದೆಹಲಿ – ಭೂತಾನ ಪ್ರದೇಶದಲ್ಲಿ ಚೀನಾದಿಂದ ಗ್ರಾಮಗಳನ್ನು ನಿರ್ಮಾಣ ಮಾಡುತ್ತಿದೆ. ಈ ಗ್ರಾಮ ಸೈನಿಕರಿಗಾಗಿ ಮತ್ತು ನಾಗರಿಕರಿಗೆ ವಾಸ್ತವ್ಯಕ್ಕೆ ಅನುಕೂಲವಾಗಬೇಕು ಎಂದು ನಿರ್ಮಿಸುತ್ತಿರುವ ಸುದ್ದಿಯಿದೆ. ಭಾರತ, ಚೀನಾ ಮತ್ತು ಭೂತಾನ ಗಡಿಯು ಎಲ್ಲಿ ಸೇರುತ್ತದೆಯೋ ಅಲ್ಲಿಂದ 30 ಕಿ.ಮೀ ಅಂತರದಲ್ಲಿ ಚೀನಾದಿಂದ ಈ ಅನಧಿಕೃತ ಕಟ್ಟಡ ನಿರ್ಮಿಸುತ್ತಿದೆ. ಭಾರತೀಯ ರಕ್ಷಣಾ ಇಲಾಖೆಯು ಉಪಗ್ರಹದ ಮಾಧ್ಯಮದಿಂದ ತೆಗೆದ ಛಾಯಾಚಿತ್ರದಿಂದ ಇದು ಬಯಲಾಗಿದೆ. 2017 ರಲ್ಲಿ ಡೋಕ್ಲಾಮ್‍ನಲ್ಲಿ ಭಾರತೀಯ ಸೈನಿಕರು ಮತ್ತು ಚೀನಾದ ಸೈನಿಕರ ನಡುವೆ ಸುಮಾರು 70 ದಿನ ಘರ್ಷಣೆ ನಡೆದಿತ್ತು. ತದನಂತರ ಡೊಕ್ಲಾಮ್ ಪಟ್ಟಿ ಹೆಸರುವಾಸಿಯಾಗಿತ್ತು. ಭಾರತೀಯ ಸೈನಿಕರು ನೀಡಿದ ತಕ್ಕ ಪ್ರತ್ಯುತ್ತರದಿಂದ ಚೀನಾದ ಸೈನಿಕರು ಅಲ್ಲಿಂದ ಹಿಂದೆ ಸರಿದಿದ್ದರು.

1. 2017 ರಲ್ಲಿ ಚೀನಾವು ಡೊಕ್ಲಾಮ್‍ನಲ್ಲಿ ತನ್ನ ಸೈನಿಕರಿಗೆ ಮೂಲಭೂತ ಸೌಕರ್ಯವನ್ನು ಒದಗಿಸುವ ಕಾರ್ಯವನ್ನು ಕೈಗೆತ್ತಿಕೊಂಡಿತ್ತು. ಅದಕ್ಕೆ ಭಾರತ ಆಕ್ಷೇಪಿಸಿತ್ತು.

2.`ಇದು ವಿವಾದಿತ ಪ್ರದೇಶವಾಗಿರುವುದರಿಂದ ಚೀನಾ ಅಲ್ಲಿ ರಸ್ತೆಯನ್ನು ಅಭಿವೃದ್ಧಿ ಪಡಿಸುವ ಕೆಲಸವನ್ನು ಕೈಗೆತ್ತಿಕೊಳ್ಳಬಾರದು’, ಎಂದು ಭಾರತ ಪ್ರತಿಪಾದಿಸಿತ್ತು. ಇದರಿಂದ ಎರಡೂ ದೇಶಗಳ ನಡುವೆ ಘರ್ಷಣೆ ನಡೆದಿತ್ತು.

3. ಈ ಮೊದಲೂ ಭೂತಾನ ಅನೇಕ ಸಲ ತನ್ನ ಭೂಮಿಯಲ್ಲಿ ಚೀನಾದ ನುಸುಳುವುದನ್ನು ಆಕ್ಷೇಪಿಸಿತ್ತು.