ಭಾರತ ‘ಹಿಂದೂ ರಾಷ್ಟ್ರ’ವಾದರೆ, ಇತರ ೧೫ ರಾಷ್ಟ್ರಗಳು ‘ಹಿಂದೂ ರಾಷ್ಟ್ರ’ವಾಗಲು ಸಿದ್ಧ ! – ಪುರಿ ಪೀಠದ ಶಂಕರಾಚಾರ್ಯ ಸ್ವಾಮಿ ನಿಶ್ಚಲಾನಂದ ಸರಸ್ವತಿ

ಕೋಲಕಾತಾ – ಪುರಿ ಪೀಠದ ಶಂಕರಾಚಾರ್ಯ ಸ್ವಾಮಿ ನಿಶ್ಚಲಾನಂದ ಸರಸ್ವತಿ ಇವರು ಮತ್ತೊಮ್ಮೆ ಹಿಂದೂ ರಾಷ್ಟ್ರವನ್ನು ಪುನರ್ ಉಚ್ಚಾರಣೆ ಮಾಡಿದ್ದಾರೆ. ಅವರು, ೫೨ ದೇಶಗಳ ಹಿರಿಯ ಪ್ರತಿನಿಧಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಇತ್ತಿಚೆಗೆ ಚರ್ಚೆ ನಡೆಸಿದ್ದಾರೆ. ಅದರಲ್ಲಿ ‘ಭಾರತ ‘ಹಿಂದು ರಾಷ್ಟ್ರ’ವೆಂದು ಘೋಷಿಸಿದರೆ, ಆಗ ನಾವು ಕೂಡ ಆ ದಿಕ್ಕಿನತ್ತ ಹೆಜ್ಜೆ ಇಡುವೆವು’, ಎಂದು ಮಾರಿಷಸ್ ಮತ್ತು ಭೂತಾನ ಸಹಿತ ೧೫ ದೇಶಗಳ ಪ್ರತಿನಿಧಿಗಳು ಸ್ಪಷ್ಟವಾಗಿ ಹೇಳಿದ್ದಾರೆ.

೧. ಮಕರ ಸಂಕ್ರಾಂತಿಯ ಶುಭದಿನದಂದು ಶಂಕರಾಚಾರ್ಯ ಸ್ವಾಮಿ ನಿಶ್ಚಲಾನಂದ ಸರಸ್ವತಿ ರಾಜಯೋಗ ಸ್ನಾನಕ್ಕಾಗಿ ಗಂಗಾ ಸಾಗರ ಮೇಳದಲ್ಲಿ ಭಾಗವಹಿಸಿದ್ದರು. ಶಂಕರಾಚಾರ್ಯರ ಇವರು ನೇಪಾಳದ ಬಗ್ಗೆ ಮಾತನಾಡುತ್ತಾ, ಈಗ ನೇಪಾಳ ಚೀನಾದ ಕೈಗೊಂಬೆಯಾಗಿದೆ, ಆ ದಿಕ್ಕಿನತ್ತ ನಮ್ಮ ವಿದೇಶಿ ಧೋರಣೆಯಲ್ಲಿ ಬದಲಾವಣೆ ಮಾಡುವುದು ಅವಶ್ಯಕವಾಗಿದೆ ಎಂದು ಹೇಳಿದರು.

೨. ಬಾಂಗ್ಲಾದೇಶದಲ್ಲಿ ಹಿಂದೂ ದೇವಸ್ಥಾನಗಳು ಮತ್ತು ದೇವತೆಗಳ ಮೂರ್ತಿಯನ್ನು ಧ್ವಂಸ ಮಾಡುತ್ತಿರುವುದುರ ಬಗ್ಗೆ ಶಂಕರಾಚಾರ್ಯರು ಅಸಮಧಾನ ವ್ಯಕ್ತಪಡಿಸಿದರು. ಅವರು, “ನಾವು ಹಿಂದೂ ದೇವತೆಗಳ ಅವಮಾನ ಸಹಿಸಿಕೊಳ್ಳುವುದಿಲ್ಲ. ಭಾರತದಲ್ಲಿ ಅಲ್ಪಸಂಖ್ಯಾತರು ಆರಾಮವಾಗಿದ್ದರೆ, ಬಾಂಗ್ಲಾದೇಶದಲ್ಲಿನ ಹಿಂದೂಗಳು ಆರಾಮವಾಗಿ ಏಕೆ ಇರಲು ಸಾಧ್ಯವಿಲ್ಲ ?” ಎಂದು ಕೇಳಿದ್ದಾರೆ.