ಭಾರತ ಸರಕಾರದ ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಟ್ವಿಟರ್ ಖಾತೆ ಹ್ಯಾಕ !

  • ಹ್ಯಾಕರ್ಸ್‌ನಿಂದ (ಅಯ್ಯೋಗ್ಯ ವ್ಯಕ್ತಿಗಳಿಂದ) ಖಾತೆಯ ಹೆಸರು ಮತ್ತು ‘ಪ್ರೊಫೈಲ್ ಫೋಟೋ’ದಲ್ಲಿ ಬದಲಾವಣೆ !

  • ಖಾತೆ ಪುನರಾರಂಭ ಆಗಿರುವುದರ ಬಗ್ಗೆ ಸಚಿವಾಲಯದಿಂದ ಮಾಹಿತಿ

‘ಟ್ವಿಟರ್’ ನಂತಹ ಸಾಮಾಜಿಕ ಮಾಧ್ಯಮಗಳು ಯಾವ ಸಚಿವಾಲಯದ ಅಡಿಯಲ್ಲಿ ಬರುತ್ತವೆಯೋ, ಅದೇ ಸಚಿವಾಲಯದ ಟ್ವಿಟರ್ ಖಾತೆಯೇ ಹ್ಯಾಕ್ ಆಗುತ್ತೆ(ನಿಯಂತ್ರಿಸಲಾಗುತ್ತದೆ), ಅಲ್ಲಿ ಸಾಮಾನ್ಯ ನಾಗರಿಕರ ಖಾತೆಯ ಸುರಕ್ಷೆ ಎಂದಾದರೂ ಮಾಡಲು ಸಾಧ್ಯವೇ ?

ನವದೆಹಲಿ – ಭಾರತದ ಕೇಂದ್ರೀಯ ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ‘ಟ್ವಿಟರ್’ ಖಾತೆ ಜನೆವರಿ ೧೨ ರಂದು ‘ಹ್ಯಾಕ್’ ಆಗಿರುವ ಘಟನೆ ಬೆಳಕಿಗೆ ಬಂದಿದೆ. ಹ್ಯಾಕರ್ಸ್‌ನಿಂದ ಖಾತೆಯ ಹೆಸರು ಮತ್ತು ‘ಪ್ರೊಫೈಲ್ ಫೋಟೊ’ ಬದಲಾವಣೆ ಮಾಡಿತ್ತು.

ಹ್ಯಾಕರ್ಸ್ ಪ್ರೊಫೈಲ್‌ನಲ್ಲಿ ‘ಎಲ್ಲೆನ್ ಮಸ್ಕ್’ ಹೆಸರಿನ ಜೊತೆಗೆ ಮೀನಿನ ಚಿತ್ರ ಹಾಕಿದ್ದರು. ಇದು ಗಮನಕ್ಕೆ ಬಂದ ಕೂಡಲೇ ಖಾತೆ ಪುನರ್ ಆರಂಭಿಸಲಾಯಿತು. ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ‘ಟ್ವೀಟ್’ ಮಾಡಿ ಈ ಘಟನೆಯ ಮಾಹಿತಿ ನೀಡಿದೆ. ಕಳೆದ ತಿಂಗಳಿನಲ್ಲಿ ಅಂದರೆ ಡಿಸೆಂಬರ್ ೨೦೨೧ ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ‘ಟ್ವಿಟ್ಟರ್’ ಖಾತೆ ಕೂಡ ಹ್ಯಾಕ್ ಮಾಡಲಾಗಿತ್ತು.