ಭಾರತ ಸರಕಾರದ ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಟ್ವಿಟರ್ ಖಾತೆ ಹ್ಯಾಕ !

ಭಾರತದ ಕೇಂದ್ರೀಯ ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ‘ಟ್ವಿಟರ್’ ಖಾತೆ ಜನೆವರಿ ೧೨ ರಂದು ‘ಹ್ಯಾಕ್’ ಆಗಿರುವ ಘಟನೆ ಬೆಳಕಿಗೆ ಬಂದಿದೆ. ಹ್ಯಾಕರ್ಸ್‌ನಿಂದ ಖಾತೆಯ ಹೆಸರು ಮತ್ತು ‘ಪ್ರೊಫೈಲ್ ಫೋಟೊ’ ಬದಲಾವಣೆ ಮಾಡಿತ್ತು.

ಭಾರತೀಯ ಸಮುದ್ರಗಡಿಯಲ್ಲಿ ನುಗ್ಗಿರುವ ಪಾಕಿಸ್ತಾನದ ನೌಕೆಯನ್ನು ದಡ ಭದ್ರತಾ ದಳದವರು ವಶಕ್ಕೆ ಪಡೆದರು !

ಭಾರತೀಯ ಗಡಿ ಭದ್ರತಾ ದಳವು ಗುಜರಾತಿನ ಅರಬ್ಬಿ ಸಮುದ್ರದ ಭಾರತೀಯ ಸಮುದ್ರ ಗಡಿಯಲ್ಲಿ ನುಗ್ಗಿದ `ಯಾಸೀನ್’ ಎಂಬ ನೌಕೆಯನ್ನು ವಶಪಡಿಸಿಕೊಂಡಿದ್ದಾರೆ. ಇದರಲ್ಲಿನ 10 ಜನರನ್ನು ಬಂಧಿಸಲಾಗಿದೆ.

ಚೀನಾ ಅರುಣಾಚಲ ಪ್ರದೇಶದ ೧೫ ಸ್ಥಳಗಳ ಹೆಸರನ್ನು ಬದಲಿಸಿದೆ !

ಚೀನಾವು ಅರುಣಾಚಲ ಪ್ರದೇಶದಲ್ಲಿನ ೧೫ ಸ್ಥಳಗಳ ಹೆಸರನ್ನು ಬದಲಾಯಿಸಿದೆ. ಇದನ್ನು ಭಾರತ ತೀವ್ರವಾಗಿ ಪ್ರತಿಕ್ರಿಯೆ ವ್ಯಕ್ತಪಡಿಸಿ ‘ಅರುಣಾಚಲ ಪ್ರದೇಶ ಭಾರತದ ಅವಿಭಾಜ್ಯ ಭಾಗವಾಗಿದೆ. ಹೆಸರು ಬದಲಾಯಿಸುವದರಿಂದ ವಸ್ತುಸ್ಥಿತಿ ಬದಲಾಗುವುದಿಲ್ಲ.

‘ಭಾರತವನ್ನು ಎಂದಿಗೂ ಹಿಂದೂ ರಾಷ್ಟ್ರವಾಗಲು ಬಿಡುವುದಿಲ್ಲ !’(ವಂತೆ)

ನಾನು ಜೀವಂತ ಇರುವ ವರೆಗೂ ಭಾರತವನ್ನು ಎಂದಿಗೂ ಹಿಂದೂ ರಾಷ್ಟ್ರವಾಗಲು ಬಿಡುವುದಿಲ್ಲ, ಎಂದು ತೆಲಂಗಾಣಾದ ಕಾಂಗ್ರೆಸ್ ನಾಯಕ ರಶೀದ್ ಖಾನ್ ಇವರು ಬೆದರಿಕೆಯೊಡ್ಡಿದರು.

ಚೀನಾದ ಪ್ರತಿಯೊಬ್ಬ ನಾಗರಿಕನ ಮೇಲೆ 6 ಲಕ್ಷ 80 ಸಾವಿರದ 696 ರೂಪಾಯಿಯಷ್ಟು ಸಾಲ

ಚೀನಾದ ಪ್ರತಿಯೊಬ್ಬ ವ್ಯಕ್ತಿಯ ಮೇಲೆ 6 ಲಕ್ಷ 80 ಸಾವಿರದ 696 ರೂಪಾಯಿಯಷ್ಟು ಸಾಲವಿದೆ. ಚೀನಾದ ಜನಸಂಖ್ಯೆ 144 ಕೋಟಿ 47 ಲಕ್ಷ ಇದೆ. ಚೀನಾ ಪ್ರಗತಿ ಮಾಡಿದೆ, ಎಂದು ಹೇಳಲಾಗುತ್ತಿದ್ದರೂ, ಅದು ದೊಡ್ಡ ಪ್ರಮಾಣದಲ್ಲಿ ವಿದೇಶಿ ಸಾಲ ಪಡೆದಿದೆ.

ದೇಶದಲ್ಲಿನ ಪ್ರತಿಯೊಬ್ಬ ನಾಗರೀಕರ ಮೇಲೆ 32 ಸಾವಿರ ರೂಪಾಯಿಗಳ ವಿದೇಶಿ ಸಾಲ !

2021 ರಲ್ಲಿ ದೇಶದ ಪ್ರತಿಯೊಬ್ಬ ನಾಗರಿಕನ ಮೇಲೆ ವಿದೇಶಿ ಸಾಲವು ಹೆಚ್ಚಾಗಿ 32 ಸಾವಿರ ರೂಪಾಯಿಗಳು ಆಗಿವೆ. 2021ರಲ್ಲಿ ಭಾರತದ ಮೇಲೆ 43 ಲಕ್ಷ 32 ಸಾವಿರ ಕೋಟಿಗಳ ವಿದೇಶಿ ಸಾಲವಿದೆ. ಈ ರೀತಿಯಲ್ಲಿ ಒಟ್ಟು ಸಾಲವು 147 ಲಕ್ಷ ಕೋಟಿ ರೂಪಾಯಿಗಳಷ್ಟು ಆಗಿದೆ.

ನೇಪಾಳದ ಲುಂಬಿನೀ ನಗರದವರೆಗೂ ರೈಲ್ವೇ ಹಾಗೂ ರಸ್ತೆ ನಿರ್ಮಿಸಲಿರುವ ಚೀನಾ !

ಇಂತಹ ಘಟನೆಗಳಿಂದ ಭಾರತದ ವಿದೇಶಾಂಗ ನೀತಿಯು ಸತತವಾಗಿ ಸೋಲುತ್ತಿದೆ ಎಂದು ಸಿದ್ಧವಾಗುತ್ತದೆ. ಚೀನಾವು ನೆರೆ ರಾಷ್ಟ್ರಗಳನ್ನು ತನ್ನ ಹಿಡಿತಕ್ಕೆ ತೆಗೆದುಕೊಳ್ಳುತ್ತಿರುವಾಗ ಭಾರತವು ಮತ್ತಷ್ಟು ಆಕ್ರಮಕವಾಗುವುದಿಲ್ಲ, ಎಂಬುದು ಚಿಂತಾಜನಕವಾಗಿದೆ !

ಧರ್ಮದ ಆಧಾರದಲ್ಲಾದ ಭಾರತದ ವಿಭಜನೆಯು ಐತಿಹಾಸಿಕ ತಪ್ಪಾಗಿದೆ ! – ರಕ್ಷಣಾಮಂತ್ರಿ ರಾಜನಾಥ ಸಿಂಗ್

1971 ರ ಯುದ್ಧವು ಧರ್ಮದ ಆಧಾರದಲ್ಲಾದ ಭಾರತದ ವಿಭಜನೆಯನ್ನು ಐತಿಹಾಸಿಕ ತಪ್ಪು, ಎಂಬುದನ್ನು ಹೇಳುತ್ತದೆ. ಪಾಕಿಸ್ತಾನವು ಒಂದು ಧರ್ಮದ ಹೆಸರಿನಲ್ಲಿ ಜನಿಸಿದೆ; ಆದರೆ ಅದನ್ನು ತಡೆಯಲು ಸಾಧ್ಯವಾಗಲಿಲ್ಲ, ಎಂದು ರಕ್ಷಣಾ ಮಂತ್ರಿ ರಾಜನಾಥ ಸಿಂಗ್ ರವರು ಹೇಳಿಕೆ ನೀಡಿದ್ದಾರೆ.

ಸಿಂಧ ಹಾಗೂ ಬಲುಚಿಸ್ತಾನವನ್ನು ಪಾಕನಿಂದ ಸ್ವಾತಂತ್ರ‍್ಯಗೊಳಿಸಿ !

ಸಂಯುಕ್ತ ರಾಷ್ಟ್ರದಲ್ಲಿ ಪಾಕನ ರಾಜಕೀಯ ಪಕ್ಷ ‘ಮುತ್ತಾಹಿದಾ ಕೌಮೀ ಮೂವಮೆಂಟ’ನ ಅಧ್ಯಕ್ಷರಾದ ಅಲ್ತಾಫ ಹುಸೇನರ ಬೇಡಿಕೆ

೪೦ ವರ್ಷಗಳ ಹಿಂದೆ ಕಳ್ಳತನ ಮಾಡಿದ್ದ ಶ್ರೀ ಯೋಗಿನಿ ದೇವಿಯ ಪ್ರಾಚೀನ ಮೂರ್ತಿಯನ್ನು ಬ್ರಿಟನ್ ಭಾರತಕ್ಕೆ ಹಿಂತಿರುಗಿಸಲಿದೆ !

ಉತ್ತರಪ್ರದೇಶದ ಬಾಂದಾ ಜಿಲ್ಲೆಯ ಲೋಕಾರಿ ಗ್ರಾಮದ ಮಂದಿರದಿಂದ ೪೦ ವರ್ಷಗಳ ಹಿಂದೆ ಕಳ್ಳತನ ಮಾಡಿದ್ದ ಶ್ರೀ ಯೋಗಿನಿ ದೇವಿಯ ಪ್ರಾಚೀನ ಮೂರ್ತಿಯನ್ನು ಬ್ರಿಟನ್ ಭಾರತಕ್ಕೆ ಹಿಂತಿರುಗಿಸಲಿದೆ.