ಪಾಕಿಸ್ತಾನಿ ಭಯೋತ್ಪಾದಕ ಅಬ್ದುಲ ರಹಮಾನ ಮಕ್ಕಿಯನ್ನು ‘ಅಂತರರಾಷ್ಟ್ರೀಯ ಭಯೋತ್ಪಾದಕ’ ಎಂದು ಘೋಷಿಸುವಂತೆ ಭಾರತದ ಪ್ರಸ್ತಾವನೆಗೆ ಚೀನಾದ ಅಡ್ಡಿ

ವಿಶ್ವಸಂಸ್ಥೆ – ಪಾಕಿಸ್ತಾನಿ ಭಯೋತ್ಪಾದಕ ಅಬ್ದುಲ ರಹಮಾನ ಮಕ್ಕಿಯನ್ನು ‘ಅಂತರರಾಷ್ಟ್ರೀಯ ಭಯೋತ್ಪಾದಕ’ ಎಂದು ಘೋಷಿಸುವ ಪ್ರಸ್ತಾವನೆಗೆ ಚೀನಾವು ವಿಶ್ವಸಂಸ್ಥೆಯ ಸುರಕ್ಷಾ ಪರಿಷತ್ತಿನಲ್ಲಿ ಅಡ್ಡಿ ಪಡಿಸಿತು. ಭಾರತ ಮತ್ತು ಅಮೇರಿಕಾ ಜಂಟಿಯಾಗಿ ಈ ಪ್ರಸ್ತಾವನೆಯನ್ನು ಮಂಡಿಸಿದ್ದವು.

ಮಕ್ಕಿ ಮುಂಬಯಿ ಮೇಲೆ ೨೬/೧೧ ರ ಭಯೋತ್ಪಾದಕ ಆಕ್ರಮಣದ ಸೂತ್ರಧಾರ ಹಾಫೀಜ ಸಯೀದನ ಅಳಿಯನಾಗಿದ್ದಾನೆ. ಈ ಹಿಂದೆಯೂ ಚೀನಾ ಅನೇಕ ಬಾರಿ ಈ ರೀತಿ ಅಡ್ಡಿ ವ್ಯಕ್ತಪಡಿಸಿತ್ತು. ಪಾಕಿಸ್ಥಾನದಲ್ಲಿರುವ ಜೈಶ-ಎ-ಮಹಮ್ಮದ ಈ ಜಿಹಾದಿ ಭಯೋತ್ಪಾದಕ ಸಂಘಟನೆಯ ಮುಖಂಡ ಮಸೂದ ಅಜಹರನನ್ನು ‘ಅಂತರರಾಷ್ಟ್ರೀಯ ಭಯೋತ್ಪಾದಕ’ ಎಂದು ಘೋಷಿಸುವಂತೆ ಭಾರತ ಮಾಡಿದ ಪ್ರಯತ್ನಗಳಿಗೆ ೨೦೧೯ ರಲ್ಲಿ ಸುಮಾರ ೧೦ ವರ್ಷಗಳ ಬಳಿಕ ಜಯ ದೊರೆಯಿತು. ಇದಕ್ಕೂ ಆಗ ಜೀನಾ ವಿರೋದ ವ್ಯಕ್ತಪಡಿಸಿತ್ತು.

ಅಮೇರಿಕಾ, ಬ್ರಿಟನ, ಚೀನಾ, ಫ್ರಾನ್ಸ ಮತ್ತು ರಷ್ಯಾ ಈ ೫ ದೇಶಗಳು ವಿಶ್ವಸಂಸ್ಥೆಯ ಸುರಕ್ಷಾ ಪರಿಷತ್ತಿನಲ್ಲಿ ಖಾಯಂ ಸದಸ್ಯರಾಗಿದ್ದಾರೆ. ಅವರ ಬಳಿ ‘ವೀಟೋ’ ಅಧಿಕಾರವಿದೆ, ಅಂದರೆ ಈ ದೇಶಗಳಲ್ಲಿ ಒಂದೇ ಒಂದು ದೇಶವು ಯಾವುದಾದರೂ ಪ್ರಸ್ತಾವನೆಯ ವಿರುದ್ಧ ಮತದಾನ ಮಾಡಿದರೆ, ಆ ಪ್ರಸ್ತಾವನೆಯೇ ಬಿದ್ದು ಹೋಗುತ್ತದೆ. (ಈ ನಿಯಮವೇ ಬದಲಾಯಿಸಲು ಭಾರತವು ವಿಶ್ವಸಂಸ್ಥೆಯ ಮೇಲೆ ಒತ್ತಡ ಹೇರಿ ಚೀನಾಕ್ಕೆ ತಕ್ಕ ಪಾಠ ಕಲಿಸಬೇಕು !- ಸಂಪಾದಕರು)

ಸಂಪಾದಕೀಯ ನಿಲುವು

ಭಯೋತ್ಪಾದನೆಯನ್ನು ಬಹಿರಂಗವಾಗಿ ಬೆಂಬಲಿಸುವ ಚೀನಾಕ್ಕೆ ಈಗ ಜಗತ್ತಿನ ಎಲ್ಲ ದೇಶಗಳು ಸಂಘಟಿತರಾಗಿ ಒಬ್ಬಂಟಿಯನ್ನಾಗಿ ಮಾಡಬೇಕು !