ಕುವೈತ್‌ನ ೫೦ ಸಂಸದರಲ್ಲಿ ೩೦ ಸಂಸದರು ಭಾರತದ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯಿಸಿದ್ದಾರೆ

ಕುವೈತ್ ಸಿಟಿ (ಕುವೈತ್) – ನೂಪುರ ಶರ್ಮಾ ಪ್ರಕರಣದಲ್ಲಿ ಕುವೈತ್‌ನ ೩೦ ಸಂಸದರು ಭಾರತದ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಕುವೈತ್ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ. ಇದಕ್ಕಾಗಿ ಭಾರತದ ಮೇಲೆ ಎಲ್ಲಾ ರೀತಿಯ ಒತ್ತಡವನ್ನು ನಿರ್ಮಾಣಮಾಡಲು ಆಗ್ರಹಿಸಿದ್ದಾರೆ. ಈ ಸಂಸದರು ಭಾರತದಲ್ಲಿನ ಮುಸಲ್ಮಾನರನ್ನು ತಮ್ಮ ಸಹೋದರರೆಂದು ಸಂಬೋಧಿಸಿ ಈ ಬೇಡಿಕೆ ಇಟ್ಟಿದ್ದಾರೆ. ಕುವೈತಿನ ಸಂಸತ್ತಿನಲ್ಲಿ ಒಟ್ಟು ೫೦ ಸಂಸದರಿದ್ದಾರೆ.

ಈ ಸಂಸದರು ಭಾರತದಲ್ಲಿ ಮುಸಲ್ಮಾನರ ಮೇಲಾಗುವ ದಾಳಿಗಳು, ಅವರ ವಿರುದ್ಧ ಪೊಲೀಸರಿಂದಾಗುವ ಕಾರ್ಯಾಚರಣೆಗಳನ್ನು ನಿಷೇಧಿಸಿದ್ದಾರೆ. ಅವರು ಭಾರತದಲ್ಲಿರುವ ಮುಸಲ್ಮಾನರಿಗೆ ಸಂರಕ್ಷಣೆ ನೀಡಬೇಕೆಂದೂ ಒತ್ತಾಯಿಸಿದ್ದಾರೆ. ಇದರೊಂದಿಗೆ ಕುವೈತ್ ಸರ್ಕಾರ ಹಾಗೂ ಇತರ ದೇಶಗಳು ಭಾರತದ ಮೇಲೆ ರಾಜಕೀಯ ಮತ್ತು ಆರ್ಥಿಕ ಒತ್ತಡವನ್ನು ಹೇರಬೇಕೆಂದು ಅವರು ಕರೆ ನೀಡಿದರು.

ಸಂಪಾದಕೀಯ ನಿಲುವು

* ಇಸ್ಲಾಮಿಕ್ ದೇಶಗಳಲ್ಲಿನ ಹಿಂದೂಗಳ ಮೇಲಿನ ದಾಳಿಗಳ ಬಗ್ಗೆ ಭಾರತದಲ್ಲಿನ ಎಷ್ಟು ಹಿಂದೂ ಸಂಸದರು ಭಾರತ ಸರ್ಕಾರದ ಬಳಿ ಈ ರೀತಿಯಲ್ಲಿ ಬೇಡಿಕೆಗಳನ್ನಿಡುತ್ತಾರೆ?