ಇಂಟರ್‌ನೆಟ್‌ನ ಅತಿ ಬಳಕೆಯಿಂದಾಗಿ ‘ನೆಟ್‌ಬ್ರೇನ’ ಎಂಬ ಈ ಹೊಸ ಕಾಯಿಲೆಯಿಂದ ಪೀಡಿತರಾದ ಯುವಕರು !

ಯುವಕರೇ, ಎಚ್ಚರ ! ಇಂಟರ್‌ನೆಟ್‌ನ ಅತಿ ಬಳಕೆ ತಡೆಗಟ್ಟಿ !

‘ಸದ  ಎಲ್ಲೆಡೆ ಇಂಟರ್‌ನೆಟ್‌ಅನ್ನು ಬಳಸುವ ಪ್ರಮಾಣವು ಎಷ್ಟು ಹೆಚ್ಚಾಗಿದೆ ಎಂದರೆ, ಜನರು ಪರಸ್ಪರ ಭೇಟಿಯಾಗುವ ಪ್ರಮಾಣವು ತುಂಬಾ ಕಡಿಮೆಯಾಗಿದೆ. ಪ್ರತ್ಯಕ್ಷವಾಗಿ ಭೇಟಿಯಾಗುವುದಕ್ಕಿಂತ ಆನ್ಡ್ರಾಇಡ್ ಅಪ್ಲಿಕೇಶನ್, ವಾಟ್ಸಾಪ್, ಇಂತಹ ಮಾಧ್ಯಮಗಳನ್ನು ಬಳಸಿ ಅನೇಕರು ಪರಸ್ಪರ ಸಂಪರ್ಕದಲ್ಲಿರುತ್ತಾರೆ; ಆದರೆ ಎಲ್ಲರಿಗೂ ಪ್ರಿಯವಾದ ಇಂಟರ್‌ನೆಟ್ ಸದ್ಯ ಎಲ್ಲರ ಚಿಂತೆಯ ವಿಷಯವಾಗಿದೆ. ಇಂಟರ್‌ನೆಟ್‌ನ ಅತಿಯಾದ ಬಳಕೆಯಿಂದ ಸಮಾಜದಲ್ಲಿ ಮಾನಸಿಕ ರೋಗಗಳ ಪ್ರಮಾಣವು ಬಹಳಷ್ಟು ಹೆಚ್ಚಿದೆ. ಒಂದು ಸಮೀಕ್ಷೆಗನುಸಾರ ಇಡೀ ಜಗತ್ತಿನಲ್ಲಿ ಸುಮಾರು ೨೦ ಕೋಟಿ ಜನರಿಗೆ ಇಂಟರ್‌ನೆಟ್ ಅನ್ನು ಅನಾವಶ್ಯಕವಾಗಿ ಬಳಸುವ ಕೆಟ್ಟ ಹವ್ಯಾಸವಿದೆ. ಅದರಲ್ಲಿ ಯುವಕರ ಪ್ರಮಾಣವು ಎಲ್ಲಕ್ಕಿಂತಲೂ ಹೆಚ್ಚಿರುವುದರಿಂದ ಅವರು ‘ನೆಟಬ್ರೇನ್’ ಹೆಸರಿನ ಹೊಸ ಕಾಯಿಲೆಯಿಂದ ಬಳಲುತ್ತಿದ್ದಾರೆ. ಈ ವ್ಯಾಧಿಯಿಂದ ವ್ಯಕ್ತಿಯು ಸಮಾಜದಿಂದ ದೂರ ಹೋಗುವುದು ಮತ್ತು ಮಾನಸಿಕ ಸ್ತರದಲ್ಲಿ ಅಸ್ಥಿರನಾಗುವುದು ಮುಂತಾದ ಸಮಸ್ಯೆಗಳು ಹೆಚ್ಚಾಗುತ್ತಿವೆ.’