ಧಾರ್ಮಿಕ ದ್ವೇಷದ ಸಂದರ್ಭದಲ್ಲಿ ದ್ವಿಮುಖ ನೀತಿ ಇರಲು ಸಾಧ್ಯವಿಲ್ಲ ! – ಭಾರತ

ನ್ಯೂಯಾರ್ಕ – ಧಾರ್ಮಿಕ ದ್ವೇಷದ ಸಂದರ್ಭದಲ್ಲಿ ದ್ವಿಮುಖ ನೀತಿ ಇರಲು ಸಾಧ್ಯವಿಲ್ಲ. ಕೇವಲ ‘ಅಬ್ರಾಹಮಿಕ’ (ಅಬ್ರಾಹಂನನ್ನು ಆರಾಧಿಸುವ ಜ್ಯೂ, ಕ್ರೈಸ್ತರು ಮತ್ತು ಇಸ್ಲಾಮ್ ಧರ್ಮ) ಧರ್ಮದ ವಿರುದ್ಧ ಮಾತ್ರವಷ್ಟೇ ಅಲ್ಲ, ಸಿಖ್, ಬೌದ್ಧ ಮತ್ತು ಹಿಂದೂ ಧರ್ಮ ಸಹಿತ ಎಲ್ಲ ಧರ್ಮದ ವಿರುದ್ಧ ದ್ವೇಷ ಮತ್ತು ಹಿಂಸಾಚಾರಗಳನ್ನು ಎದುರಿಸಲು ಅಂತರರಾಷ್ಟ್ರೀಯ ಸಮುದಾಯವು ಒಂದುಗೂಡಿ ಪ್ರಯತ್ನಿಸಬೇಕು. ಭಾರತ ಗಡಿಯಾಚೆಗಿನ ಭಯೋತ್ಪಾದಕತೆಗೆ ಎಲ್ಲಕ್ಕಿಂತ ದೊಡ್ಡ ಬಲಿಯಾಗಿದೆ. ಪ್ರಜಾಪ್ರಭುತ್ವದ ತತ್ವಗಳಿಗೆ ಚಾಲನೆ ನೀಡಿ ಭಯೋತ್ಪಾದಕತೆಯನ್ನು ಎದುರಿಸಲು ನಿಜವಾದ ಅರ್ಥದಿಂದ ಯೋಗದಾನ ನೀಡುವ ಶಿಕ್ಷಣ ಪ್ರಣಾಲಿ ಅಭಿವೃದ್ಧಿ ಪಡಿಸಲು ವಿಶ್ವಸಂಸ್ಥೆಯಲ್ಲಿನ ಭಾರತದ ಸ್ಥಾಯಿ ಪ್ರತಿನಿಧಿ ಟಿ.ಎಸ್. ತಿರುಮೂರ್ತಿಯವರು ಕರೆ ನೀಡಿದರು.

ದ್ವೇಷಯುಕ್ತ ಭಾಷಣವನ್ನು ವಿರೋಧಿಸುವ ಅಂತರರಾಷ್ಟ್ರೀಯ ದಿನದ ಮೊದಲ ವರ್ಧ್ಯಂತ್ಸೂತ್ಸವದ ನಿಮಿತ್ತದಿಂದ ಆಯೋಜಿಸಿರುವ ಕಾರ್ಯಕ್ರಮದಲ್ಲಿ ತಿರುಮೂರ್ತಿ ಮಾತನಾಡುತ್ತಿದ್ದರು. ಅವರು ತಮ್ಮ ಮಾತನ್ನು ಮುಂದುವರಿಸುತ್ತಾ, ನಾವು ಮೇಲಿಂದ ಮೇಲೆ ಇದರ ಮೇಲೆ ಒತ್ತು ನೀಡಿದ್ದೇವೆ, ಭಾರತದ ಬಹುಸಾಂಸ್ಕೃತಿಕ ವೈಶಿಷ್ಟ್ಯದ ಕಾರಣದಿಂದ ನೂರಾರು ವರ್ಷಗಳಿಂದ ಇಲ್ಲಿ ಆಶ್ರಯ ಪಡೆದಿರುವ ಎಲ್ಲ ಜನರಿಗೆ ಅದು ಸುರಕ್ಷಿತ ಸ್ಥಾನವಾಗಿದೆ. ಕಟ್ಟಾವಾದಿಗಳು ಮತ್ತು ಭಯೋತ್ಪಾದನೆಯನ್ನು ಎದುರಿಸುತ್ತಿರುವುದು ನಮ್ಮ ದೇಶದ ಅಂತರ್ಭೂತ ಶಕ್ತಿಯಾಗಿದೆ ಎಂದು ಹೇಳಿದರು.